Advertisement

ಎಕ್ಸೋಪ್ಲಾನೆಟ್‌ಗಳಲ್ಲಿ ಇದೆ ಹೇರಳವಾದ ವಜ್ರಗಳ ನಿಕ್ಷೇಪ

01:01 AM Sep 13, 2020 | mahesh |

ವಾಷಿಂಗ್ಟನ್‌: ನಮ್ಮ ಸೌರವ್ಯೂಹದಿಂದ ಹೊರಗಡೆ ನಕ್ಷತ್ರಗಳ ಸುತ್ತ ಸುತ್ತುವ ಕೆಲವು ಗ್ರಹಗಳು (ಎಕ್ಸೋ ಪ್ಲಾನೆಟ್‌ಗಳು) ಇಂಗಾಲದ ಕಣಗಳಿಂದ ತುಂಬಿದ್ದು, ಅವುಗಳಲ್ಲಿ ಹೇರಳವಾದ ವಜ್ರಗಳ ನಿಕ್ಷೇಪಗಳಿರಬಹುದು ಎಂದು ಅಮೆರಿಕದ “ಆ್ಯರಿಝೋನಾ ಸ್ಟೇಟ್‌ ಯೂನಿವರ್ಸಿಟಿ’ (ಎಎಸ್‌ಯು) ಹಾಗೂ “ಯುನಿವರ್ಸಿಟಿ ಆಫ್ ಚಿಕಾಗೋ’ದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಂತೆ ತಾವು ನಡೆಸಿರುವ ಸಂಶೋಧನೆಯ ವಿವರಗಳನ್ನು ಡೈಲಿ ಸೈನ್ಸ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ.

Advertisement

ಸಂಶೋಧಕರ ತಂಡದ ಮುಖ್ಯಸ್ಥರಾಗಿರುವ “ಎಎಸ್‌ಯುನ ಸ್ಕೂಲ್‌ ಆಫ್ ಅರ್ತ್‌ ಆ್ಯಂಡ್‌ ಸ್ಪೇಸ್‌ ಎಕ್ಸ್‌ಪ್ಲೊರೇಷನ್‌’ನ ಪ್ರಕಾರ, “”ನಕ್ಷತ್ರಗಳು ಹಾಗೂ ಅವುಗಳ ಸುತ್ತ ಸುತ್ತುವ ಗ್ರಹಗಳ ರಚನೆಯು ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಅವುಗಳ ವಾತಾವರಣ ಅನೇಕ ಅನಿಲಗಳ ಸಮ್ಮಿಶ್ರಣವಾಗಿರುತ್ತದೆ. ಅದರಲ್ಲಿ ಇಂಗಾಲ, ಆಮ್ಲಜನಕ, ಸಿಲಿಕೇಟ್‌,ಆಕ್ಸೆ„ಡ್‌ಗಳೂ ಸಮ್ಮಿಳಿತವಾಗಿರುವುದರಿಂದ ನೈಸರ್ಗಿಕ ವಜ್ರಗಳ ರಚನೆಗೆ ಹೇಳಿ ಮಾಡಿಸಿದಂಥ ಅಂಶಗಳಿರುತ್ತವೆ. ಆದ್ದರಿಂದ, ಎಕ್ಸೋಪ್ಲಾನೆಟ್‌ಗಳಲ್ಲಿ ವಜ್ರದ ನಿಕ್ಷೇಪಗಳು ಇರಬಹುದು” ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next