ತುಮಕೂರು: ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಯಾದರೆಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.ತಡವಾಗಿ ಆಸ್ಪತ್ರೆಗೆ ದಾಖಲು ಆಗುತ್ತಿರುವುದರಿಂದಕೋವಿಡ್ ಸಾವು ಹೆಚ್ಚಾಗುತ್ತಿದ್ದು, ರೋಗದ ಲಕ್ಷಣಗಳು ಕಂಡು ಬಂದರೆ ಪ್ರಾಥಮಿಕ ಹಂತದಲ್ಲೇ ಕೋವಿಡ್‌ಆರೈಕೆ ಕೇಂದ್ರಗಳಿಗೆ ದಾಖಲಾಗಿ, ಚಿಕಿತ್ಸೆ ಪಡೆದರೆ ಬೇಗಗುಣಮುಖರಾಗಬಹುದು ಎಂದು ಜಿಲ್ಲಾ ಉಸ್ತುವಾರಿಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಬೆಳಗುಂಬ ರೆಡ್‌ಕ್ರಾಸ್ ಕಟ್ಟಡದಲ್ಲಿಹಾಲಪ್ಪ ಪ್ರತಿಷ್ಠಾನ, ರೆಡ್‌ಕ್ರಾಸ್ ಸೊಸೈಟಿ, ಸತ್ಯಸಾಯಿಗಂಗಾ ಟ್ರಸ್ಟ್, ಆದರ್ಶ ಫೌಂಡೇಷನ್, ಸಿದ್ದಾರ್ಥಶಿಕ್ಷಣ ಸಂಸ್ಥೆ, ರೋಟರಿ ಸಂಸ್ಥೆ, ಕುವೆಂಪು ವೇದಿಕೆಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿಆರಂಭಿಸಿರುವ 50 ಹಾಸಿಗೆಗಳ ಕೋವಿಡ್ ಆರೈಕೆಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.
ಸೋಂಕಿತರಿಗೆ ಅನುಕೂಲ: ಸಂಘ-ಸಂಸ್ಥೆಗಳಸಹಕಾರದೊಂದಿಗೆ ಜಿಲ್ಲೆಯಲ್ಲಿ ಇದೇ ರೀತಿ ಹೆಚ್ಚುಕೋವಿಡ್ ಕೇರ್ ಕೇಂದ್ರ ಸ್ಥಾಪನೆಯಾದರೆಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.ಕೋವಿಡ್ ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೇಇಲ್ಲಿಗೆ ಆಗಮಿಸಿ ಸೂಕ್ತ ಚಿಕಿತ್ಸೆ ಪಡೆಯುವಂತಹ ಸಕಲವ್ಯವಸ್ಥೆಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಈ ಕೋವಿಡ್‌ಕೇರ್ ಸೆಂಟರ್‌ನಲ್ಲಿ ಈಗಾಗಲೇ 30 ಆಕ್ಸಿಜನ್ ಬೆಡ್‌ಸೋಂಕಿತರಿಗೆ ಉಪಯೋಗವಾಗುತ್ತಿವೆ.
ಇನ್ನೂ 50ಆಕ್ಸಿಜನ್ ಬೆಡ್‌ಗಳು ಹೆಚ್ಚುವರಿಯಾಗಿ ಮಾಡಿದರೆಸೋಂಕಿತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿಸಂಘ ಸಂಸ್ಥೆಗಳ ಕಾರ್ಯವನ್ನು ಶ್ಲಾ ಸಿದರು.ಈ ಕೋವಿಡ್ ಕೇರ್ ಸೆಂಟರ್‌ಗೆ ಸೋಂಕಿತರು ದಾಖಲಾ ದರೆ ಪೌಷ್ಟಿಕ ಆಹಾರ, ಔಷಧೋಪಚಾರ, ಸೋಂಕಿತರಿಗೆ ಆತ್ಮಸ್ಥೈರ್ಯ, ಆತ್ಮವಿಶ್ವಾಸ ತುಂಬು ವಂತಹಸಿಬ್ಬಂದಿಯನ್ನೊಳಗೊಂಡ ಉತ್ತಮ ಆರೈಕೆ ಕೇಂದ್ರವಾಗಿಆರಂಭಗೊಂಡಿರುವುದು ಶ್ಲಾಘನೀಯ ಎಂದರು.
