Advertisement
ಎಬಿಎಸ್- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂತುರ್ತು ಸನ್ನಿವೇಶಗಳಲ್ಲಿ ಸಡನ್ ಬ್ರೇಕ್ ಹಾಕಿದಾಗ ಕಾರು ನಿಯಂತ್ರಣ ಕಳೆದುಕೊಳ್ಳುವುದನ್ನು ಈ ಸವಲತ್ತು ತಪ್ಪಿಸುತ್ತದೆ.
ಕತ್ತಲಲ್ಲಿ ಕಾರಿನಿಂದ ಸುರಕ್ಷಿತವಾಗಿ ಇಳಿಯಲು ಅನುವು ಮಾಡಿಕೊಡುವ ಲ್ಯಾಂಪ್ ಇದು. ಇವು ಕಾರಿನ ಬಾಗಿಲ ಬಳಿ ಬೆಳಕನ್ನು ಬೀರುವುದರಿಂದ ಮಕ್ಕಳು, ವಯಸ್ಕರು ತೊಂದರೆಯಾಗದಂತೆ ಇಳಿಯಬಹುದು. ಏರ್‌ಬ್ಯಾಗ್
ಇದು ಕಾರು ಅಪಘಾತಕ್ಕೆ ಒಳಗಾದಾಗ ಬಲೂನಿನಂತೆ ಊದಿಕೊಳ್ಳುವ, ಮೆದುವಾದ ಕುಶನ್ ಮಟೀರಿಯಲ್‌ನಿಂದ ತಯಾರಾದ ವಸ್ತು. ಮಿಕ್ಕ ಸಮಯದಲ್ಲಿ ಇದು ಕಾಣದಂತೆ ಕಾರಿನ ಮುಂಭಾಗದಲ್ಲಿ ಹುದುಗಿರುತ್ತದೆ. ಅಪಘಾತದ ಸಮಯದಲ್ಲಿ ಪ್ರಯಾಣಿಕರ ಹಣೆ ಮುಂಭಾಗಕ್ಕೆ ಚಚ್ಚಿಕೊಳ್ಳುವುದರಿಂದ ಆ ಅಪಾಯದಿಂದ, ಏರ್ ಬ್ಯಾಗ್ ರಕ್ಷಿಸುತ್ತದೆ. ಇತ್ತೀಚಿನ ಕಾರುಗಳಲ್ಲಿ ಹಿಂಬದಿಯ ಪ್ರಯಾಣಿಕರಿಗೂ ಏರ್‌ಬ್ಯಾಗುಗಳನ್ನು ನೀಡಲಾಗುತ್ತಿದೆ.
Related Articles
ಕಾರನ್ನು ಚಲಾಯಿಸುವಾಗ ಚಾಲಕ ತನ್ನ ಕಾಲನ್ನು ಆ್ಯಕ್ಸೆಲೇಟರ್ ಪೆಡಲ್ ಮೇಲೆ ಒತ್ತಿರುತ್ತಾನೆ. ಹೈವೇಗಳಲ್ಲಿ, ಲಾಂಗ್ ಡ್ರೈವ್ ಹೋಗುವಾಗ ಇದು ಚಾಲಕನಿಗೆ ತ್ರಾಸ ಎನ್ನಿಸಬಹುದು. ಅದನ್ನು ತಪ್ಪಿಸುವ ಸವಲತ್ತು ಇದು. ಇದರಲ್ಲಿ ಚಾಲಕ ನಿರ್ದಿಷ್ಟ ವೇಗವನ್ನು ಕಂಪ್ಯೂಟರ್ ಸಹಾಯದಿಂದ ಕಾರಿಗೆ ಫೀಡ್ ಮಾಡಿಬಿಟ್ಟರೆ ಸಾಕು. ಕ್ರೂಸ್ ಕಂಟ್ರೋಲ್ ಬಟನ್ ಅದುಮಿ, ಚಾಲಕ ಆ್ಯಕ್ಸೆಲರೇಟರ್ ಪೆಡಲ್‌ನಿಂದ ಕಾಲನ್ನು ಹಿಂತೆಗೆದುಕೊಳ್ಳಬಹುದು. ಆ ಪೆಡಲ್ ಅದುಮದೆಯೂ ಕಾರು ಚಾಲಕ ಫೀಡ್ ಮಾಡಿದ ವೇಗದಲ್ಲಿ ಕಾರು ಚಲಿಸುತ್ತದೆ. ಆದರೆ ಕಾರನ್ನು ತಿರುಗಿಸುವುದು, ಬ್ರೇಕ್ ಒತ್ತುವುದು ಮತ್ತಿತರ ಜವಾಬ್ದಾರಿ ಚಾಲಕನದೇ ಆಗಿರುತ್ತದೆ. ಹೀಗಾಗಿ ಆತ ಎಚ್ಚರಿಕೆಯಿಂದಲೇ ಈ ಸವಲತ್ತನ್ನು ಬಳಸಿಕೊಳ್ಳಬೇಕು.
