Advertisement

Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

12:19 PM May 17, 2024 | Team Udayavani |

ಬೀದರ್: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ನಾಲಿಗೆ ಬಿದ್ದ ಘಟನೆ ಬೀದರ್ ನಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Advertisement

ಬೀದರ್ ಹೊರ ವಲಯದ ನೌಬಾದ್ ಬಳಿ ಘಟನೆ ನಡೆದಿದೆ. ವೀರೇಶ್ ನಾಗಶೆಟ್ಟಿ (25) ಸಾವನ್ನಪ್ಪಿದ ದುರ್ದೈವಿ ಚಾಲಕ. ಕಾರು ಪಲ್ಟಿಯಾದ ರಭಸಕ್ಕೆ ವೀರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ವೀರೇಶ್ ಅವರು ಕಾರು ಮಾಲೀಕರನ್ನು ಮನೆಗೆ ಬಿಟ್ಟು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ.

ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next