Advertisement
ಪ್ರೇಮ್ ಹೇಗಿರುತ್ತದೆ?ಕಾರಿನ ಪ್ರೇಮ್ ಎಂದರೆ ಮೂಲ ರೂಪ. ಇದನ್ನು ಯುನಿಬಾಡಿ ಪ್ರೇಮ್‌ಗಳು ಎಂದು ಕರೆಯುತ್ತಾರೆ. ಟ್ರಕ್ ಸೇರಿದಂತೆ ದೊಡ್ಡ ವಾಹನಗಳಲ್ಲಿ ಲ್ಯಾಡರ್ ಪ್ರೇಮ್ ಎಂದಿರುತ್ತದೆ. ಕಾರುಗಳಲ್ಲಿ 11 ರೀತಿಯ ವಿವಿಧ ಭಾಗಗಳು ಸೇರಿ ಒಂದು ಯುನಿಬಾಡಿ ಪ್ರೇಮ್ ಆಗಿರುತ್ತದೆ. ಈ ಭಾಗಗಳನ್ನು ವೆಲ್ಡಿಂಗ್ ಮೂಲಕ ಜೋಡಿಸಲಾಗಿರುತ್ತದೆ. ಆಧುನಿಕ ಕಾರುಗಳಲ್ಲಿ ಪ್ರೇಮ್‌ಗಳಿಗೆ ಹಾನಿಯಾದಾಗ, ಆ ಭಾಗದ ಫ್ರೆàಮ್ ಅನ್ನು ಕತ್ತರಿಸಿ ತೆಗೆದು ಹೊಸ ಭಾಗವನ್ನು ಕೂಡಿಸಲಾಗುತ್ತದೆ. ಆದರೆ ಇವುಗಳ ರಿಪೇರಿ ಸಾಧ್ಯವಿದೆ. ಕುಶಲ ಕೆಲಸಗಾರರು, ವಿಶೇಷವಾದ ಹಲವು ಸಲಕರಣೆಗಳನ್ನು ಬಳಸಿ ರಿಪೇರಿಯನ್ನು ಮಾಡಬಲ್ಲರು.
ಪ್ರೇಮ್ ಸರಿಯಾಗಿಲ್ಲದಿದ್ದರೆ ಕಾರಿನ ಸುಗಮ ಚಾಲನೆಗೆ ಕಷ್ಟ. ಅಷ್ಟೇ ಅಲ್ಲದೇ ಪ್ರೇಮ್‌ಗೆ ಹಾನಿಯಾಗಿದ್ದಾಗ ಇಡೀ ಕಾರಿನ ಸ್ವರೂಪದಲ್ಲಿ ಬದಲಾಗಿರುತ್ತದೆ. ಸುರಕ್ಷತೆ ದೃಷ್ಟಿಯಿಂದಲೂ ಕಾರಿನ ಪ್ರೇಮ್ ಹಾನಿಗೊಳಗಾದಾಗ ರಿಪೇರಿ ಮಾಡಿಸುವುದು ಉತ್ತಮ. ಕಾರಿನ ಪ್ರೇಮ್ ಹಾನಿ ಗೊಂಡಿದ್ದರೆ ವಾಹನದ ಮೌಲ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಇಂತಹ ವಾಹನಗಳ ಮಾರಾಟ ಸುಲಭವಿಲ್ಲ. ಪ್ರೇಮ್ ರಿಪೇರಿ ಖರ್ಚೆಷ್ಟು?
ವಿವಿಧ ಕಾರುಗಳಿಗೆ ಅನುಗುಣವಾಗಿ ಈ ದರ ನಿಗದಿಯಾಗುತ್ತದೆ. ಕೆಲಸಗಾರರ ಕುಶಲತೆ, ಪರಿಣಾಮಕಾರಿತ್ವ ಹೆಚ್ಚಿದಷ್ಟೂ ದರವೂ ಹೆಚ್ಚು. ಸಾಮಾನ್ಯವಾಗಿ 25-50 ಸಾವಿರ ರೂ. ಖರ್ಚಾಗಬಹುದು. ಐಷಾರಾಮಿ ಕಾರುಗಳಾದರೆ ರಿಪೇರಿ ದರ ಲಕ್ಷ ರೂ. ದಾಟಬಹುದು.
