Advertisement

ಕ್ಯಾರೆಟ್‌ ಬ್ಯೂಟಿ ಸೀಕ್ರೆಟ್‌

10:36 AM Dec 26, 2019 | mahesh |

ಕ್ಯಾರೆಟ್‌ ಸೇವಿಸಿದರೆ ಕಣ್ಣಿನ, ಚರ್ಮದ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ, ಕ್ಯಾರೆಟ್‌ ಅನ್ನು ತ್ವಚೆಯ ಸೌಂದರ್ಯ ಹೆಚ್ಚಿಸಲೂ ಬಳಸಬಹುದು.

Advertisement

– ಒಣ ಚರ್ಮದ ಆರೈಕೆಗೆ
ಅರ್ಧ ಕ್ಯಾರೆಟ್‌ ಅನ್ನು ನುಣ್ಣಗೆ ರುಬ್ಬಿ, ಅರ್ಧ ಚಮಚ ಜೇನು, ಒಂದು ಚಮಚ ಹಾಲು ಬೆರೆಸಿ, ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ, ತಣ್ಣೀರಿನಿಂದ ಮುಖ ತೊಳೆಯಿರಿ.

-ಎಣ್ಣೆ ಚರ್ಮದವರಿಗೆ
ಕ್ಯಾರೆಟ್‌ ತುರಿಯನ್ನು ಹಿಂಡಿ ಸಂಗ್ರಹಿಸಿದ ರಸಕ್ಕೆ, ಒಂದು ಚಮಚ ಮೊಸರು, ಕಡ್ಲೆಹಿಟ್ಟು ಮತ್ತು ಲಿಂಬೆರಸ ಬೆರೆಸಿ ಪೇಸ್ಟ್‌ ತಯಾರಿಸಿ. ಅದನ್ನು ಮುಖ ಮತ್ತು ಕುತ್ತಿಗೆಗೆ ತೆಳುವಾಗಿ ಲೇಪಿಸಿ, ಅರ್ಧ ಗಂಟೆ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

-ಬಿಸಿಲಿನಿಂದ ಕಪ್ಪಾದ ಚರ್ಮಕ್ಕೆ
ಸಮ ಪ್ರಮಾಣದಲ್ಲಿ ಕ್ಯಾರೆಟ್‌ ರಸ, ಮೊಸರು ಮತ್ತು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿ, ತ್ವಚೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ.

– ಸೂರ್ಯನ ಕಿರಣಗಳಿಂದ ರಕ್ಷಣೆ
ಸಮ ಪ್ರಮಾಣದಲ್ಲಿ ಕ್ಯಾರೆಟ್‌ ರಸ ಮತ್ತು ಗುಲಾಬಿ ನೀರನ್ನು (ರೋಸ್‌ ವಾಟರ್‌) ಮಿಶ್ರಣ ಮಾಡಿ ನೀರನ್ನು ಸಿಂಪಡಿಸುವ ಬಾಟಲಿಯಲ್ಲಿ (ಸ್ಪ್ರೆà) ತುಂಬಿ. ಇದನ್ನು ಮುಖ ಹಾಗೂ ಸೂರ್ಯನಿಗೆ ಒಡ್ಡುವ ದೇಹದ ಎಲ್ಲಾ ಭಾಗಗಳ ಮೇಲೆ ತೆಳುವಾಗಿ ಸಿಂಪಡಿಸಿ ತಾನಾಗಿಯೇ ಒಣಗಲು ಬಿಡಿ. ಈ ಸಿಂಪರಣೆ ತ್ವಚೆಗೆ ಅಗತ್ಯ ಆದ್ರìತೆ ಒದಗಿಸುವ ಜೊತೆಗೆ, ಸೂರ್ಯನ ಅತಿನೇರಳೆ ಕಿರಣಗಳಿಂದಲೂ ರಕ್ಷಣೆ ಒದಗಿಸುತ್ತದೆ.

Advertisement

– ಚರ್ಮದ ಸುಕ್ಕು ನಿವಾರಣೆಗೆ
ಕ್ಯಾರೆಟ್‌ ರಸ ಮತ್ತು ಲೋಳೆಸರದ ತಿರುಳುಗಳನ್ನು ಮಿಶ್ರಣ ಮಾಡಿ, ನಿಯಮಿತವಾಗಿ ಹಚ್ಚಿಕೊಳ್ಳುತ್ತಾ ಇದ್ದರೆ, ಚರ್ಮದ ಸುಕ್ಕು, ಭಂಗು ಮುಂತಾದ ವೃದ್ದಾಪ್ಯದ ಚಿಹ್ನೆಗಳನ್ನು ಮುಂದೂಡಬಹುದು. ಕ್ಯಾರೆಟ್‌ನಲ್ಲಿರುವ ವಿಟಮಿಸ್‌ ಸಿ, ತ್ವಚೆಯಲ್ಲಿ ಹೆಚ್ಚಿನ ಪ್ರಮಾಣದ ಕೊಲ್ಯಾಜಿನ್‌ ಉತ್ಪತ್ತಿಯಾಗಲು ನೆರವಾಗುವ ಮೂಲಕ ನೆರಿಗೆಗಳು ಮೂಡದಂತೆ ತಡೆಯುತ್ತದೆ.

(ಇವುಗಳ ಪರಿಪೂರ್ಣ ಪ್ರಯೋಜನ ಪಡೆಯಲು, ಕ್ಯಾರೆಟ್‌ಅನ್ನು ತ್ವಚೆಗೆ ಹೊರಗಿನಿಂದ ಲೇಪಿಸಿಕೊಳ್ಳುವ ಜೊತೆಗೆ ಆಹಾರದ ರೂಪದಲ್ಲಿಯೂ ಸೇವಿಸಬೇಕು)

– ಚೇತನಾ ಬೆಳ್ಳೆನವರ

Advertisement

Udayavani is now on Telegram. Click here to join our channel and stay updated with the latest news.

Next