Advertisement

“ಆಸಕ್ತಿಯಿಂದ ಮುನ್ನಡೆದರೆ ಉದ್ಯೋಗಾವಕಾಶ’

02:48 PM Mar 17, 2017 | |

ಬೆಳ್ತಂಗಡಿ : ಶ್ರದ್ಧೆ – ಆಸಕ್ತಿಯೊಂದಿಗೆ ಮುನ್ನಡೆದರೆ ಉದ್ಯೋಗಾವಕಾಶ ದಕ್ಕಿಸಿಕೊಂಡು ಗೆಲುವು ಸಾಧ್ಯವಾಗಿಸಿಕೊಳ್ಳಬಹುದು ಎಂದು ಮಂಗಳೂರಿನ ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನ ಎಲೆಕ್ಟ್ರಾನಿಕ್‌ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ  ಹರೀಶ್‌ ಶೆಟ್ಟಿ ಹೇಳಿದರು.ಅವರು ಮಂಗಳವಾರ ಉಜಿರೆ ಇಂದ್ರಪ್ರಸ್ಥ  ಸಭಾಂಗಣದಲ್ಲಿ ಜರಗಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್‌ ಕಾಲೇಜಿನ ಕಲರವ್‌ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Advertisement

ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಅಪೂರ್ವ ಸಾಧನೆಗೈದ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್‌ ಕೆ. ಎ. ನಿರೂಪಿಸಿದರು. ಮೇರಿ ಸ್ಮಿತಾ ಸ್ವಾಗತಿಸಿದರು. ಶಂಕರ್‌ ಭಟ್‌ ವಂದಿಸಿದರು.

ಕೇವಲ ಅಂಕಕ್ಕಾಗಿ ಶಿಕ್ಷಣ ಪಡೆಯದಿರಿ
ಕೆಲಸದಲ್ಲಿ ಆಸಕ್ತಿ, ಶ್ರದ್ಧೆ ಇದ್ದರೆ ಗೆಲುವು  ಕಟ್ಟಿಟ್ಟ ಬುತ್ತಿ. ಕ್ರಿಯಾತ್ಮಕ ಯೋಚನೆ,  ಹೊಸತನ ವಿದ್ಯಾರ್ಥಿಗಳಿಗೆ ಇರಬೇಕಾದ ಪ್ರಮುಖ ಲಕ್ಷಣ ಗಳು. ಕೇವಲ ತಿಳಿದುಕೊಂಡರೆ ಪ್ರಯೋಜನವಿಲ್ಲ. ತಿಳಿದುಕೊಂಡಿದ್ದನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದು ಕೂಡ ತಿಳಿದಿರಬೇಕು. ವಿಷಯವಸ್ತು ಗ್ರಹಿಸಲು ಇಂದಿನ ಯುವಜನತೆ ಸೋಲುತ್ತಿದೆ. ವಸ್ತು ನಿಷ್ಠತೆಯೊಂದಿಗೆ ವಿಶ್ಲೇಷಿಸಿದಾಗ  ಜ್ಞಾನ ವೃದ್ಧಿಯಾಗುತ್ತದೆ. ಕೇವಲ  ಅಂಕಗಳಿಗಾಗಿ ಶಿಕ್ಷಣವನ್ನು ಪಡೆಯಬಾರದು. ಕಲಿತ ವಿದ್ಯೆ ಆಧರಿಸಿ ಹೊಸತನದೊಂದಿಗೆ ಹೆಜ್ಜೆ ಇಟ್ಟಾಗ ಸಮಾಜದಲ್ಲಿ ಬದಲಾವಣೆ ಕಂಡು ಬರುತ್ತದೆ . 
– ಹರೀಶ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next