Advertisement

ಕಾರು ಸಾಲ ಶೇ.30ರಷ್ಟು ಏರಿಕೆ

07:35 AM Dec 20, 2017 | Team Udayavani |

ಮುಂಬೈ: ಭಾರತದಲ್ಲಿ ಕಾರು ಕೊಳ್ಳಲು ಪಡೆಯಲಾಗುತ್ತಿರುವ ಸಾಲದ ಮೊತ್ತ ಪ್ರಸಕ್ತ ವರ್ಷದಲ್ಲಿ ಶೇ.30ರಷ್ಟು ಹೆಚ್ಚಾಗಿದೆ ಎಂದು ಕ್ರಿಫ್ ಹೈಮಾರ್ಕ್‌ ಎಂಬ ಸಂಸ್ಥೆಯು ತನ್ನ ಸಮೀûಾ ವರದಿಯಲ್ಲಿ ತಿಳಿಸಿದೆ. 

Advertisement

ಜನವರಿಯಿಂದ ಸೆಪ್ಟೆಂಬರ್‌ವರೆಗೆ ಭಾರತದಾದ್ಯಂತ ನಡೆಸಲಾಗಿದ್ದ ಸಮೀಕ್ಷೆ ಯಲ್ಲಿ, 3.59 ಲಕ್ಷ ಕೋಟಿ ರೂ.ಗಳಷ್ಟು ಕಾರು ಸಾಲ ನೀಡಲಾಗಿದ್ದು, ಇದರಿಂದ 31 ಲಕ್ಷ ಕಾರುಗಳ ಮಾರಾಟಕ್ಕೆ ಅನುಕೂಲವಾಗಿದೆ. ಅಲ್ಲದೆ, ಸೆಪ್ಟೆrಂಬರ್‌ ಅಂತ್ಯದ ಹೊತ್ತಿಗೆ 17 ಲಕ್ಷ ಕಾರುಗಳಿಗೆ ಅದಾಗಲೇ ಫೈನಾನ್ಸ್‌ ಒದಗಿಸಿಯಾಗಿ ತ್ತೆಂದು ವರದಿ ಹೇಳಿದೆ. ಕಳೆದ 3 ವರ್ಷಗಳಲ್ಲಿ ಗ್ರಾಹಕನೊಬ್ಬ ಕೊಳ್ಳುತ್ತಿರುವ ಸರಾಸರಿ ಕಾರು ಸಾಲದ ಪ್ರಮಾಣದಲ್ಲೂ ಏರಿಕೆಯಾಗಿದ್ದು, 2016 -17ರ ಆರ್ಥಿಕ ವರ್ಷದಲ್ಲಿ ಇದು 5.5 ಲಕ್ಷ ರೂ.ಗಳಿಗೆ ಮುಟ್ಟಿದೆ. ಮೂರು ವರ್ಷಗಳ ಹಿಂದೆ ಇದು 4.5 ಲಕ್ಷ ರೂ.ಗಳಷ್ಟಿತ್ತು. 

ಮತ್ತೂಂದು ಆಸಕ್ತಿದಾಯಕ ವಿಚಾರ ವೇನೆಂದರೆ, 5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಕಾರು ತೆಗೆದುಕೊಳ್ಳುತ್ತಿರು ವವರ ಪ್ರಮಾಣ ಹೆಚ್ಚಾಗುತ್ತಿರುವುದು. ಈ ವರ್ಷ ಕಾರು ಸಾಲ ಪಡೆದಿರುವ ಒಟ್ಟು ಗ್ರಾಹಕರಲ್ಲಿ ಶೇ. 40ರಷ್ಟು ಜನ, 5ರಿಂದ 10 ಲಕ್ಷ ರೂ. ಸಾಲ ಪಡೆದವರೇ ಆಗಿದ್ದಾರೆ. ಇದೇ ಈಗ ಸದ್ಯದ ಜನಪ್ರಿಯ ಸಾಲದ ಪ್ರಮಾಣವಾಗಿದೆ. ಈ ಹಿಂದೆ, ಹೆಚ್ಚು ಮಂದಿ 2ರಿಂದ 5 ಲಕ್ಷ ರೂ.ಗಳ ಸಾಲದ ಮೊರೆ ಹೋಗುತ್ತಿದ್ದರು. ಈಗ 5ರಿಂದ 10 ಲಕ್ಷ ರೂ.ಗಳತ್ತ ಹೋಗುತ್ತಿರುವುದು ಜನರ ಬದಲಾದ ಅಗತ್ಯ, ಆಶಯಗಳ ಪ್ರತೀಕವೆಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next