Advertisement

ಶರವು ಮಹಾಗಣಪತಿ ದೇಗುಲದಲ್ಲಿ ರಥೋತ್ಸವ

10:22 AM Mar 26, 2018 | Team Udayavani |

ಮಹಾನಗರ: ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಅಂಗವಾಗಿ ರವಿವಾರ ಬಡಾಜೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೈಭವದ ರಥೋತ್ಸವ ಸಂಪನ್ನಗೊಂಡಿತು.

Advertisement

ಬೆಳಗ್ಗೆ 10ಕ್ಕೆ ರಥಕಲಶ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ದೇವರ ಉತ್ಸವ ಮೂರ್ತಿ ದೇಗುಲದಿಂದ ಹೊರಬಂದು ಮಧ್ಯಾಹ್ನ 1ಗಂಟೆ ವೇಳೆಗೆ ರಥಾರೋಹಣವಾಯಿತು. ಬಳಿಕ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ, ಸುದೇಶ್‌ ಶಾಸ್ತ್ರಿ, ರಾಹುಲ್‌ ಶಾಸ್ತ್ರಿಯವರು ತೇರಿ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಮಧ್ಯಾಹ್ನ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ 8.30ಕ್ಕೆ ದೊಡ್ಡ ರಥೋತ್ಸವವಾಗಿ ಭಕ್ತರು ತೇರನ್ನೆಳೆದು ಸಂಭ್ರಮಿಸಿದರು. 10ಕ್ಕೆ ಮಹಾಪೂಜೆ, ಶ್ರೀ ಭೂತ ಬಲಿ, ಕವಾಟ ಬಂಧನ ನಡೆಯಿತು. ಶನಿವಾರ ರಾತ್ರಿ ಜೋಡುದೇವರ ಬಲಿ ಉತ್ಸವ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next