Advertisement

ಮಂಡ್ಯದಲ್ಲಿ ನಾಲೆಗೆ ಬಿದ್ದ ಕಾರು: ನಾಪತ್ತೆಯಾದ ಚಾಲಕ; ಮುಂದುವರಿದ ಶೋಧ ಕಾರ್ಯ

01:23 PM Jul 27, 2023 | Team Udayavani |

ಮಂಡ್ಯ: ನಾಲೆಗೆ ಕ್ರೇಟಾ ಕಾರು ಪಲ್ಟಿಯಾಗಿ ಕಾರು ಚಾಲಕ ನಾಪತ್ತೆಯಾಗಿರುವ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಯಲ್ಲಿ ಘಟನೆ ಗುರುವಾರ ನಡೆದಿದೆ.

Advertisement

ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ಲೋಕೇಶ್ ನಾಪತ್ತೆಯಾಗಿರುವ ಚಾಲಕ.

ನಿಯಂತ್ರಣ ತಪ್ಪಿದ ಕಾರಣ ಕಾಲುವೆಗೆ ಕಾರು ಹಾರಿದೆ. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ಕಾಲುವೆಗೆ ಕಾರು ಬಿದ್ದಿದೆ. ಕಾರು ಚಲಿಸುತ್ತಿದ್ದ ಚಾಲಕ ಲೋಕೇಶ್ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ:Video: ಮೇಲ್ಛಾವಣಿ ಕಿತ್ತು ಹೋದರೂ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದೆ ಸಾರಿಗೆ ಬಸ್…

ಕಾಲುವೆಯಲ್ಲಿ ಹೆಚ್ಚು ನೀರು ಇರುವ ಕಾರಣ ಕಾರು ಮುಳುಗಿದೆ. ಇದೀಗ ಕಾರನ್ನು ಮೇಲಕ್ಕೆತ್ತಲಾಗಿದ್ದು, ನಾಪತ್ತೆಯಾಗಿರುವ ಲೋಕೇಶ್‌ಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

ಕಾಪಾಡಿ ಎಂದು ಕೂಗಿದ್ದ: ವಿಸಿ ನಾಲೆಗೆ ಕಾರು ಪಲ್ಟಿಯಾಗಿ ನಾಪತ್ತೆಯಾಗಿರುವ ಲೋಕೇಶ್ ಕಾರಿನಿಂದ ಹೊರಬಂದಿದ್ದರು. ಈಜು ಬರಲ್ಲ ಕಾಪಾಡಿ ಎಂದರು. ಆದರೆ ನಮಗೂ ಈಜು ಬರುತ್ತಿರಲಿಲ್ಲ. ಆದ್ದರಿಂದ ಅವರನ್ನ ಕಾಪಾಡಲು ಆಗಲಿಲ್ಲ. ನಂತರ ನೀರಿನಲ್ಲಿ ಮುಳುಗಿದ ಲೋಕೇಶ್ ಮತ್ತೆ ಮೇಲೆ ಏಳಲಿಲ್ಲ ಎಂದು ಪ್ರತ್ಯಕ್ಷದರ್ಶಿ ವೀರಭದ್ರ ಹೇಳಿದರು.

ಹಿಂದೆಯೂ ನಡೆದಿತ್ತು: 2017ರಲ್ಲಿ ಕಾಲುವೆಗೆ ತಡೆಗೋಡೆ ಇಲ್ಲದೇ ಬಸ್ ದುರಂತ ನಡೆದಿತ್ತು. ಈ‌ ಘಟನೆಯ ಬಳಿಕ ಕಾಲುವೆಯ ಉದ್ದಕ್ಕೂ ತಡೆಗೋಡೆ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು. ಇಷ್ಟಾದರೂ ತಡೆಗೊಡೆ ನಿರ್ಮಾಣ ಮಾಡಿಲ್ಲ. ತಡೆಗೋಡೆ ಇಲ್ಲದ ಕಾರಣ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next