Advertisement

ಮಕ್ಕಳಂತೆ ಸಸಿ ಪಾಲನೆ ಮಾಡಿ: ಕುಲಕರ್ಣಿ

05:22 PM Jun 06, 2018 | Team Udayavani |

ಕುಳಗೇರಿ ಕ್ರಾಸ್‌: ಗಿಡ ಮರಗಳಿಂದ ಕೂಡಿದ ಪರಿಸರವು ಆರೋಗ್ಯಕ್ಕೆ ಪೂರಕವಾಗಿದ್ದು, ಪ್ರತಿಯೊಬ್ಬರು ತಮ್ಮ ಮನೆಯಂಗಳದಲ್ಲಿ ಸಸಿ ನೆಟ್ಟು ಅವುಗಳನ್ನು ಮಕ್ಕಳಂತೆ ಪಾಲನೆ ಮಾಡಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯಾಧ್ಯಾಪಕ ಆರ್‌.ಆರ್‌. ಕುಲಕರ್ಣಿ ಹೇಳಿದರು. ಸ್ಥಳೀಯ ಜಿ.ಜಿ. ಹಕ್ಕಾ ಪಕ್ಕಿ ಪ್ರೌಢಶಾಲೆ ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಗೆ ಸಸಿ ನೆಟ್ಟು ನೀರು ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

Advertisement

ಅರಣ್ಯ ಅಧಿಕಾರಿ ಆರ್‌.ಬಿ. ಗಂಗಾಪುರ ಮಾತನಾಡಿ, ಪರಿಸರ ನಾಶದಿಂದ ಭೂಮಿಯ ತಾಪಮಾನ ಹೆಚ್ಚುತಿದ್ದು, ಅದರ ಪರಿಣಾಮದಿಂದ ಅತಿಯಾದ ಬಿಸಿಲು, ಮಳೆ, ಚಳಿ ನೆರೆ ಹಾವಳಿ ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿದೆ. ಪ್ರತಿಯೊಬ್ಬರು ಗಿಡ ಮರ ಬೆಳೆಸಬೇಕು ಎಂದರು.

ವಿದ್ಯಾರ್ಥಿಗಳು, ಶಿಕ್ಷಕರು, ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದರು. ಅರಣ್ಯ ಇಲಾಖೆ ಹವಾಲ್ದಾರ್‌ ಎಚ್‌.ಎಂ. ಗುಂಡಳ್ಳಿ, ಶಿಕ್ಷಕರಾದ ಎಂ.ಕೆ. ಸುಸಂಗಿ, ಪಿ.ವಿ. ಜಲ್ಲಿ, ಎಸ್‌.ಎಂ. ಅಂಗಡಿ, ಕೆ.ಎಲ್‌. ಪಾಟೀಲ, ಟಿ.ಪಿ. ಲಮಾಣಿ, ಎಸ್‌.ಎಚ್‌. ಪಾಟೀಲ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next