Advertisement

ಧೂಳೆಬ್ಬಿಸಿದ ಕಾರ್‌ ‌ರ್ಯಾಲಿ

03:19 PM May 09, 2022 | Team Udayavani |

ಚಿಕ್ಕಮಗಳೂರು: ಅಬ್ಲೇಜ್‌ ಮೋಟಾರ್‌ ನ್ಪೋರ್ಟ್ಸ್ ಕ್ಲಬ್‌ ವತಿಯಿಂದ ಹಮ್ಮಿಕೊಂಡಿದ್ದ ಡರ್ಟ್‌ ಪ್ರಿಕ್ಸ್‌ ಆಟೋಕ್ರಾಸ್‌ ರ್ಯಾಲಿಯಲ್ಲಿ ಕಾರುಗಳು ಧೂಳೆಬ್ಬಿಸುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದವು.

Advertisement

ಭಾನುವಾರ ನಗರದ ಮೌಂಟೆನ್‌ವ್ಯೂ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಕಾರು ಚಾಲಕರು ಅತೀ ವೇಗವಾಗಿ ಚಲಾಯಿಸಿದರೆ ಪ್ರೇಕ್ಷಕರು ಶೀಟಿ ಹೊಡೆದು, ಚಪ್ಪಾಳೆ ತಟ್ಟಿ ಚಾಲಕರನ್ನು ಹುರಿದುಂಬಿಸಿದರು. ಅಂಕುಡೊಂಕಿನ ಟ್ರ್ಯಾಕ್‌ನಲ್ಲಿ ಕಾರುಗಳು ಅತೀವೇಗವಾಗಿ ಚಲಿಸುತ್ತಿದ್ದರೆ, ಮುಗಿಲೆತ್ತರಕ್ಕೆ ಧೂಳು ಆವರಿಸುತ್ತಿತ್ತು. ಮೈದಾನದ ಏರಿಗಳ ಮೇಲೆ ಕುಳಿತಿದ್ದ ಜನರು ಜೋರಾಗಿ ಕೂಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ರ್ಯಾಲಿಗೆ ಮುಂಬೈ, ಬೆಂಗಳೂರು, ತಮಿಳುನಾಡು, ಕೇರಳ ಹಾಗೂ ಜಿಲ್ಲೆಯ ಚಿಕ್ಕಮಗಳೂರು ಮತ್ತು ಮೂಡಿಗೆರೆ ಚಾಲಕರು ಪಾಲ್ಗೊಂಡು ಚಾಲನೆಯ ಚಾಕಚಕ್ಯತೆಯನ್ನು ಮೆರೆದರು.

ಚಾಂಪಿಯನ್‌ ಕಾರು ಚಾಲಕರಾದ ಬೆಂಗಳೂರಿನ ರೂಪೇಶ್‌, ಮೈಸೂರಿನ ಸೈಯದ್‌ ಸಲ್ಮಾನ್‌, ಉತ್ತರ ಕನ್ನಡದ ರಿತೇಶ್‌ ಗುತ್ತೇದಾರ್‌, ಚಿಕ್ಕಮಗಳೂರಿನ ಅಸದ್‌ಪಾಷ್‌, ಏಮನ್‌ ರ್ಯಾಲಿಯ ಕೇಂದ್ರಬಿಂದುವಾಗಿದ್ದರು.

ಅಬ್ಲೇಜ್‌ ಮೋಟಾರ್‌ ನ್ಪೋರ್ಟ್ಸ್ಕ್ಲಬ್‌ ಸ್ಥಾಪನೆಯಾಗಿ 10 ವರ್ಷವಾದ ಹಿನ್ನಲೆಯಲ್ಲಿ ಮೋಟಾರ್‌ ರ್ಯಾಲಿಯನ್ನು ಆಯೋಜಿಸಿದ್ದು ಅದ್ಧೂರಿಯಾಗಿ ಆರಂಭಗೊಂಡಿತು. 18 ವಿಭಾಗದಲ್ಲಿ ರ್ಯಾಲಿ ನಡೆದಿದ್ದು ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.

Advertisement

ಎಐಟಿ ಕಾಲೇಜು ಪ್ರಾಂಶುಪಾಲ ಡಾ| ಜಯದೇವ ರ್ಯಾಲಿಗೆ ಚಾಲನೆ ನೀಡಿದರು. ಚೇತನ ನರ್ಸಿಂಗ್‌ ಹೋಮ್‌ ಕಚೇಂದ್ರ, ಚಿಕ್ಕಮಗಳೂರು ಬುಲೆಟ್‌ ರೈಡರ್‌ಕ್ಲಬ್‌ನ ಯಧುಕುಮಾರ್‌, ವೀರಾಸ್‌ ಪ್ಲೈಹೋಮ್‌ ಡೆಕಾರ್‌ನ ಸೆಂದಿಲ್‌ ಭಾಗವಹಿಸಿದ್ದರು.

ಎ.ಎಂ.ಎಸ್.ಪಿ.ಯ ಅಧ್ಯಕ್ಷ ಗೌತಮ್‌, ಕಾರ್ಯದರ್ಶಿ ಧನುಷ್‌, ಉಪಾಧ್ಯಕ್ಷ ವಿನಯ್‌, ಪದಾಧಿಕಾರಿ ನಿಶಾಂತ್‌, ಅಭಿಷೇಕ್‌ರಾಜ್‌ ಅರಸ್‌, ಯಧುಕುಮಾರ್‌, ಬಾಬು, ಪೂರ್ಣಚಂದ್ರ, ಲೋಹಿತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next