Advertisement
ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಲೊಕೋಪಯೋಗಿ ಇಲಾಖೆಯ ವ್ಯಾಪ್ತಿ ಸೇರಿದ ಈ ರಸ್ತೆಯ ವಿಸ್ತರಣೆಗಾಗಿ ಈಗಾಗಲೇ 4.20 ಕೋಟಿ ರೂ. ಬಿಡುಗಡೆಯಾಗಿ, ಟೆಂಡರ್ ಕರೆಯಲಾಗಿದೆ. ಆಗಸ್ಟ್ ತಿಂಗಳ ಕೊನೆಗೆ ಈ ಕಾಮಗಾರಿ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಅಲ್ಲಿಯವರೆಗೆ ಈ ಹೊಂಡಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಇಲಾಖೆ ಮುಂದಾಗಬೇಕಿದೆ.
ಈ ರಸ್ತೆಯ ಮತ್ತೂಂದು ಮುಖ್ಯ ಸಮಸ್ಯೆ ಎಂದರೆ ಪುತ್ತೂರಿನಿಂದ ಉಪ್ಪಿನಂಗಡಿ ವರೆಗೆ ಚರಂಡಿಗಳೇ ಸಮರ್ಪಕವಾಗಿಲ್ಲ. ಮಳೆ ಬಂದರೆ ಸಾಕು ರಸ್ತೆಯ ಬದಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿಯೇ ಹರಿಯು ತದೆ. ಚರಂಡಿ ಅವ್ಯವಸ್ಥೆ ಅಲ್ಪ ಸರಿಯಾಗಿರುವ ರಸ್ತೆಯನ್ನೂ ಹಾಳುಗೆಡವುತ್ತಿದೆ. ಮಧ್ಯೆ ಸಮಸ್ಯೆ
ಪುತ್ತೂರು -ಉಪ್ಪಿನಂಗಡಿ ರಸ್ತೆಯಲ್ಲಿ ಪುತ್ತೂರಿನಿಂದ ದಾರಂದಕುಕ್ಕು ರಸ್ತೆಯ ಭಾಗ ಉತ್ತಮವಾಗಿದೆ. ಹಾಗೆಯೇ ಕೋಡಿಂಬಾಡಿಯಿಂದ ಉಪ್ಪಿನಂಗಡಿ ವರೆಗಿನ ರಸ್ತೆಯ ಸ್ಥಿತಿಯೂ ಚೆನ್ನಾಗಿದೆ. ದಾರಂದಕುಕ್ಕುನಿಂದ ಕೋಡಿಂಬಾಡಿ ವರೆಗಿನ ಸುಮಾರು 2 ಕಿ.ಮೀ. ದೂರ ರಸ್ತೆಯಲ್ಲೂ ಸಮರ್ಪಕವಾದ ಚರಂಡಿಗಳಿಲ್ಲ. ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೊಂಡಗಳು ನಿರ್ಮಾಣವಾದ ಪರಿಣಾಮ ಚಾಲಕರಿಗೆ ಇದೀಗ ತೊಂದರೆಯಾಗುತ್ತಿದೆ.
Related Articles
Advertisement
ಒಟ್ಟು ಪುತ್ತೂರು -ಉಪ್ಪಿನಂಗಡಿವರೆ ಗಿನ ಈ ರಸ್ತೆಯ ಎಲ್ಲಿಯೂ ಚರಂಡಿ ಸರಿಯಾಗಿಲ್ಲ. ಡಾಮರು ಅಂಚಿನಲ್ಲಿಯೇ ಮಳೆ ನೀರು ಹರಿದುಹೋಗುತ್ತಿದೆ. ಪರಿಣಾಮ ರಸ್ತೆ ಮತ್ತೆ ಹಾಳಾಗುವ ಸ್ಥಿತಿ ಉಂಟಾಗುತ್ತಿದೆ. ಈಗಾಗಲೇ ಅಭಿವೃದ್ಧಿ ಯಾಗಿರುವ ರಸ್ತೆಯ ಅಂಚಿನಲ್ಲಿ ಮಣ್ಣು ಹಾಕಲಾಗಿದ್ದು, ಇದರಲ್ಲಿಯೇ ವಾಹನಗಳು ಸಂಚರಿಸಿದಾಗ ಅಲ್ಲಿಯೇ ಚರಂಡಿ ನಿರ್ಮಾಣವಾಗುತ್ತಿದೆ. ಇನ್ನಾ ದರೂ ಲೋಕೋಪಯೋಗಿ ಇಲಾಖೆ ಇತ್ತ ಕಡೆಗೆ ದೃಷ್ಟಿ ಹರಿಸಲಿ.
ಕೊಂಡ ಮುಚ್ಚಲು ಕ್ರಮಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಅಭಿವೃದ್ಧಿಯಾಗದೆ ಬಾಕಿಯಾಗಿರುವ ಕಡೆ ರಸ್ತೆಯ ವಿಸ್ತರಣೆಗಾಗಿ ಈಗಾಗಲೇ 4.20 ಕೋಟಿ ರೂ. ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆಗಸ್ಟ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ. ಇದೀಗ ವಾಹನ ಚಾಲಕರಿಗೆ ಸಮಸ್ಯೆಯಾಗಿರುವ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ತತ್‌ಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರಸ್ತೆಯ ಬದಿಯ ಚರಂಡಿ ವ್ಯವಸ್ಥೆಗೆ ಸರಿಪಡಿಸಲು ಕ್ರಮ ಕೈಗೊಳ್ಳುವ ಕೆಲಸಕ್ಕೂ ಅಧಿಕಾರಿಗಳಿಗೆ ಸೂಚಿಸುತ್ತೇನೆ
– ಶಕುಂತಳಾ ಟಿ. ಶೆಟ್ಟಿ
ಶಾಸಕರು, ಪುತ್ತೂರು