Advertisement

ವೃತ್ತಿರಂಗಭೂಮಿ ಶಿಷ್ಯ ವೇತನ: ಮೌಖಿಕ ಸಂದರ್ಶನ

07:02 AM Jun 30, 2019 | Team Udayavani |

ಉಡುಪಿ: ವೃತ್ತಿ ರಂಗಭೂಮಿಯಲ್ಲಿ ತರಬೇತಿ ಪಡೆದು, ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಅಸಕ್ತರಾಗಿರುವ ಯುವಕ/ಯುವತಿಯರಿಂದ ಶಿಷ್ಯವೇತನಕ್ಕಾಗಿ ಜು. 11ರಂದು ಬೆಳಗ್ಗೆ ಧಾರವಾಡದ ರಂಗಾಯಣದ ಆವರಣದಲ್ಲಿ ಮೌಖಿಕ ಸಂದರ್ಶನ ಏರ್ಪಡಿಸಲಾಗಿದೆ.

Advertisement

ಶಿಷ್ಯವೇತನವನ್ನು 6 ತಿಂಗಳಿಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸದವರು ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. ಒಟ್ಟು 15 ಜನರಗೆ 10,000 ರೂ.ಗಳನ್ನು 6 ತಿಂಗಳ ಕಾಲ ಶಿಷ್ಯ ವೇತನವಾಗಿ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು 6 ತಿಂಗಳುಗಳ ಕಾಲ ಅಕಾಡೆಮಿ ಸೂಚಿಸುವ ವೃತ್ತಿ ನಾಟಕ ಕಂಪನಿಯಲ್ಲಿ ಕೆಲಸ ಮಾಡಬೇಕು. ಊಟ, ವಸತಿಯನ್ನು ಆಯಾ ವೃತ್ತಿ ನಾಟಕ ಸಂಸ್ಥೆ ಒದಗಿಸುತ್ತದೆ.

18 ರಿಂದ 35 ವರ್ಷಗಳ ವಯೋಮಿತಿಯವರಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾವಚಿತ್ರ ಮತ್ತು ಅಗತ್ಯ ದಾಖಲೆಗಳೊಂದಿಗೆ ರಂಗಭೂಮಿ ಅನುಭವದ ಕುರಿತು ಸ್ವಯಂ ಅರ್ಜಿಯನ್ನು ಸಲ್ಲಿಸಬೇಕು. ಮಾಹಿತಿಗೆ ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು, (ದೂ: 080- 22237484) ವಿಳಾಸವನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next