Advertisement

ಇಪ್ಪತ್ತರ ಕಾರುಬಾರು; ವರ್ಷದ ನಿರೀಕ್ಷಿತ ಕಾರುಗಳು

08:46 PM Jan 12, 2020 | Sriram |

ಆಟೋಮೊಬೈಲ್‌ ಕ್ಷೇತ್ರ ನಾನಾ ಅಡ್ಡಿ- ಆತಂಕಗಳ ಜತೆಯಲ್ಲೇ 2019 ವರ್ಷ ಮುಗಿಸಿ, 2020ಕ್ಕೆ ಕಾಲಿಟ್ಟು ಆಗಲೇ ಎರಡು ವಾರಗಳಾದುವು. ವರ್ಷಾಂತ್ಯದ ಡಿಸ್ಕೌಂಟ್‌, ಆಫ‌ರ್‌ಗಳ ಭರಾಟೆಯಲ್ಲಿ ಒಂದಷ್ಟು ಸೇಲ್‌ ಅನ್ನು ವೃದ್ಧಿಸಿಕೊಂಡಿರುವ ಆಟೊಮೊಬೈಲ್‌ ಕಂಪನಿಗಳು, 2020ರತ್ತ ಆಶಾಭಾವದಿಂದ ನೋಡುತ್ತಿವೆ. ಇದರ ನಡುವೆಯೇ ಈ ವರ್ಷ ಹೊಸದಾಗಿ ಹಲವಾರು ಕಾರುಗಳು ಮಾರುಕಟ್ಟೆಗೆ ಪ್ರವೇಶ ಮಾಡುವ ಸಲುವಾಗಿ ಕಾದುಕುಳಿತಿವೆ.

Advertisement

1. ಹುಂಡೈ ಔರಾ ಟಬೋì ಎಸ್‌ಎಕ್ಸ್ 
ಹುಂಡೈ ಕಂಪನಿಯ ಅತ್ಯಂತ ನಿರೀಕ್ಷೆಯ ಕಾರಿದು. ಇತ್ತೀಚೆಗಷ್ಟೇ ಈ ಕಾರಿನ ಬುಕ್ಕಿಂಗ್‌ ಕೂಡ ಶುರುವಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ವೇರಿಯಂಟ್‌ನಲ್ಲಿ ಬರಲಿದೆ. ಜತೆಗೆ ಮ್ಯಾನುವಲ್‌ ಮತ್ತು ಆಟೋಮ್ಯಾಟಿಕ್‌ನಲ್ಲೂ ಈ ಕಾರು ಸಿಗಲಿದೆ.
ಕಾರಿನ ದರ- 8 ಲಕ್ಷ ರೂ. (ಅಂದಾಜು)
ಎಂಜಿನ್‌- 1.0 ಲೀ. ಟಬೋì ಪೆಟ್ರೋಲ್‌
ಟ್ರಾನ್ಸ್ ಮಿಷನ್‌- 5 ಗೇರ್‌

2. ಹುಂಡೈ ಕ್ರೇಟಾ ಸಿಆರ್‌ಡಿಐ
ಹೊಸ ಸ್ಟೈಲ್‌, ಹೊಸ ಎಂಜಿನ್‌, ಹೊಸ ಫೀಚರ್‌ನೊಂದಿಗೆ ಬರಲು ಸಿದ್ಧವಾಗುತ್ತಿದೆ ಹುಂಡೈ ಕ್ರೇಟಾ. ಒಟ್ಟಾರೆಯಾಗಿ ಹೇಳುವುದಾದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಮಾದರಿಗಿಂತ ಹೆಚ್ಚಿನ ಸವಲತ್ತುಗಳೊಂದಿಗೆ ಬರಲಿದೆ.
ಕಾರಿನ ದರ- 10 ಲಕ್ಷ ರೂ.(ಅಂದಾಜು)
ಎಂಜಿನ್‌- 1.5 ಲೀ. ಟಬೋì ಡೀಸೆಲ್‌
ಟ್ರಾನ್ಸ್ ಮಿಷನ್‌ – 6 ಗೇರ್‌, ಮ್ಯಾನುವಲ್‌

3. ಕಿಯಾ ಕೆ5 1.6ಟಿ- ಜಿಡಿಐ
ಕಿಯಾ ಆಪ್ಟಿಮಾ ಎಂಬ ಹೆಸರಿನಲ್ಲೂ ಕರೆಸಿಕೊಳ್ಳುವ ಈ ಕಾರು, 2020ರ ಮಧ್ಯಭಾಗದಲ್ಲಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಸೆಡಾನ್‌ ರೂಪದಲ್ಲಿರುವ ಇದು ಉತ್ತಮ ಫೀಚರ್‌ಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ.
ಕಾರಿನ ದರ- 20 ಲಕ್ಷ ರೂ.(ಅಂದಾಜು)
ಎಂಜಿನ್‌- 1.6 ಲೀ. ಟಬೋì ಪೆಟ್ರೋಲ್‌
ಟ್ರಾನ್ಸ್ ಮಿಷನ್‌- 8 ಗೇರ್‌, ಡ್ಯುಯಲ್‌ ಕ್ಲಚ್‌ ಆಟೋ