Advertisement
ಫಾಲೋ ಮಿ ಲ್ಯಾಂಪ್ಕತ್ತಲಲ್ಲಿ ಕಾರನ್ನು ಪಾರ್ಕ್ ಮಾಡಿ, ಇಗ್ನಿಷನ್ ಆಫ್ ಮಾಡಿದ್ದೀರಿ ಎಂದುಕೊಳ್ಳೋಣ. ಈಗ ಮನೆ ಕಾರಿನಿಂದ ಸ್ವಲ್ಪ ದೂರವಿದೆ ಎಂದಾದರೆ ಕತ್ತಲಲ್ಲಿ ಅಲ್ಲಿಯವರೆಗೆ ನಡೆದುಹೋಗಬೇಕಲ್ಲ. ಕಾರಿನಲ್ಲಿ ಯಾರಾದರೂ ಇದ್ದಿದ್ದರೆ ಹೆಡ್‌ಲೈಟ್ ಆನ್ ಮಾಡಬಹುದಿತ್ತು. ಆದರೆ ಒಬ್ಬರೇ ಇದ್ದಾಗ, ಅಥವಾ ಎಲ್ಲರೂ ಕಾರಿನಿಂದ ಇಳಿದು ಹೋಗಬೇಕಾದಾಗ ಸಹಾಯಕ್ಕೆ ಬರುತ್ತದೆ ಫಾಲೋ ಮಿ ಲ್ಯಾಂಪ್. ಈ ಆಯ್ಕೆಯನ್ನು ಆರಿಸಿದರೆ ಇಗ್ನಿಷನ್ ಆಫ್ ಮಾಡಿ ಕಾರನ್ನು ಲಾಕ್ ಮಾಡಿದ ನಂತರವೂ ಫಾಲೋ ಮಿ ಲ್ಯಾಂಪು ನಿರ್ದಿಷ್ಟ ಸಮಯದವರೆಗೆ ಆನ್ ಆಗಿರುವುದು. ನಂತರ ತನ್ನಷ್ಟಕ್ಕೇ ಆಫ್ ಆಗುವುದು. ಅದು ಆನ್ ಆಗಿರುವ ಸಮಯದೊಳಗೆ ಕತ್ತಲಲ್ಲಿ ದಾಟಿಕೊಳ್ಳಬಹುದು. ಚೈಲ್ಡ್ ಲಾಕ್
ಕಾರು ಚಲಿಸುತ್ತಿರುವಾಗ ಹಿಂಬದಿಯಲ್ಲಿ ಕುಳಿತ ಪ್ರಯಾಣಿಕರು ಅಕಸ್ಮಾತ್ ಆಗಿ ಕಾರಿನ ಬಾಗಿಲುಗಳನ್ನು ತೆರೆಯದಂತೆ ಈ ಸವಲತ್ತು ತಡೆಯುತ್ತದೆ. ಮುಖ್ಯವಾಗಿ ಮಕ್ಕಳು ಆಟವಾಡುತ್ತಾ ಬಾಗಿಲು ತೆರೆಯುತ್ತಾರೆ ಎಂದು ಮುನ್ನೆಚ್ಚರಿಕೆಯಾಗಿ ಈ ಸವಲತ್ತನ್ನು ನೀಡಲಾಗುತ್ತದೆ. ಚಾಲ್ಡ್ ಲಾಕ್ ಬಟನ್ ಅನ್ನು ಅದುಮಿದರೆ ಹಿಂಬದಿಯ ಬಾಗಿಲುಗಳು ಒಳಗಿನಿಂದ ಲಾಕ್ ಆಗುತ್ತವೆ. ಒಳಗೆ ಕುಳಿತವರು ಬಾಗಿಲು ತೆರೆಯಲು ಆಗುವುದಿಲ್ಲ. ಹೊರಗಿನಿಂದ ಮಾತ್ರ ತೆರೆಯಬಹುದು. ಪ್ರಯಾಣದ ಸಮಯದಲ್ಲಿ ಈ ಸವಲತ್ತು ನೆರವಿಗೆ ಬರುತ್ತದೆ. ಗ್ಲೋವ್ ಬಾಕ್ಸ್
ಕಾರು ಚಾಲಕನ ಪಕ್ಕದ ಸೀಟಿನ ಎದುರು ಡ್ಯಾಷ್‌ಬೋರ್ಡ್‌ನಲ್ಲಿ ಕಾಗದ ಪತ್ರಗಳು, ಫೈಲುಗಳು, ಪರ್ಸು, ಲೈಸೆನ್ಸ್ ಮುಂತಾದವನ್ನು ಇಡಲು ಒಂದು ಬಾಕ್ಸ್ ನೀಡಿರುತ್ತಾರೆ. ಅದನ್ನು ಗ್ಲೋವ್ ಬಾಕ್ಸ್ ಎಂದು ಕರೆಯುತ್ತಾರೆ. ಬೂಟ್ ಸ್ಪೇಸ್
ಕಾರಿನಲ್ಲಿ ಲಗೇಜ್ ಇಡುವ ಜಾಗ ಎಂದರೆ ಅದು ಡಿಕ್ಕಿ. ಹಿಂಬದಿಯ ಬಾಗಿಲನ್ನು ಮೇಲಕ್ಕೆ ತೆರೆದರೆ ಈ ಲಗೇಜ್ ಇಡಬಹುದಾದ ಖಾಲಿ ಜಾಗ ಕಾಣುತ್ತದೆ. ಅದನ್ನೇ ಬೂಟ್ ಸ್ಪೇಸ್ ಎಂದು ಕರೆಯುವರು. ಹವನ