Advertisement

Politics: ದೇಶಾದ್ಯಂತ ಜಾತಿವಾರು ಗಣತಿ ಕೈಗೊಳ್ಳಿ: ಪ್ರಿಯಾಂಕಾ

10:34 PM Oct 12, 2023 | Team Udayavani |

ಮಡ್ಲಾ: ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ನ್ಯಾಯ ಒದಗಿಸಲು ದೇಶಾದ್ಯಂತ ಜಾತಿವಾರು ಗಣತಿ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆಗ್ರಹಿಸಿದರು.

Advertisement

ಮಧ್ಯಪ್ರದೇಶದ ಮಡ್ಲಾದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, “ಬಿಹಾರದಲ್ಲಿ ಇತ್ತೀಚೆಗೆ ನಡೆದ ಜಾತಿವಾರು ಗಣತಿ ಪ್ರಕಾರ, ಆ ರಾಜ್ಯದಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯದವರು ಶೇ.84ರಷ್ಟು ಇ¨ªಾರೆ. ಆದರೆ ಉದ್ಯೋಗಗಳಲ್ಲಿ ಅವರ ಸಂಖ್ಯೆ ಕಡಿಮೆ ಇದೆ. ಅದೇ ರೀತಿ ಅವರ ನಿಖರ ಸಂಖ್ಯೆ ತಿಳಿಯಲು ಮತ್ತು ಅವರಿಗೆ ನ್ಯಾಯ ಒದಗಿಸಲು ದೇಶಾದ್ಯಂತ ಜಾತಿಗಣತಿ ನಡೆಸಬೇಕು’ ಎಂದು ಒತ್ತಾಯಿಸಿದರು.

“ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಹಳೆಯ ಪಿಂಚಣಿ ಪದ್ಧತಿ ಜಾರಿ, 1-12ನೇ ತರಗತಿವರೆಗೆ ಉಚಿತ ಶಿಕ್ಷಣ, 1-8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾಸಿಕ 500ರೂ. ಮತ್ತು 9-10ನೇ ವಿದ್ಯಾರ್ಥಿಗಳಿಗೆ 1000ರೂ. ಮತ್ತು 11-12ನೇ ತರಗತಿ ವಿದ್ಯಾರ್ಥಿಗಳಿಗೆ 1500 ರೂ. ಸಹಾಯಧನ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌, ಮಹಿಳೆಯರಿಗೆ ಮಾಸಿಕ 1500ರೂ., 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌, 200 ಯೂನಿಟ್‌ ಮೇಲ್ಪಟ್ಟ ಬಳಕೆಗೆ ಅರ್ಧ ದರ, ರೈತರ ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್‌, ಸಾಲ ಮನ್ನಾ ಮತ್ತು ಜಾತಿಗಣತಿ ನಡೆಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಕಾಂಗ್ರೆಸ್‌ ಜತೆಗೆ ಮೈತ್ರಿಯಿಲ್ಲ:
ಇನ್ನೊಂದೆಡೆ, “ಕಾಂಗ್ರೆಸ್‌ ಜತೆಗೆ ವೈಎಸ್‌ಆರ್‌ ತೆಲಂಗಾಣ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲ. ತೆಲಂಗಾಣದ ಎಲ್ಲಾ 119 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ’ ಎಂದು ಪಕ್ಷದ ಸಂಸ್ಥಾಪಕಿ ವೈ.ಎಸ್‌.ಶರ್ಮಿಳಾ ತಿಳಿಸಿದ್ದಾರೆ.

ಚುನಾವಣೆ ಬಹಿಷ್ಕಾರ:
ಕುಡಿಯುವ ನೀರು, ವಿದ್ಯುತ್‌ ಸೇರಿ ಮೂಲಸೌಕರ್ಯಗಳು ಒದಗಿಸದೇ ಇರುವ ಹಿನ್ನೆಲೆಯಲ್ಲಿ ಛತ್ತೀಸ್‌ಗಡದ ಕೊರ್ಬಾ ಜಿಲ್ಲೆಯ ಸಾರ್ದಿಹ್‌ ಮತ್ತು ಬಗ್ಧರಿದಂಡ್‌ ಗ್ರಾಮದವರು ವಿಧಾನಸಭೆ ಚುನಾವಣೆ ಬಹಿಷ್ಕರಿಸಿದ್ದಾರೆ.

Advertisement

ಫ‌ಲಿತಾಂಶ ದಿನ ಬದಲಿಗೆ ಮನವಿ:
ಪಂಚ ರಾಜ್ಯಗಳ ಚುನಾವಣೆ ಮತ ಎಣಿಕೆ ದಿನಾಂಕ ಮುಂದೂಡುವಂತೆ ಮಿಜೋರಾಂನ ಬಹುತೇಕ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ. ಡಿ.3 ಭಾನುವಾರ ಆಗಿದ್ದು, ಅದು ಕ್ರಿಶ್ಚಿಯನ್ನರಿಗೆ ಪವಿತ್ರ ದಿನವಾಗಿದೆ. ಅಂದು ಚರ್ಚ್‌ನ ಕಾರ್ಯಗಳಲ್ಲಿ ಜನರು ಮಗ್ನರಾಗಿರುತ್ತಾರೆ ಎಂದು ಪಕ್ಷಗಳು ವಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next