ಮೈಸೂರು: ಪರೀಕ್ಷೆ ಬಳಿಕ ಮುಂದೇನು ಎಂಬ ಪ್ರಶ್ನೆ ಬಹುಪಾಲು ವಿದ್ಯಾರ್ಥಿಗಳನ್ನು ಕಾಡುತ್ತಿದ್ದು, ಈ ನಿಟ್ಟಿನಲ್ಲಿ ಮೈಸೂರು ವಿವಿ ವತಿಯಿಂದ ಕೆರಿಯರ್ ಹಬ್ ಸ್ಥಾಪಿಸಲಾಗಿದೆ ಎಂದು ಮೈವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿವಿ ಮಾನಸ ಗಂಗೋತ್ರಿ ವಿಜ್ಞಾನ ಭವನದ ಸೆಮಿನಾರ್ ಹಾಲ್‌ನಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಹೊಸ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾರ್ಗದರ್ಶನ: ಕೆರಿಯರ್ ಹಬ್ ಮೂಲಕ ಪ್ರತಿ ವರ್ಷ ಎರಡು ಸಾವಿರ ಜನರಿಗೆ ಉದ್ಯೋಗ ದೊರಕಿಸಿಕೊಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪ್ರೊ.ಕೆ.ಎಸ್. ರಂಗಪ್ಪ ಅಭಿಮಾನಿಗಳ ಬಳಗ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ವಿಷಯ. ರಂಗಪ್ಪ ಅವರಂತಹ ವಿಜ್ಞಾನಿ ಸಮಾಜಕ್ಕೆ ಬೇಕು. ಈಗಾಗಲೇ ರಂಗಪ್ಪ ಅವರಿಗೆ ಸಾಕಷ್ಟು ಪ್ರಶಸ್ತಿ ಹಾಗೂ ಹೊಸ ಹೊಸ ಜವಾಬ್ದಾರಿ ಸಿಕ್ಕಿದೆ.
ಅವರ ಹುಮ್ಮಸ್ಸು ನಮಗೂ ಪ್ರೇರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಗ: ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ನನ್ನ ಹೆಸರಿನಲ್ಲಿ ಬಳಗ ಮಾಡುತ್ತಿ¨ªಾರೆ. ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ನೀಡಿದ್ದೇನೆ. ಕಳೆದ ಕೋವಿಡ್ ಸಮಯದಲ್ಲಿ ಡಿ ಗ್ರೂಪ್ ನೌಕರರಿಗೆ ಈ ಬಳಗ ಆರ್ಥಿಕ ಸಹಾಯ ಮಾಡಿತ್ತು. ಸ್ವಾರ್ಥ ಇಲ್ಲದೆ ಸಮಾಜಮುಖೀಯಿಂದ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರೊ. ರಾಜಶೇಖರ್, ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀಕಂಠಸ್ವಾಮಿ, ವಿ.ವಿ. ವಿಶೇಷಾಧಿಕಾರಿ ಚೇತನ್, ಡಾ.ಚಂದ್ರನಾಯ್ಕ, ರಂಗಪ್ಪ ಅಭಿಮಾನಿಗಳ ಬಳಗ ಅಧ್ಯಕ್ಷ ಕುಮಾರ್,