Advertisement

ಬಿಐಇಸಿಯಲ್ಲಿ ಆರೈಕೆ ಕೇಂದ್ರ ಸಿದ್ಧ

05:37 AM Jul 03, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸೋಂಕಿತರ ಚಿಕಿತ್ಸೆಗೆ ಕೋವಿಡ್‌ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ) ಸೋಮವಾರದಿಂದ ಸೇವೆಗೆ ಮುಕ್ತವಾಗಲಿದೆ. ಇದನ್ನು  ಪಾಲಿಕೆ ಆದ್ಯತೆಯ ಮೇರೆಗೆ ಸಿದ್ಧಪಡಿಸಿಕೊಳ್ಳುತ್ತಿದೆ.

Advertisement

ಈ ಸಂಬಂಧ ಪ್ರತಿಕ್ರಿಯಿಸಿದ ದಾಸರಹಳ್ಳಿ ವಲಯದ ಜಂಟಿ ಆಯುಕ್ತ ಕೆ. ನರಸಿಂಹಮೂರ್ತಿ ಅವರು, ಕೇಂದ್ರದಲ್ಲಿ ಅಂದಾಜು 5ರಿಂದ 7 ಸಾವಿರ ಜನ ಸೋಂ ಕಿತರಿಗೆ (ಕೋವಿಡ್‌ 19  ಸೋಂಕಿನ ಲಕ್ಷಣ ಇಲ್ಲದವರಿಗೆ) ಚಿಕಿತ್ಸೆ ನೀಡಬಹುದಾಗಿದೆ. ಮೊದಲ ಹಂತದಲ್ಲಿ ಐದು ಸಾವಿರ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸೋಂಕಿತರ ಸಂಖ್ಯೆಗೆ ಅನು ಗುಣವಾಗಿ 40, 45 ಹಾಗೂ 50  ಜನರಿಗೆ ಒಂದು ಕೇಂದ್ರದಂತೆ ಪ್ರತ್ಯೇಕ ಕ್ಯಾಬಿನ್‌ ರೀತಿ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಅಗತ್ಯ ಸೌಲಭ್ಯ ಗಳಿರಲಿವೆ. ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ಏಳು ದಿನಗಳ ಕಾಲ ಇಲ್ಲೇ ಇರಲಿದ್ದು, ಇವರಿಗೂ ಪ್ರತ್ಯೇಕ ಕ್ಯಾಬಿನ್‌ ವ್ಯವಸ್ಥೆ ಮಾಡಲಾಗು ತ್ತಿದೆ. ಈಗಾಗಲೇ 50 ಶೌಚಾಲಯಗಳಿದ್ದು, ಹೆಚ್ಚುವರಿ ಇ- ಶೌಚಾಲಯ ಹಾಗೂ ಸ್ನಾನದ ಗೃಹಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next