ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರದ ನಡುವೆಯೂ 10 ಬಸ್ಸುಗಳನ್ನು ಹಳೇ ಬಸ್ ನಿಲ್ದಾಣಕ್ಕೆ ತಂದಿದ್ದು, ಬೆಳಗಾವಿ, ಶಿರಸಿ, ಗದಗ, ಶಿರಹಟ್ಟಿ, ಧಾರವಾಡ, ಕಲಘಟಗಿ ಮಾರ್ಗಗಳಿಗೆ ಬಸ್ಸುಗಳನ್ನು ಬಿಡಲಾಗಿದೆ.
ಹಳೇ ಬಸ್ ನಿಲ್ದಾಣಕ್ಕೆ ಬಸ್ಸುಗಳು ಬಂದಿದ್ದು, ಪ್ರಯಾಣಿಕರು ಇಲ್ಲದಂತಾಗಿದೆ. ಬೆಳಗಾವಿ ಹಾಗೂ ಗದಗ ಮಾರ್ಗದಲ್ಲಿ ಒಂದಿಷ್ಟು ಪ್ರಯಾಣಿಕರಿದ್ದು ಉಳಿದ ಮಾರ್ಗಗಳಿಗೆ ಪ್ರಯಾಣಿಕರು ಇಲ್ಲದಂತಾಗಿದೆ.
ಇದನ್ನೂ ಓದಿ:2023ರೊಳಗೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ ಬಿ.ಎನ್.ಬಚ್ಚೇಗೌಡ
ಸಂಸ್ಥೆಯ ಅಧಿಕಾರಿಗಳ ಕಾರುಗಳನ್ನು ಚಾಲನೆ ಮಾಡುತ್ತಿದ್ದ ಚಾಲಕರನ್ನು ಕರೆದುಕೊಂಡು ಬಸ್ಸು ಓಡಿಸಲು ಮುಂದಾಗಿದ್ದಾರೆ. ಬಸ್ಸುಗಳು ಆರಂಭವಾಗುತ್ತಿದ್ದಂತೆ ಕೆಲ ನೌಕರರು ಕರ್ತವ್ಯಕ್ಕೆ ಹಾಜರಾಗಬಹುದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ನೌಕರರ ಕುಟುಂಬದವರ ವಿರೋಧ: ಅಧಿಕಾರಿಗಳ ಚಾಲಕರ ಮೂಲಕ ಬಸ್ಸುಗಳನ್ನು ಹೊರ ತೆಗಿಸಿದ್ದನ್ನು ನೌಕರರ ಕುಟುಂದವರು ವಿರೋಧ ವ್ಯಕ್ತಪಡಿಸಿ ಗೋಕುಲ ರಸ್ತೆಯಲ್ಲಿ ಬಸ್ಸುಗಳನ್ನು ಅಡ್ಡಗಟ್ಟಿದ ಘಟನೆ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದರು.
ಇದನ್ನೂ ಓದಿ: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್!