Advertisement
ಬ್ಯಾಂಕುಗಳು ಗ್ರಾಹಕರಿಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ನೀಡಿದಾಗ ಅವುಗಳಲ್ಲಿ ಎಟಿಎಂ, ಪಾಯಿಂಟ್ ಅಫ್ ಸೇಲ್ಸ್ ಅನ್‌ಲೈನ್ ವ್ಯವಹಾರ, ಅಂತಾರಾಷ್ಟ್ರೀಯ ವ್ಯವಹಾರ, ಇಂಟರ್ನೆಟ್- ಮೊಬೈಲ್, ಸಂಪರ್ಕ ರಹಿತ (contact less transaction), ಇ- ಕಾಮರ್ಸ್, ಸೌಲಭ್ಯಗಳು ಇರುತ್ತವೆ. ಸಾಮಾನ್ಯವಾಗಿ, ಗ್ರಾಹಕರು ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ಸ್‌ಅನ್ನು ಹೆಚ್ಚು ಬಳಸುತ್ತಾರೆ. ಇಂದಿನ ಯುವಪೀಳಿಗೆ ಮತ್ತು ಸ್ವಲ್ಪ ಟೆಕ್ನಿಕಲ್ ತಿಳಿವಳಿಕೆ ಇದ್ದವರು ಉಳಿದ ಸವಲತ್ತುಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಈ ಕಾರ್ಡ್‌ಗಳನ್ನು ನೀಡುವಾಗ, ಹಣ ಹಿಂಪಡೆಯುವ (ಡ್ರಾ ಮಾಡುವ) ಮತ್ತು ಅವರು ನಡೆಸುವ ವ್ಯವಹಾರದ ಗರಿಷ್ಠ ಮೊತ್ತ ಕೂಡಾ ನಿಗದಿಯಾಗಿರುತ್ತದೆ.
Related Articles
Advertisement
ಗ್ರಾಹಕರಲ್ಲಿ ಕ್ರೆಡಿಟ್ ಕಾರ್ಡ್ ಇದ್ದು,ಅವರು ಅದನ್ನು ಅನ್‌ಲೈನ್ ಶಾಪಿಂಗ್ ಮತ್ತು ಇ- ಕಾಮರ್ಸ್ ವೆಬ್‌ಸೈಟ್‌ಗಳಾದ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಬಳಕೆ ಮಾಡುತ್ತಿದ್ದರೆ, ನಿಮ್ಮ ಕಾರ್ಡ್‌ಗಳನ್ನು ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್‌ಗಳಲ್ಲಿ ಡಿಸೇಬಲ್(ಆಫ್) ಮಾಡಬಹುದು. ಗ್ರಾಹಕರು ಆಯಾ ವ್ಯವಹಾರಕ್ಕೆ ತಕ್ಕಂತೆ ತಮಗೆ ಬೇಕಾದ ಬದಲಾವಣೆಯನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದು. ಈ ಹೊಸ ಮಾರ್ಗದರ್ಶಿಯ ನಂತರ ಬಹುತೇಕ ರಿಸ್ಕ್ಗಳು ಗ್ರಾಹಕರಿಗೆ ವರ್ಗಾವಣೆ ಆಗುತ್ತಿದೆ. ಇದು, ಗ್ರಾಹಕರ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ಈ ಹೊಸ ವ್ಯವಸ್ಥೆ , ಮಾರ್ಚ್ 16 ರಿಂದ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.
ಮುಖ್ಯಾಂಶಗಳು ಏನೇನು?-ಈ ವ್ಯವಸ್ಥೆ ದೇಶಾದ್ಯಂತ ಮಾರ್ಚ್ 16ರಿಂದ ಜಾರಿಗೆ ಬರಲಿದೆ. -ಚಾಲ್ತಿಯಲ್ಲಿರುವ ಕಾರ್ಡ್‌ನಲ್ಲಿ ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ಸ್ ಬಿಟ್ಟು ಉಳಿದೆಲ್ಲ ಮಾಡ್ನೂಲ್‌ಗಳು(ಸವಲತ್ತುಗಳು) ಸ್ಥಗಿತವಾಗುತ್ತವೆ. -ಈ ಎರಡು ಸವಲತ್ತುಗಳನ್ನು ಬಿಟ್ಟು ಬೇರೆ ಸೌಲಭ್ಯಗಳು ಬೇಕಿದ್ದರೆ, ಬ್ಯಾಂಕಿಗೆ ಕೋರಿಕೆ ಸಲ್ಲಿಸಿ ಪಡೆಯಬೇಕಾಗುತ್ತದೆ. -ಡ್ರಾ ಮಾಡುವ ಹಣದ ಗರಿಷ್ಠ ಮಿತಿಯನ್ನು ಗ್ರಾಹಕರೇ ಬ್ಯಾಂಕಿನ ಸಹಾಯದಿಂದ ನಿಗದಿಪಡಿಸಿಕೊಳ್ಳಬೇಕು. -ಗ್ರಾಹಕರೇ ತಮ್ಮ ಕಾರ್ಡನ್ನು ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ಮಾಡಿಕೊಳ್ಳಬಹುದು. ಬಳಕೆ ಮಾಡುವ ಸಮಯದಲ್ಲಿ ಮಾತ್ರ ಸ್ವಿಚ್ ಆನ್ ಮಾಡಿಕೊಳ್ಳಬಹುದು. -ಇನ್ನು ಮೇಲೆ ಹೊಸ ಕಾರ್ಡ್‌ಗಳಲ್ಲಿ ಅಂತರಿಕ ವ್ಯವಹಾರ (domestic) ಕೇವಲ ಏಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ಸ್ ಸೌಲಭ್ಯಗಳು ಮಾತ್ರ ಇರುತ್ತವೆ. ಉಳಿದ ಸೌಲಭ್ಯಗಳು ಬೇಕಿದ್ದರೆ ಕೇಳಿ ಪಡೆಯಬೇಕು. -ಅಂತಾರಾಷ್ಟ್ರೀಯ ವ್ಯವಹಾರದ ಸೌಲಭ್ಯ ಬೇಕಿದ್ದರೆ, ವಿಶೇಷವಾಗಿ ಕೇಳಿ ಪಡೆಯಬೇಕು. -ಯಾರಾದರೂ ಗ್ರಾಹಕರು ಈ ಮೊದಲು ಆನ್‌ಲೈನ್ ವ್ಯವಹಾರ,ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಂಪರ್ಕ ರಹಿತ ವಹಿವಾಟುಗಳಿಗೆ ಬಳಸದಿದ್ದರೆ ಅಂಥವರ ಕಾರ್ಡ್‌ಗಳನ್ನು ಬ್ಯಾಂಕುಗಳು ಡಿಸೇಬಲ್ ಮಾಡಬಹುದು. -ಗ್ರಾಹಕರು ಕಾರ್ಡ್‌ನಲ್ಲಿನ ಯಾವುದೇ ಸೌಲಭ್ಯವನ್ನು ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ಮಾಡಿಕೊಳ್ಳಬಹುದು. -ಬ್ಯಾಂಕುಗಳ ಯಾವುದೇ ಕಾರ್ಡನ್ನು ಸ್ಥಗಿತಗೊಳಿಸಿ ಹೊಸ ಕಾರ್ಡನ್ನು ನೀಡಬಹುದು. * ರಮಾನಂದ ಶರ್ಮಾ