4. ಮಹೀಂದ್ರಾ ಎಕ್ಸ್ ಯುವಿ300
ಇದು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್‌ ಕಾರಾಗಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಬ್ಯಾಟರಿ ಪ್ಯಾಕ್‌ನಲ್ಲಿ ಹಾಗೂ ಮುಂಭಾಗದ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.
ಕಾರಿನ ದರ – 15-20 ಲಕ್ಷ ರೂ.(ಅಂದಾಜು)
ಎಂಜಿನ್‌- ಬ್ಯಾಟರಿ ಪ್ಯಾಕ್‌, ಎಲೆಕ್ಟ್ರಿಕ್‌ ಮೋರ್ಟಾ
ಟ್ರಾನ್ಸ್ ಮಿಷನ್‌- ಅನ್ವಯವಿಲ್ಲ

Advertisement

5. ಸ್ಕೋಡಾ ಕರೋಕ್‌
ಇದು ಸ್ಕೋಡಾ ಕಂಪನಿಯ ಹೊಸ ಎಸ್‌ಯುವಿಯಾಗಿದ್ದು, ಹೊಸ ಮಾದರಿಯ ವಿನ್ಯಾಸದೊಂದಿಗೆ ಎಪ್ರಿಲ್‌ ವೇಳೆಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಮೂರು ಬಗೆಯ ಎಂಜಿನ್‌ ಆಯ್ಕೆಗಳನ್ನು ಈ ಕಾರು ಒಳಗೊಂಡಿದೆ. ಎರಡು ಡೀಸೆಲ್‌ ಮತ್ತು ಒಂದು ಪೆಟ್ರೋಲ್‌ ಮಾದರಿಯಲ್ಲಿ ಸಿಗುತ್ತದೆ. ಪೆಟ್ರೋಲ್‌ 1.5 ಲೀ. ಎಂಜಿನ್‌, ಡೀಸೆಲ್‌ 2 ಲೀಟರ್‌ ಎಂಜಿನ್‌ ಸಾಮರ್ಥ್ಯದಲ್ಲಿ ಬರಲಿದೆ.
ಕಾರಿನ ದರ- 18-20 ಲಕ್ಷ ರೂ.(ಅಂದಾಜು)
ಎಂಜಿನ್‌ 1.5- 2.0 ಲೀಟರ್‌
ಟ್ರಾನ್ಸ್ ಮಿಷನ್‌ – 7 ಗೇರ್‌

6. ಟಾಟಾ ಅಲೊóàಸ್‌ ರೆವೊಟ್ರಾನ್‌
ಬಿಡುಗಡೆಗೂ ಮುನ್ನವೇ ಸುದ್ದಿ ಮಾಡುತ್ತಿರುವ ಕಾರಿದು. ಇದೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಗಿದ್ದು, ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಂಪನಿ ಇದನ್ನು ರೂಪಿಸಿದೆ. ಇದು ಡೀಸೆಲ್‌ ಮತ್ತು ಪೆಟ್ರೋಲ್‌ ಮಾದರಿಯಲ್ಲಿ ಸಿಗಲಿದೆ.
ಕಾರಿನ ದರ- 7 ಲಕ್ಷ ರೂ.(ಅಂದಾಜು)
ಎಂಜಿನ್‌- 1.2 ಲೀಟರ್‌ ಪೆಟ್ರೋಲ್‌
ಟ್ರಾನ್ಸ್ ಮಿಷನ್‌- 5 ಗೇರ್‌

