Advertisement
ದೇಶಾದ್ಯಂತ ಈಗ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಾಗಿ, ಬಹುತೇಕ ಮಂದಿಗೆ, ತಮ್ಮ ಕಾರು ಬೈಕುಗಳನ್ನು ಮನೆಯಿಂದ ಹೊರಗೆ ತೆಗೆಯಲು ಆಗುತ್ತಿಲ್ಲ. ಲಾಕ್ ಡೌನ್ ಶುರುವಾಗಿ ಈಗಾಗಲೇ ತಿಂಗಳಾಗುತ್ತಾ ಬಂದಿದೆ. ಒಂದೇ ಕಡೆ ವಾಹನಗಳನ್ನು ನಿಲ್ಲಿಸಿದರೆ ಸಮಸ್ಯೆ ಆಗುವುದಿಲ್ಲವೇ ಎಂಬ ಪ್ರಶ್ನೆಗಳು, ಹಲವರನ್ನು ಕಾಡಿವೆ. ಹೌದು, ತುಂಬಾ ದಿನಗಳ ಕಾಲ ವಾಹನಗಳನ್ನು ನಿಂತಲ್ಲೇ ನಿಲ್ಲಿಸಿದರೆ, ಕೆಲವೊಂದು ಸಮಸ್ಯೆ ಎದುರಾಗಬಹುದು. ಅದರಿಂದ ಪಾರಾಗಬೇಕೆಂದರೆ, ಕೆಲವೊಂದು ಟಿಪ್ಸ್ ಅನುಸರಿಸಬಹುದು.
ನಿಮ್ಮ ಕಾರು ಅಥವಾ ಬೈಕನ್ನು ಎಲ್ಲಿ ನಿಲ್ಲಿಸಿದ್ದೀರಿ ಎಂಬುದು, ನಿಮ್ಮ ವಾಹನ ಹೇಗಿರುತ್ತೆ ಎಂಬುದನ್ನು ನಿರ್ಧರಿಸುತ್ತದೆ. ನೀವು ಕಾರು ನಿಲ್ಲಿಸುವ ಸ್ಥಳ ನೆರಳು ಬರುವಂತಿರಲಿ.
ನೆರಳು ಬರುವ ಸ್ಥಳ ಇಲ್ಲದಿದ್ದರೆ, ಕಾರ್ ಅಥವಾ ಬೈಕನ್ನು ಕವರ್‌ನಿಂದ ಮುಚ್ಚಿ. ಬೈಕನ್ನು ಯಾವುದೇ ಕಾರಣಕ್ಕೂ ಸೈಡ್ ಸ್ಟಾಂಡ್‌ನಲ್ಲಿ ನಿಲ್ಲಿಸಬೇಡಿ. ಇದರಿಂದ, ಬೈಕಿನ ಒಂದು ಭಾಗಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಬ್ರೇಕ್ಸ್ ಮತ್ತು ಕೇಬಲ್ಸ್
ಸಾಮಾನ್ಯವಾಗಿ ದಿನನಿತ್ಯವೂ ಓಡಾಡುವ ಸಂದರ್ಭದಲ್ಲಿ ಕಾರಿನ ಹ್ಯಾಂಡ್ ಬ್ರೇಕ್ ಹಾಕುವುದು ರೂಢಿ. ಆದರೆ, ಹೆಚ್ಚು ದಿನಗಳ ಕಾಲ ನಿಂತಲ್ಲೇ ನಿಲ್ಲಿಸುವ ವೇಳೆಯಲ್ಲಿ,
ಹ್ಯಾಂಡ್ ಬ್ರೇಕ್ ಹಾಕುವ ಅಗತ್ಯವಿಲ್ಲ. ಇದಕ್ಕೆ ಬದಲಾಗಿ, ಕಾರನ್ನು ಗೇರಿನಲ್ಲೇ ನಿಲ್ಲಿಸಬಹುದು. ಇದರಿಂದಾಗಿ, ಕಾರಿನ ಬ್ರೇಕ್ ಪೆಡಲ್ ಮತ್ತು ಡಿಸ್ಕ್ ಮೇಲೆ ಒತ್ತಡ ಬೀಳುವುದು ತಪ್ಪುತ್ತದೆ. ಇದಷ್ಟೇ ಅಲ್ಲ, ಕಾರಿನ ಚಕ್ರಗಳ ಹಿಂದೆ ಮತ್ತು ಮುಂದೆ ಇಟ್ಟಿಗೆ ಅಥವಾ ಕಲ್ಲನ್ನು ಇಡಬಹುದು.
