Advertisement

ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ

01:44 AM Apr 26, 2019 | Sriram |

ಬೆಂಗಳೂರು: ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅತಿ ಶೀಘ್ರದಲ್ಲಿ ಸಿಗಲಿದೆ ವೃತ್ತಿಕೌಶಲ್ಯ ತರಬೇತಿ!.

Advertisement

ಮಕ್ಕಳಿಗೆ ಒಂದೇ ಸೂರಿನಡಿ ಒಂದರಿಂದ 12ನೇ ತರಗತಿವರೆಗೆ ಶಿಕ್ಷಣ ನೀಡಲು ಅನುಕೂಲವಾಗುವಂತೆ ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಈಗಾಗಲೇ ಆರಂಭಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆ ಮಾದರಿಯ ಶಿಕ್ಷಣ ಒದಗಿಸಬೇಕು ಮತ್ತು ಒಂದನೇ ತರಗತಿಗೆ ಸೇರಿದ ಮಗು 12ನೇ ತರಗತಿವರೆಗೂ ಅದೇ ಶಾಲೆಯಲ್ಲಿರಬೇಕು ಎಂಬ ಮೂಲ ಉದ್ದೇಶದಿಂದ ಕರ್ನಾಟಕ ಪಬ್ಲಿಕ್‌ ಶಾಲೆ ಕಾರ್ಯಾರಂಭ ಮಾಡಿದೆ.

ರಾಜ್ಯದ 176 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ 2019-20ನೇ ಸಾಲಿನಿಂದ ಪ್ರಥಮ ಹಾಗೂ ದ್ವಿತೀಯ ಪಿಯು ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ ವೃತ್ತಿಕೌಶಲ್ಯ ತರಬೇತಿ ದೊರೆಯಲಿದೆ. ತರಬೇತಿ ಹೇಗಿರಬೇಕು ಮತ್ತು ಕಾರ್ಯ ಯೋಜನೆ ಅನುಷ್ಠಾನಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು, ವಿದ್ಯಾರ್ಜನೆಯ ಜತೆಗೆ ವೃತ್ತಿಕೌಶಲ್ಯ ತರಬೇತಿಯನ್ನು ಯಾವ ರೀತಿ ನೀಡಬಹುದು ಎಂಬುದರ ಬಗ್ಗೆ ಮಾಹಿತಿ ಕೋರಿದ್ದಾರೆ.

ಕರ್ನಾಟಕ ಪಬ್ಲಿಕ್‌ ಶಾಲೆಯ ಪಿಯು ವಿದ್ಯಾರ್ಥಿಗಳ ವೃತ್ತಿ ಕೌಶಲ್ಯ ತರಬೇತಿಯ ಪಠ್ಯಕ್ರಮ ರಚನೆಗಾಗಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಸಮಿತಿಯೊಂದನ್ನು ರಚಿಸಲಾಗಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ ಸಿಡಿಸಿ ವಿಭಾಗದ ಜಂಟಿ ನಿರ್ದೇಶಕರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇಲಾಖೆಯ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದು, ಆರು ಮಂದಿ ತಜ್ಞ ಉಪನ್ಯಾಸಕರು ಸದಸ್ಯರಾಗಿರುತ್ತಾರೆ. ಇಲಾಖೆಯ ಸಿಡಿಸಿ ವಿಭಾಗದ ಅಭಿವೃದ್ಧಿ ಅಧಿಕಾರಿಯೂ ಇದರ ಸದಸ್ಯರಾಗಿದ್ದಾರೆ. ಈ ಸಮಿತಿಯು ಏ.30ರಂದು ಸಭೆ ಸೇರಿ ವಿದ್ಯಾರ್ಥಿಗಳ ವೃತ್ತಿ ತರಬೇತಿಗೆ ಅನುಷ್ಠಾನಗೊಳಿಸಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಪಿಯು ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಜತೆಗೆ ವೃತ್ತಿ ಕೌಶಲ್ಯ ನೀಡಲು ಎಂಜಿನಿಯರಿಂಗ್‌ ಕಾಲೇಜು, ಪಾಲಿಟೆಕ್ನಿಕ್‌ ಕಾಲೇಜು ಹಾಗೂ ಐಟಿಐ ಕಾಲೇಜುಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಆಸಕ್ತಿ ವಿಷಯದಲ್ಲಿ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ 2 ಕೋಟಿ ರೂ.ಗಳನ್ನು ಒದಗಿಸಲಿದೆ.

Advertisement

‘ಬಾ ಮರಳಿ ಶಾಲೆಗೆ’ ಜನಾಂದೋಲನ
ಬೆಂಗಳೂರು: ಶಾಲಾ ಶಿಕ್ಷಣದಿಂದ ಹೊರಗುಳಿದಿರುವ 70,116 ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಬಾ ಮರಳಿ ಶಾಲೆಗೆ ಜನಾಂದೋಲನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ನಡೆಸಲಿದೆ.