7. ಟಾಟಾ ನೆಕ್ಸಾನ್‌ ಇವಿ
ಸಂಪೂರ್ಣವಾಗಿ ಎಲೆಕ್ಟ್ರಿಕ್‌ ಕಾರಾಗಿರುವ ಇದು, ಈಗಾಗಲೇ ಹಲವಾರು ರೀತಿಯಲ್ಲಿ ನಿರೀಕ್ಷೆ ಹುಟ್ಟಿಸಿದೆ. ಅತ್ಯುತ್ತಮ ಬ್ಯಾಟರಿ ಪ್ಯಾಕ್‌, ಫೀಚರ್‌ಗಳು ಸದ್ದು ಮಾಡಿವೆ. ವಿನ್ಯಾಸ ಕೂಡ ಸಖತ್‌ ಆಗಿಯೇ ಇದ್ದು, ಯಾವುದೇ ಪೆಟ್ರೋಲ್‌ ಅಥವಾ ಡೀಸೆಲ್‌ ಗಾಡಿಗಿಂತಲೂ ಕಡಿಮೆಯಿಲ್ಲ ಎಂಬ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಕಾರಿನ ದರ – 15 ಲಕ್ಷ ರೂ.(ಅಂದಾಜು)
ಎಂಜಿನ್‌ – 30.2 ಕೆ.ಡಬ್ಲ್ಯೂ .ಎಚ್‌ ಬ್ಯಾಟರಿ, 95 ಕೆ.ಡಬ್ಲ್ಯೂ . ಎಲೆಕ್ಟ್ರಿಕ್‌ ಮೋಟಾರ್‌
ಟ್ರಾನ್ಸ್ ಮಿಷನ್‌- ಸಿಂಗಲ್‌ ಸ್ಪೀಡ್‌, ಆಟೋ

8. ಟಾಟಾ ಟಿಯಾಗೋ ಇವಿ
ಈ ವರ್ಷದ ಆಗÓr… ವೇಳೆಗೆ ಈ ಕಾರು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಹ್ಯಾಚ್‌ಬ್ಯಾಕ್‌ ಸರಣಿಯ ಇದು ಸಂಪೂರ್ಣವಾಗಿ ಎಲೆಕ್ಟ್ರಿಕ್‌ ರೂಪದಲ್ಲಿ ಬರಲಿದೆ. ಆಟೋಮ್ಯಾಟಿಕ್‌ ಮಾದರಿಯಲ್ಲಿ ಇದು ಸಿಗಲಿದೆ.
ಕಾರಿನ ದರ- 6 ಲಕ್ಷ ರೂ. (ಅಂದಾಜು)
ಎಂಜಿನ್‌- ಎಲೆಕ್ಟ್ರಿಕ್‌
ಟ್ರಾನ್ಸ್ ಮಿಷನ್‌- ಆಟೋಮ್ಯಾಟಿಕ್‌

9. ರೆನಾಲ್ಟ… ಕೈಗರ್‌
ಫೋರ್‌ ಮೀಟರ್‌ ಕಾಂಪಾಕr… ಎಸ್‌ಯುವಿ ಮಾದರಿಯ ಕಾರಿದು. ಆದರೆ, ಈ ಕಾರು ಮಾರುಕಟ್ಟೆಗೆ ಪ್ರವೇಶಿಸಲು ಇನ್ನೂ ಸಮಯ ಬಹಳಷ್ಟಿದೆ. ಈ ವರ್ಷದ ನವೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು, ಡಸ್ಟರ್‌ ಮತ್ತು ಟ್ರೈಬರ್‌ ಕಾರುಗಳಿಂದ ಪ್ರೇರಿತವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ದರವನ್ನು ಹೊರತುಪಡಿಸಿ ಮಿಕ್ಕಾವ ಮಾಹಿತಿಯೂ ಹೊರಬಿದ್ದಿಲ್ಲ.
ಕಾರಿನ ದರ- 6 ಲಕ್ಷ ರೂ.(ಅಂದಾಜು)

10. ಹುಂಡೈ ಟಕ್ಸನ್‌
ಹುಂಡೈ ಕಂಪನಿಯ ಈ ಕಾರು ಬಿಎಸ್‌6 ಅನ್ನು ಅಳವಡಿಸಿಕೊಂಡು ಮಾರುಕಟ್ಟೆಗೆ ಬರಲಿದೆ. ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಈ ಕಾರು ಅನಾವರಣಗೊಳ್ಳಲಿದೆ. ಇದು ಫೇಸ್‌ಲಿಫr… ಕಾರಾಗಿದ್ದು, ಒಳಾಂಗಣ ವಿನ್ಯಾಸ ಬದಲಾಗಿದೆ. 2 ಲೀಟರ್‌ ಎಂಜಿನ್‌ ಸಾಮರ್ಥ್ಯವುಳ್ಳ ಇದು, ಆರು ಸ್ಪೀಡ್‌ ಮ್ಯಾನುವಲ್‌ ಮತ್ತು ಆಟೋಮ್ಯಾಟಿಕ್‌ ಮಾದರಿಗಳಲ್ಲಿ ಬರಲಿದೆ.
ಕಾರಿನ ದರ- 30 ಲಕ್ಷ (ಅಂದಾಜು)
ಎಂಜಿನ್‌- 2 ಲೀ. ಪೆಟ್ರೋಲ್‌/ಡೀಸೆಲ್‌
ಟ್ರಾನ್ಸ್ ಮಿಷನ್‌- 6 ಸ್ಪೀಡ್‌, ಆಟೋಮ್ಯಾಟಿಕ್‌

-ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next