Advertisement

ಪೊಲೀಸ್ ಮೇಲೆಯೇ ಕಾರು ಚಲಾಯಿಸಿದ ಕಿರಾತಕ : ಭಯಾನಕ ವಿಡಿಯೋ ಇಲ್ಲಿದೆ ನೋಡಿ

05:59 PM Aug 14, 2021 | Team Udayavani |

ಪಂಜಾಬ್ : ತಪಾಸಣೆಗೆ ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆಯೇ ಕಾರು ಚಲಾಯಿಸಿದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ.

Advertisement

ಇಂದು (ಆ.14) ವಾಹಗಳ ತಪಾಸಣೆ ವೇಳೆ ಈ ದುರ್ಘಟನೆ ನಡೆದಿದೆ. ಬಿಳಿ ಬಣ್ಣದ ಕಾರಿನ ಚಾಲಕ ಈ ದೃಷ್ಕೃತ್ಯ ಎಸಗಿದ್ದಾನೆ. ಈ ಭಯಾನಕ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸ್ ಸಿಬ್ಬಂದಿ ಕಾರು ತಪಾಸಣೆ ಮುಂದಾಗಿದ್ದಾನೆ. ಈ ವೇಳೆ ಆ ಅಧಿಕಾರಿ ಮೇಲೆಯೇ ಕಾರು ಚಲಾಯಿಸಿದ್ದಾನೆ ಕಿರಾತಕ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಕಾರು ಚಾಲಕನನ್ನು ಪತ್ತೆ ಹಚ್ಚಲಾಗಿದೆ ಎಂದು ಡಿಎಸ್ ಪಿ ಹೇಮಂತ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next