Advertisement

ಬ್ರಿಟನ್ : ಕೇರ್‌ ಹೋಂಗಳ ಸಂತೋಷ ಕೂಟ

07:59 PM Apr 26, 2020 | sudhir |

ಸೆಲ್‌ಸ್ಟನ್‌: ಮೂರು ವಾರಗಳಿಂದ ಲಾಕ್‌ಡೌನ್‌ ಆಗಿರುವ ಬ್ರಿಟನ್‌ನಲ್ಲೀಗ ಅಕ್ಷರಶ: ಸ್ಮಶಾನ ಮೌನ. ಅದರಲ್ಲೂ ಇಂಗ್ಲೆಂಡ್‌ನ‌ ಉತ್ತರ ಭಾಗದಲ್ಲಿರುವ ಹಿರಿಯರ ವಸತಿ ಸಮುತ್ಛಯ ಮತ್ತು ವೃದ್ಧರ ಆರೈಕೆ ಆಶ್ರಮಗಳ ಮೇಲೆ ಸೋಂಕಿನ ಕರಿ ನೆರಳು ಕೊಂಚ ಹೆಚ್ಚಾಗಿಯೇ ಬಿದ್ದಿದೆ.

Advertisement

ಇಂಗ್ಲೆಂಡ್‌ನ‌ ವೃದ್ಧರ ಆರೈಕೆ ಹೋಂಗಳು ಸಾವು – ಬದುಕಿನ ಮನೆಯಾಗಿ ಪರಿಣಮಿಸಿವೆ. ಮನೆಯಲ್ಲಿರುವ ಒಟ್ಟು 54 ನಿವಾಸಿಗಳಲ್ಲಿ 27 ಜನರು ಸೋಂಕಿಗೆ ತುತ್ತಾಗಿದ್ದು, ಇಲ್ಲಿನ 12 ಮಂದಿ ಬಲಿಯಾಗಿದ್ದಾರೆ. ಸೋಂಕಿನಿಂದಾಗಿ ಬ್ರಿಟನ್‌ನ 20 ಸಾವಿರ ಆರೈಕೆ ಮನೆಗಳಲ್ಲಿನ ಸಾವಿರಾರು ವೃದ್ಧರು ಸೋಂಕಿಗೀಡಾಗಿದ್ದು ಮತ್ತು ಕೆಲವರು ಸಾವನ್ನಪ್ಪಿದ್ದಾರೆ. ಎಪ್ರಿಲ್‌ 10 ರವರೆಗೆ ಆರೈಕೆ ಮನೆಗಳಲ್ಲಿ ಸೋಂಕಿಗೆ 1,043 ಸಾವುಗಳು ಸಂಭವಿಸಿವೆ. ಜಾ®Õ… ಹಾಪಿR®Õ… ವಿಶ್ವವಿದ್ಯಾಲಯದ ಪ್ರಕಾರ, ಯುಕೆ 1,38,000 ಕ್ಕೂ ಹೆಚ್ಚು ಕೋವಿಡ್‌-19 ಸಕ್ರಿಯ ಪ್ರಕರಣಗಳನ್ನು ಒಳಗೊಂಡಿದ್ದು, 18,700 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ದುಗುಡ ದೂರ
ಇಳಿವಯಸ್ಸಿನ ವಯೋವೃದ್ಧರಲ್ಲಿನ ಆತಂಕ ಮತ್ತು ದುಗುಡವನ್ನು ದೂರ ಮಾಡಲು ಕೇರ್‌ ಹೋಂಗಳು ಪಾರ್ಟಿಗಳ ಮೊರೆ ಹೋಗುತ್ತಿದ್ದು, ಸಂತೋಷ ಕೂಟಗಳ ಆಯೋಜಿಸಲಾಗುತ್ತಿದೆ. ಈ ಮೂಲಕ ಹಿರಿಯರಲ್ಲಿನ ದುಗುಡ ದೂರ ಮಾಡಲು ಪ್ರಯತ್ನಿಸಲಾಗುತ್ತಿದೆ.

ಕೋವಿಡ್‌-19 ಸಂದರ್ಭದಲ್ಲಿ ಹುಟ್ಟುಹಬ್ಬ ಇರುವವರನ್ನು ಗುರುತಿಸಿ ಸಂಭ್ರಮಾಚಾರಣೆ ಮಾಡುತ್ತಿದ್ದು, ಸಾವಿನ ಭಯದಿಂದ ಹೊರಬರಲು ಇಂತಹ ವಿಭಿನ್ನ ಪ್ರಯತ್ನ ನಡೆಯುತ್ತಿದೆ. ಅಲ್ಲದೇ ಶನಿವಾರ ನಾಟಿಂಗ್‌ ಹ್ಯಾಮ್‌ ಶೈರ್‌ವೆÅನ್‌ ಹಾಲ್‌ ಕೇರ್‌ ಹೋಂನ ನಿವಾಸಿ ಡೋರಿಸ್‌ ಟೇಲರ್‌ಕೆ ತಮ್ಮ 90 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಎಲ್ಲ ನಿವಾಸಿಗಳು ಮತ್ತು ಸಿಬ್ಬಂದಿ ಅವರಿಗೆ ಶುಭಾಶಯ ಕೋರುವ ಮೂಲಕ ಆತಂಕದ ಮಧ್ಯೆ ಸಂಭ್ರಮಾಚರಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next