ಕಲಾದಗಿ: ಜಿಲ್ಲೆಯಲ್ಲೇ ದೊಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರವೆಂದೇ ಖ್ಯಾತಿ ಹೊಂದಿದ, ಅತೀ ಹೆಚ್ಚು ಗ್ರಾಮಗಳ ಜನರ ಆರೋಗ್ಯ ಕಾಪಾಡಲು ಕಾಳಜಿ ವಹಿಸುತ್ತಿರುವ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಆರೋಗ್ಯಾಧಿಕಾರಿಗಳೇ ಇಲ್ಲ. ಸ್ಟಾಪ್ ನರ್ಸ್ ಇಲ್ಲ. ಪ್ಯೂನ್ ಇಲ್ಲ.
ಹೌದು. ಇದು ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 12 ಗ್ರಾಮ ಪಂಚಾಯತಿಗಳು, 42 ಗ್ರಾಮಗಳು ಒಳಪಡುತ್ತಿದೆ. ಇದರಲ್ಲಿ 6 ಪುನರ್ವಸತಿ ಕೇಂದ್ರಗಳ ಗ್ರಾಮಗಳ ಜನರ ಆರೋಗ್ಯ ಕಾಳಜಿ ವಹಿಸಬೇಕಿದೆ. ಒಟ್ಟು 78,666 ಜನರ ಆರೋಗ್ಯ ರಕ್ಷಣೆ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲಿದೆ. ಹೀಗಿರುವಾಗ ಇಲ್ಲಿಗೆ ಮಹಿಳಾ ಆರೋಗ್ಯಾಧಿಕಾರಿ, ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ.
ಮಹಿಳೆ ಆರೋಗ್ಯಾಧಿಕಾರಿಯೇ ಇಲ್ಲ: ಈ ಕೇಂದ್ರಕ್ಕೆ ಮಹಿಳಾ ವೈದ್ಯಾಧಿಕಾರಿಯನ್ನು ನೇಮಿಸಬೇಕೆಂದು ಕಳೆದ 20 ವರ್ಷದಿಂದಲೂ ಮನವಿ ಮಾಡುತ್ತ ಬಂದಿದ್ದರೂ ಪ್ರಯೋಜವಾಗಿಲ್ಲ. ಆರೋಗ್ಯ ಚಿಕಿತ್ಸೆಗಾಗಿ ಬರುವ ಮಹಿಳೆಯರು ದೂರದ ಬಾಗಲಕೋಟೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಪ್ರಸೂತಿಗೆ ನರ್ಸ್ ಇಲ್ಲ: ಸುತ್ತಮುತ್ತಲಿನ 42 ಗ್ರಾಮಗಳ ಮಹಿಳೆಯರು ಗರ್ಭ ಧರಿಸಿ, ಹೆರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ ಮೂರು ತಿಂಗಳಿಂದ ಅಗತ್ಯ ಸ್ಟಾಪ್ ನರ್ಸ್ ಇಲ್ಲವಾಗಿದ್ದಾರೆ. ಇದರಿಂದ ಇಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಬಂದ ಗರ್ಭಿಣಿಯರಿಗೆ ಹಾಗೂ ಅವರ ಪರಿವಾರದವರಿಗೆ ತೊಂದರೆಯಾಗಿದೆ.
ಮಹಿಳಾ ವೈದ್ಯಾಧಿಕಾರಿ, ಸ್ಟಾಪ್ ನರ್ಸ್ ಇಲ್ಲದೆ ಹೆರಿಗೆಗೆ ಬರುವ ಗರ್ಭಿಣಿಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಬಾಗಲಕೊಟೆ ಜಿಲ್ಲಾ ಆರೋಗ್ಯಾಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಮಹಿಳಾ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು.
•ಮಲ್ಲಪ್ಪ ಕುಂದರಿಗೆ, ಕಲಾದಗಿ ಗ್ರಾಮಸ್ಥ
ಚಂದ್ರಶೇಖರ ಆರ್.ಎಚ್
Related Articles
Advertisement
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಸಾರ್ವಜನಿಕ ಎಲ್ಲಾ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ, ಯಾರಿಗೂ ಏನೂ ತೊಂದರೆ ಆಗುತ್ತಿಲ್ಲ, ಮಹಿಳೆ ವೈಧ್ಯಾಕಾರಿ ನೇಮಕ ಮಾಡಲು ಸಾರ್ವಜನಿಕರ ಬೇಡಿಕೆ ಇದೆ, ಈ ಕುರಿತು ಮೇಲಾಕಾರಿಗಳು ಕ್ರಮ ಕೈಗೊಳ್ಳಬೇಕು, ಪತ್ರ ಬರೆದು ಗಮನಕ್ಕೆ ತಂದು ಮತ್ತೋಮ್ಮೆ ಮನವಿ ಮಾಡಲಾಗುವುದು.
•ಬಸುರಾಜ ಕರಿಗೌಡರ, ವೈದ್ಯಾಧಿಕಾರಿ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರ
ಕಲಾದಗಿ ಆರೋಗ್ಯ ಕೇಂದ್ರಕ್ಕೆ ಕಳೆದ ಮೂರು ತಿಂಗಳಿಂದ ಸ್ಟಾಪ್ ನರ್ಸ್ ಇಲ್ಲ, ಇದರಿಂದ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ವಿಷಯವನ್ನು ಬಾಗಲಕೋಟೆ ಡಿಎಚ್ಒ ತಿಳಿಸಿದ್ದೇನೆ ಆದರೂ ಕ್ರಮ ಕೈಗೊಂಡಿಲ್ಲ, ಈ ಕುರಿತು ಮುಂದಿನ ಜಿಪಂ ಸಭೆಯಲ್ಲಿ ಮಾತನಾಡಲಿದ್ದೇನೆ.
•ಶೋಭಾ ವೆಂಕಣ್ಣ ಬಿರಾದಾರ ಪಾಟೀಲ, ಜಿಪಂ ಸದಸ್ಯೆ, ಕಲಾದಗಿ ಮತಕ್ಷೇತ್ರ
ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓರ್ವ ಎಂಬಿಬಿಎಸ್ ಡಾಕ್ಟರ್, ಬಿಎಎಂಎಸ್ ಡಾಕ್ಟರ್ ಇದ್ದಾರೆ. ಮಹಿಳಾ ವೈದ್ಯಾಧಿಕಾರಿ ಎಂಬ ಪದ ಬಳಕೆ ಇಲ್ಲ, ಮಹಿಳಾ ರೋಗಿಗಳನ್ನು ವೈದ್ಯಾಧಿಕಾರಿಗಳೇ ನೋಡಬೇಕು. ಸ್ಟಾಪ್ ನರ್ಸ್ ಸಿಬ್ಬಂದಿ ಕಡಿಮೆ ಇರುವುದು ಗಮನಕ್ಕೆ ಬಂದಿದೆ.ಸೋಮವಾರವೇ ಓರ್ವ ಹೆಚ್ಚುವರಿ ಸ್ಟಾಪ್ ನರ್ಸ್ ಕಳುಹಿಸಿದ್ದೇವೆ. ಮುಂದೆ ಸ್ಟಾಪ್ ನರ್ಸ್ ನೇಮಕ ಮಾಡಲಾಗುವುದು.
•ಡಾ| ಎ.ಎನ್.ದೇಸಾಯಿ, ಬಾಗಲಕೋಟ ಜಿಲ್ಲಾ ಆರೋಗ್ಯಾಧಿಕಾರಿ