Related Articles
ಫ್ಲೋರ್ ಆ್ಯಂಕರ್ ಪೋಸ್ಟ್: ಕಾರಿನ ತಳಭಾಗಕ್ಕೆ ಹಾನಿಗೀಡಾದಾಗ ಫ್ಲೋರ್ ಆ್ಯಂಕರ್ ಪೋಸ್ಟ್ ಚೈನ್ ಮೂಲಕ ತಳಭಾಗವನ್ನು ಎಳೆದು ಸರಿಮಾಡಲಾಗುತ್ತದೆ. ಮುದ್ದೆಯಾದ ಭಾಗವನ್ನು ಬಿಸಿ ಮಾಡಿ ಎಳೆಯಲಾಗುತ್ತದೆ. ಇದನ್ನು ಫ್ಲೋರ್ ಆ್ಯಂಕರ್ ಪೋಸ್ಟ್ ರಿಪೇರಿ ಎಂದು ಕರೆಯುತ್ತಾರೆ.
Advertisement
ಪುಲ್ಲಿಂಗ್ ಪೋಸ್ಟ್: ಕಾರಿನಲ್ಲಿ ಮುಂಭಾಗ ಎರಡು ಮತ್ತು ಹಿಂಭಾಗ ಎರಡು ಕಡೆಗಳಲ್ಲಿ ಪ್ರಮುಖವಾಗಿ ಜೋಡಣೆಯಾದ ಭಾಗವಿದೆ. ಈ ಭಾಗಗಳು ಹಾನಿಗೊಳಗಾದಾಗ ಅವುಗಳ ಬದಿಗಳನ್ನು ಎಳೆದು ಹಿಂದಿನಂತೆ ಮಾಡಲಾಗುತ್ತದೆ ಅಥವಾ ಕತ್ತರಿಸಿ ಮರುಜೋಡಣೆ ಮಾಡಲಾಗುತ್ತದೆ. ಇದಕ್ಕೆ ಪುಲ್ಲಿಂಗ್ ಪೋಸ್ಟ್‌ಗಳು ಎಂದು ಹೆಸರು. ಪ್ರೇಮ್‌ನ ಬದಿಗಳು ಒಳಕ್ಕೆ ಹೋಗಿದ್ದರೂ ಇದೇ ವಿಧಾನದಲ್ಲಿ ರಿಪೇರಿ ಮಾಡಲಾಗುತ್ತದೆ.
ಪ್ರೇಮ್ ರ್ಯಾಕ್: ಇಡೀ ಕಾರು ನೇರವಾಗಿರಬೇಕು. ಹೀಗಿ ಲ್ಲದಿದ್ದರೆ ತಿರುವುಗಳಲ್ಲಿ ಎಳೆದ ಅನುಭವಗಳಾಗುತ್ತವೆ. ಪ್ರೇಮ್‌ಗೆ ಹಾನಿಯಾಗಿದ್ದರೆ ಅದನ್ನು ನೇರಗೊಳಿಸುವುದು ಪ್ರೇಮ್ ರ್ಯಾಕ್. ಇದೊಂದು ಸಾಧನದ ಮೂಲಕ ಕಾರಿನ ಮೂಲ ಪ್ರೇಮ್ ರ್ಯಾಕ್ ಅನ್ನು ನೇರಗೊಳಿಸಲಾಗುತ್ತದೆ.
ಬಾಡಿ ರಿಪೇರಿ: ಇಡೀ ಕಾರಿನ ಬಾಡಿ ಒಂದೇ ರೀತಿ ಯಾಗಿರಬೇಕು. ಡೋರುಗಳು, ಹಿಂಭಾಗ, ಮುಂಭಾಗದ ಬಾನೆಟ್ ನವಿರಾಗಿ ರೂಪಿತವಾಗಿರಬೇಕು. ಇದಕ್ಕಾಗಿ ವಿವಿಧ ಸಲಕರಣೆಗಳ ಮೂಲಕ ಬಾಡಿ ರಿಪೇರಿ, ನೇರಗೊಳಿಸುವ, ಬೇಕಾದ ಕಡೆಗಳಲ್ಲಿ ಬಾಗಿಸುವ ಕೆಲಸವನ್ನು ಮಾಡಲಾಗುತ್ತದೆ.
- ಈಶ