Advertisement

ಕಾರು ಮಾರಾಟದಲ್ಲಿ ಶೇ.11ರಷ್ಟು ಏರಿಕೆ

09:55 AM Nov 20, 2019 | Team Udayavani |

ಹೊಸದಿಲ್ಲಿ: ವಾಹನೋದ್ಯಮಕ್ಕೆ ತೀವ್ರ ಹಿನ್ನಡೆಯುಂಟಾಗಿದೆ ಎಂದು ಹೇಳಲಾಗುತ್ತಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಕ್ಟೋಬರ್‌ನಲ್ಲಿ ವಾಹನ ಮಾರಾಟ 2.48 ಲಕ್ಷ ಆಗುವುದರೊಂದಿಗೆ ಶೇ.11ರಷ್ಟು ಏರಿಕೆ ಕಂಡಿದೆ.
ದೀಪಾವಳಿ ಮತ್ತು ನವರಾತ್ರಿ ಸಂದರ್ಭ ವಿವಿಧ ಕಂಪೆನಿಗಳು ಗ್ರಾಹಕರಿಗೆ ಸಾಕಷ್ಟು ಆಫ‌ರ್‌ಗಳನ್ನು ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ಮಾರಾಟ ಏರಿಕೆಯಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

Advertisement

ಅಟೋಮೊಬೈಲ್‌ ಡೀಲರ್‌ಗಳ ಒಕ್ಕೂಟ ನೀಡಿದ ಅಂಕಿ ಅಂಶಗಳ ಪ್ರಕಾರ ಮಾರಾಟ ಏರಿಕೆಯಾಗಿರುವುದು ಗೊತ್ತಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕಾರುಗಳ ಮಾರಾಟ 2,23,498 ಆಗಿತ್ತು.

ಇದೇ ವೇಳೆ ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟ ಶೇ.5ರಷ್ಟು ಏರಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಮಾರಾಟ 13,34,941 ಆಗಿತ್ತು. ತ್ರಿಚಕ್ರ ವಾಹನಗಳ ಮಾರಾಟ ಶೇ.4ರಷ್ಟು ಏರಿಕೆ ಕಂಡಿದ್ದು 59,573 ಆಗಿದೆ.
ಇದರೊಂದಿಗೆ 2018ರ ಹಬ್ಬದ ಸಮಯ ಮಾರಾಟವಾದ್ದಕ್ಕಿಂತ ಈ ಬಾರಿ ಕಾರು ಮಾರಾಟ ಹೆಚ್ಚಿದೆ ಎಂದು ತಯಾರಕ ಕಂಪೆನಿಗಳೂ ಒಪ್ಪಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next