Advertisement

ಪಾಸ್‌ವರ್ಡ್‌ ಜೋಪಾನ: ಕಳ್ಳರು ಕೂಡಾ ವರ್ಕ್‌ ಫ್ರಮ್‌ ಹೋಮ…!

03:27 PM May 11, 2020 | mahesh |

ಆಫೀಸ್‌ನ ಕೆಲಸಗಳು ಮನೆಯಿಂದಲೇ ನಡೆಯುತ್ತಿರುವ ಈ ಸಮಯದಲ್ಲಿ, ಒಂದು ವಿಚಾರದ ಕುರಿತು ಹೆಚ್ಚಿನ ಗಮನ ಹರಿಸಬೇಕು. ಅದು ಸೈಬರ್‌ ಸೆಕ್ಯುರಿಟಿ. ದಿನದ ಬಹುತೇಕ ಸಮಯವನ್ನು ನಾವು ಇಂಟರ್ನೆಟ್‌ನಲ್ಲಿ ಕಳೆಯುತ್ತಿದ್ದೇವೆ. ಹೀಗಿರುವಾಗ, ಲಿಂಕುಗಳನ್ನು ಕ್ಲಿಕ್‌ ಮಾಡುವ ಮುನ್ನ, ಅನಾಮಿಕ ಇಮೇಲ್‌ಗೆ ರಿಪ್ಲೆ„ ಮಾಡುವ ಮುನ್ನ, ಯಾವ ಯಾವುದೋ ಜಾಲತಾಣಗಳಿಗೆ ಭೇಟಿ ನೀಡುವ ಮುನ್ನ, ಪರಾಮರ್ಶಿಸಬೇಕು. ಎಲ್ಲಕಿಂತ ಹೆಚ್ಚಾಗಿ, ಆನ್‌ಲೈನಿನಲ್ಲಿ ವಿವಿಧ ಜಾಲತಾಣ, ಇಮೇಲ್‌ ಖಾತೆ, ಇಂಟರ್ನೆಟ್‌ ಬ್ಯಾಂಕಿಂಗ್‌ ಪಾಸ್‌ ವರ್ಡ್‌ಗಳು ಸ್ಟ್ರಾಂಗ್‌ ಇರಬೇಕು. ನಮ್ಮಲ್ಲಿ ಶಕ್ತಿವಂತ, ಬಲಹೀನ ವ್ಯಕ್ತಿಗಳಿರುವ ಹಾಗೆಯೇ, ಪಾಸ್‌ವರ್ಡ್‌ ಅನ್ನು ಕೂಡಾ ಸ್ಟ್ರಾಂಗ್‌, ವೀಕ್‌  ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ.
ಮೂರನೇ ವ್ಯಕ್ತಿ ಊಹೆ ಮಾಡಲು ಎಷ್ಟು ಕಷ್ಟ ಎನ್ನುವುದರ ಆಧಾರದ ಮೇಲೆ, ಪಾಸ್‌ವರ್ಡ್‌ನ ಸಾಮರ್ಥ್ಯ ನಿರ್ಧರಿತವಾಗುತ್ತದೆ.

Advertisement

ಸ್ಟ್ರಾಂಗ್‌ ಪಾಸ್‌ವರ್ಡ್‌ ಹೇಗಿರುತ್ತೆ?  
– ಪಾಸ್‌ವರ್ಡ್‌ನಲ್ಲಿ ಕನಿಷ್ಠ ಪಕ್ಷ 8-9 ಕ್ಯಾರೆಕ್ಟರ್‌ಗಳಾದರೂ ಇರಬೇಕು.
– ಸ್ಟ್ರಾಂಗ್‌ ಪಾಸ್‌ವರ್ಡ್‌ನಲ್ಲಿ, ಕೇವಲ ಅಕ್ಷರಗಳು ಮಾತ್ರವೇ ಇರುವುದಿಲ್ಲ. ಸ್ಮಾಲ್‌ ಲೆಟರ್‌- ಕ್ಯಾಪಿಟಲ್‌ ಲೆಟರ್‌, ಸಂಖ್ಯೆಗಳು, ಸಿಂಬಲ್‌ಗಳು- ಇವೆಲ್ಲವುಗಳ ಮಿಶ್ರಣ
ಇರುತ್ತದೆ.
– ಪಾಸ್‌ವರ್ಡ್‌ನಲ್ಲಿ ಬಳಕೆದಾರನು ತನ್ನ ಜನ್ಮದಿನಾಂಕ, ಹೆಸರನ್ನು ನಮೂದಿಸಬಾರದು.
– ಒಂದು ಕಡೆ ಬಳಸಿದ ಪಾಸ್‌ ವರ್ಡನ್ನು ಮತ್ತೂಂದು ಕಡೆ
ಬಳಸಬಾರದು.
– ಪಾಸ್‌ವರ್ಡ್‌ನಲ್ಲಿ ವೈಯಕ್ತಿಕ ಮಾಹಿತಿ ಇರದಂತೆ ಎಚ್ಚರವಹಿಸಿ.
– ಇಂಟರ್ನೆಟ್‌ನಲ್ಲಿ, ಸ್ಟ್ರಾಂಗ್‌ ಪಾಸ್‌ ವರ್ಡ್‌ ಕ್ರಿಯೇಟ್‌ ಮಾಡುವ ಹಲವು ಜಾಲತಾಣಗಳು ಸಿಗುತ್ತವೆ. ಅವುಗಳನ್ನು ಬಳಸುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ನಮ್ಮ ಪಾಸ್‌ವರ್ಡನ್ನು ನಾವೇ ಸಿದ್ಧಪಡಿಸುವುದು ಉತ್ತಮ.

ಟಾಪ್‌ ಕಾಮನ್‌ ಪಾಸ್‌ ವರ್ಡ್‌ಗಳು
– 123456
– test1
– password
– asdf
– querty
– iloveyou
– abc123
– 111111
– 123123
– princess

Advertisement

Udayavani is now on Telegram. Click here to join our channel and stay updated with the latest news.

Next