ಸಿಬ್ಬಂದಿ ಜತೆ ಸಮಾಲೋಚನೆ: ಈ ವೇಳೆ ಪಿಪಿಇಕಿಟ್, ಆಕ್ಸಿಜನ್ ಸಾಂದ್ರಕ ಸೇರಿದಂತೆ ಹಲವುವೈದ್ಯಕೀಯ ಪರಿಕರಗಳನ್ನು ಸಚಿವರು ವೀಕ್ಷಿಸಿದರು.ನಂತರ ವೈದ್ಯಕೀಯ ಸಿಬ್ಬಂದಿ, ಪ್ಯಾರಾ ಮೆಡಿಕಲ್‌ಸಿಬ್ಬಂದಿ, ಅಡುಗೆ ಮತ್ತು ಸ್ವತ್ಛತಾ ಕಾರ್ಯ ಸಿಬ್ಬಂದಿಜತೆ ಸಮಾಲೋಚನೆ ನಡೆಸಿದರು. ರೆಡ್‌ಕ್ರಾಸ್ ಸಂಸ್ಥೆಯಿಂದ ಜಿಲ್ಲಾಸ್ಪತ್ರೆ ಮತ್ತು ರೆಡ್‌ಕ್ರಾಸ್ ಕಟ್ಟಡದಲ್ಲಿಆರಂಭಗೊಂಡಿರುವ ಕೋವಿಡ್ ಆರೈಕೆ ಕೇಂದ್ರಕ್ಕೆಆಕ್ಸಿಜನ್ ಸಾಂದ್ರಕ ಕಿಟ್‌ಗಳನ್ನು ವಿತರಿಸಿದರು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಇಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ 20ಆಕ್ಸಿಜನ್ ಸಾಂದ್ರಕಗಳನ್ನು ನೀಡಿದರು. ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ನಾಗೇಂ ದ್ರಪ್ಪ ಕೋವಿಡ್ ಆರೈಕೆ ಕೇಂದ್ರದಸಿಬ್ಬಂದಿಗೆ ಸೋಂಕಿತರನ್ನು ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರಹಾಲಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಪಂಸಿಇಒ ಕೆ.ವಿದ್ಯಾಕುಮಾರಿ, ರೆಡ್‌ಕ್ರಾಸ್ ಸಂಸ್ಥೆಯಜಿಲ್ಲಾಧ್ಯಕ್ಷ ಚಂದ್ರಶೇಖರ್, ವಾಕ್ ಶ್ರವಣದೋಷವುಳ್ಳಮಕ್ಕಳ ವಸತಿಯುತ ಉಚಿತ ಪಾಠಶಾಲೆಯವ್ಯವಸ್ಥಾಪಕ ಕೃಷ್ಣಯ್ಯ, ರೆಡ್ ಕ್ರಾಸ್ ಶಾಲೆ ಅಭಿವೃದ್ಧಿಕಮಿಟಿಯ ಚಂದ್ರಣ್ಣ, ಶೇಖರ್, ಸುಭಾಷಿಣಿ,ಬಸವರಾಜ್, ಸಾಯಿಗಂಗಾ ಟ್ರಸ್ಟ್ ಅಧ್ಯಕ್ಷಡಾ.ವಿಜಯರಾಘವೇಂದ್ರ, ತುಮಕೂರು ಸೆಂಟ್ರಲ್‌ರೋಟರಿ ನಿರ್ದೇಶಕ ಶಿವಕುಮಾರ್ ಬಿಳಿಗೆರೆ, ರೆಡ್‌ಕ್ರಾಸ್ ಕೌಶಲ್ಯಾಭಿವೃದ್ಧಿ ಕಮಿಟಿಯ ಚೇತನ್,ಡಾ.ಅಮೂಲ್ಯ, ಡಾ.ಅಕ್ಷಯ್, ಡಾ.ಅಭಿಶ° ಇದ್ದರು.