ಈ ಸಂಬಂಧ ಇತ್ತೀಚೆಗೆ ಆಯೋಗದಲ್ಲಿ ಸಭೆ ನಡೆದಿದ್ದು, ಶಾಲಾ ಶಿಕ್ಷಣದಿಂದ ವಂಚಿತ ಎಲ್ಲ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಮತ್ತು ಯಾವ ಜಿಲ್ಲೆಯಲ್ಲಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದರ ಮಾಹಿತಿ ಆಧಾರದಲ್ಲಿ ಅವರಿಗೆ ಬೇಕಾದ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಲಾಗುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಶಿಕ್ಷಣ ಇಲಾಖೆ ನೀಡಿರುವ ಅಂಕಿಅಂಶಗಳಿಗಿಂತ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗಿರುವ ಸಾಧ್ಯತೆಯಿದೆ. ಶಾಲೆಯಿಂದ ಹೊರಗುಳಿದಿರುವ ಪ್ರತಿ ಮಗುವನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ಎಲ್ಲ ಮಕ್ಕಳ ದಾಖಲಾತಿ ಆಗುವಂತಾಗಬೇಕು.

ಶಾಲೆಗೆ ದಾಖಲಾತಿ ಪಡೆಯದ ಅಥವಾ ಮಧ್ಯದಲ್ಲಿ ಶಾಲಾ ಶಿಕ್ಷಣ ಮೊಟಕು ಗೊಳಿಸಿರುವ ಮಕ್ಕಳನ್ನು ಪುನಃ ಶಾಲೆಗೆ ಕರೆತಲು ಬಾ ಮರಳಿ ಶಾಲೆಗೆ ಜನಾಂದೋಲನವನ್ನು ವ್ಯಾಪಕವಾಗಿ ನಡೆಸಲಿದ್ದೇವೆ. ಇದಕ್ಕೆ ಶಿಕ್ಷಣ ಇಲಾಖೆ ಸಹಿತವಾಗಿ ವಿವಿಧ ಇಲಾಖೆಣಮತ್ತು ಸರ್ಕಾರೇತರ ಸಂಸ್ಥೆಗಳ ಸಹಕಾರ ಮತ್ತು ಸಮನ್ವಯತೆ ಅತಿ ಅಗತ್ಯವಿದೆ ಎಂದು ಆಯೋಗದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಏನೇನು ತರಬೇತಿ?
ಎಸ್ಸೆಸ್ಸೆಲ್ಸಿ ಮುಗಿಸಿದ ಅನೇಕ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ ಅಥವಾ ಐಟಿಐಗೆ ಸೇರಿಕೊಳ್ಳುತ್ತಾರೆ. ಹೀಗಾಗಿ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ಅಗತ್ಯವಿಲ್ಲ. ಆದರೆ, ಪಿಯುಸಿ ಓದಿ, ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಪಡೆಯಲಿರುವ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ತರಬೇತಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಿಯು ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಅಥವಾ ಇನ್ಯಾವುದೋ ಕೋರ್ಸ್‌ಗಳ ಬಗ್ಗೆ ವೃತ್ತಿ ಕೌಶಲ್ಯತೆ ನೀಡಲು 7 ಗಂಟೆಗಳ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಮೂರೂವರೆ ಗಂಟೆಗಳ ಪ್ರಾಯೋಗಿಕ ತರಬೇತಿ ಹಾಗೂ ಉಳಿದ ಮೂರೂವರೆ ಗಂಟೆಗಳ ಥಿಯರಿ ಹೇಳಿಕೊಡಲಾಗುತ್ತದೆ. ಎಂಜಿನಿಯರಿಂಗ್‌ ವಿಭಾಗದ ವಿವಿಧ ಕೋರ್ಸ್‌ಗಳ ಪ್ರಾಥಮಿಕ ಮಾಹಿತಿಯನ್ನು ಇದರಲ್ಲಿ ಕಲಿಸಿ ಕೊಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಇದು ಪಿಯು ಇಲಾಖೆಯ ಕಾರ್ಯಕ್ರಮವಾಗಿದ್ದು, ತಾಂತ್ರಿಕ ಶಿಕ್ಷಣ ಇಲಾಖೆ ಜತೆ ಸೇರಿ ಅನುಷ್ಠಾನ ಮಾಡುತ್ತಿರುವುದರಿಂದ ವೃತ್ತಿ ಕೌಶಲ್ಯ ತರಬೇತಿ ಹೇಗಿರಬೇಕು ಎಂಬುದರ
ರೂಪುರೇಷೆ ಸಿದಟಛಿಪಡಿಸಲು ಸಮಿತಿ ರಚಿಸಲಾಗಿದೆ.ಆ ಸಮಿತಿ ನೀಡುವ ವರದಿ ಆಧರಿಸಿ ಅದನ್ನು ಪಿಯು ಇಲಾಖೆಗೆ ಸಲ್ಲಿಸಲಿದ್ದೇವೆ.
– ಎಚ್‌.ಯು.ತಳವಾರ, ನಿರ್ದೇಶಕ, ತಾಂತ್ರಿಕ
ಶಿಕ್ಷಣ ಇಲಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next