Related Articles
ಕಾರು ಅಥವಾ ಬೈಕಿನ ಟ್ಯಾಂಕ್ ಅನ್ನು ಖಾಲಿ ಇಡಬೇಡಿ. ಸಾಧ್ಯವಾದರೆ ಪೆಟ್ರೋಲ್ ಅಥವಾ ಡೀಸೆಲ್‌ಅನ್ನು ಫುಲ್ ಹಾಕಿಸಿಯೇ ಇಡಿ. ಇದರಿಂದಾಗಿ, ಇಂಧನದ ಟ್ಯಾಂಕ್ ರಸ್ಟ್ ಹಿಡಿಯುವುದು ತಪ್ಪುತ್ತದೆ. ತುಂಬಾ ದಿನ ನಿಂತಲ್ಲೇ ಗಾಡಿ ನಿಂತಿರುತ್ತೆ ಅಂತಾದರೆ, ತೈಲ ಸ್ಟೆಬಿಲೈಜರ್ ಅನ್ನು ಬಳಕೆ ಮಾಡಬಹುದು. ಇದು ಪೆಟ್ರೋಲ್ ಆವಿಯಾಗುವುದನ್ನು
ತಪ್ಪಿಸುತ್ತದೆ.
Advertisement
ಟಯರ್ಯಾವುದೇ ಕಾರು ತುಂಬಾ ದಿನ ಒಂದೇ ಕಡೆಯಲ್ಲಿ ನಿಂತಿದ್ದರೆ, ಅದರ ಟಯರ್‌ನಲ್ಲಿ ಗಾಳಿ ಹೋಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗಾಡಿ ಚಾಲನೆ ಮಾಡುವ ಮುನ್ನ, ನಾಲ್ಕು ಟಯರ್‌ಗಳಲ್ಲಿನ ಗಾಳಿಯನ್ನು ಪರಿಶೀಲಿಸಿ,ಹಿಂದಕ್ಕೆ ಮುಂದಕ್ಕೆ ಓಡಾಡಿಸುತ್ತಿರಿ. ಇದರಿಂದ, ಟಯರ್‌ನಲ್ಲಿ ಕ್ರ್ಯಾ ಕ್ ಬೀಳುವುದು ತಪ್ಪುತ್ತದೆ. ಆದರೆ ಬೈಕನ್ನು ಸೆಂಟರ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದರೆ, ಇಂಥ ಯಾವುದೇ ಅಪಾಯ ಇರುವುದಿಲ್ಲ. ಇಂಟೀರಿಯರ್
ಕಾರಿನ ಇಂಟೀರಿಯರ್ ಕೂಡ ಅತ್ಯಂತ ಪ್ರಮುಖವಾದ ಸಂಗತಿ. ಯಾವುದೇ ಕಾರಣಕ್ಕೂ ನಿಮ್ಮ ಕಾರಿನಲ್ಲಿ ತಿನಿಸುಗಳನ್ನು ಇಡಲೇಬೇಡಿ. ಇದರಿಂದಾಗಿ, ಇಲಿ, ಕೀಟಗಳು ಒಳಗೆ ಸೇರುವ ಅಪಾಯ ಇರುತ್ತದೆ. ಕಾರಿನ ಒಳಾಂಗಣ, ಸಾಧ್ಯವಾದಷ್ಟೂ ಶುಚಿಯಾಗಿರುವಂತೆ ನೋಡಿಕೊಳ್ಳಿ. ಹಾಗೆಯೇ, ಕಾರಿನ ಒಳಗೆ ಇಲಿಗಳು ಬರುವ ಮಾರ್ಗಗಳಿದ್ದರೆ, ಆಗಾಗ ಪರೀಕ್ಷೆ ಮಾಡುತ್ತಿರಿ. ಬ್ಯಾಟರಿ
ಈಗ ಸದ್ಯ ಎಲ್ಲರ ಕಾರುಗಳಲ್ಲಿ ಬಳಕೆಯಾಗುತ್ತಿರುವುದು ಆ್ಯಸಿಡ್ ಬ್ಯಾಟರಿ. ಇದು ಬೇಗನೇ ಡ್ರೈ ಆಗುವ ಸಾಧ್ಯತೆ ಇರುತ್ತದೆ. ಬಹಳಷ್ಟು ದಿನ ಕಾರು ಬಳಸದೇ ಇದ್ದರೆ, ಬ್ಯಾಟರಿಯ ಸಂಪರ್ಕ ತಪ್ಪಿಸಿ. ಇದರಿಂದ ಬ್ಯಾಟರಿ ಡ್ರೈ ಆಗುವುದು ತಪ್ಪುತ್ತದೆ. ಇದಕ್ಕಿಂತ ಒಳ್ಳೆಯ ವಿಧಾನವೆಂದರೆ, 5-6 ದಿನಕ್ಕೊಮ್ಮೆ ಕಾರನ್ನು ಸ್ಟಾರ್ಟ್ ಮಾಡಿ, 15ರಿಂದ 20 ನಿಮಿಷ ಐಡಲ್ನಲ್ಲಿ ಇಡಿ. ಸೋಮಶೇಖರ ಸಿ. ಜೆ