Advertisement

ಪರಿಸರ ನಾಶದಿಂದ ಬರದ ಕಾರ್ಮೋಡ: ಡಾ|ಮಂಜುನಾಥ್‌

08:22 PM Jul 12, 2019 | Team Udayavani |

ಮಂಜೇಶ್ವರ: ಹಿಂದೆಲ್ಲ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದ ಕರ್ನಾಟಕದ ಮಲೆನಾಡು, ದಕ್ಷಿಣ ಕನ್ನಡ, ಕೇರಳ ರಾಜ್ಯಗಳಲ್ಲಿ ಇತ್ತೀಚೆಗೆ ಮಳೆ ಕಡಿಮೆಯಾಗಿ ಬರದ ಕಾರ್ಮೋಡ ಕವಿದಿದೆ. ಕಳೆದ ವರ್ಷ ಕೇರಳವೂ ಕೊಡಗು ಜಿಲ್ಲೆಯೂ ಅತಿವೃಷ್ಟಿಯಿಂದ ಕಂಗಾಲಾದುವು .ಈಗ ಬರದ ಭೀತಿ ಕಾಡುತ್ತಿದೆ ಎಂಬುದಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್‌. ಮಂಜುನಾಥ್‌ ಹೇಳಿದರು.

Advertisement

ಭತ್ತದ ಗದ್ದೆಗಳು ವರ್ಷದಿಂದ ವರ್ಷಕ್ಕೆ ಮಾಯಾವಾಗಿ ಭೂಮಿಗೆ ಸಾಕಷ್ಟು ನೀರು ಇಂಗುವುದಿಲ್ಲ. ಅಂತರ್ಜಲ ಶೋಷಣೆಯಿಂದ ಅದರ ಮಟ್ಟವು ಆತಂಕಕಾರಿಯಾಗಿ ಕುಸಿದಿದೆ. ಮಳೆನಾಡಾಗಿದ್ದ ಪ್ರದೇಶಗಳು ಬರಗಾಲ ಪೀಡಿತವಾಗುವ ದಿನ ಬರಲಿದೆ. ಮರಗಿಡಗಳ ನಾಶ ಕಾಡುಗಳ ಅತಿಕ್ರಮಣ ಇದಕ್ಕೆ ಮುಖ್ಯ ಕಾರಣಗಳು. ಪ್ರಪಂಚದ ಜೀವ ಜಾಲಗಳಿಗೆಲ್ಲ ಶುದ್ಧ ಗಾಳಿಯೂ ಒಳ್ಳೆಯ ನೀರು ಬೇಕಾಗಿದೆ. ಇವೆರಡೂ ಇರಬೇಕಾದರೆ ಮಳೆ ಬರಬೇಕು. ಮರಗಿಡಗಳು ಬೆಳೆಯಬೇಕು, ಇಳೆ ತಣಿಯಬೇಕು. ಇದಕ್ಕೆ ತುರ್ತಾಗಿ ಸೂಕ್ತ ಯೋಜನೆಗಳನ್ನು ಜಾರಿ ಮಾಡಬೇಕು ಭೂಮಿಯೊಳಗೆ ಸಾಕಷ್ಟು ನೀರು ಇಂಗಬೇಕೆಂದು ಡಾ| ಸಿ.ಎನ್‌. ಮಂಜುನಾಥ್‌ ಹೇಳಿದರು. ಮಂಜೇಶ್ವರ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ನಿರ್ವಹಿಸಿ ಈ ರೀತಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೆ.ಆರ್‌. ಜಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.| ಕಮಲಾಕ್ಷ ಕೆ., ಸಂಕಬೈಲು ಸತೀಶ ಆಡಪ ಪ್ರೊ| ವಾಸುದೇವ ಕೀತೇìಶ್ವರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next