ಸುಳ್ಯ: ನಗರದ ಮೊಗರ್ಪಣೆಯಲ್ಲಿ ಮೂರು ವಾಹನಕ್ಕೆ ಢಿಕ್ಕಿಯಾಗಿ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಮತ್ತೂಂದು ಕಾರಿನ ಚಾಲಕ ಬೆನ್ನಟ್ಟಿ ಹಿಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಐವರ್ನಾಡಿನ ವ್ಯಕ್ತಿ ಸುಳ್ಯ ಕಡೆಯಿಂದ ತನ್ನ ಕಾರಿನಲ್ಲಿ ಪೈಚಾರು ಕಡೆಗೆ ವೇಗವಾಗಿ ಬಂದ ವೇಳೆ ಎರಡು ಕಾರು ಮತ್ತು ಒಂದು ಪಿಕಪ್ ವಾಹನಕ್ಕೆ ಢಿಕ್ಕಿಯಾಗಿ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಢಿಕ್ಕಿಗೊಳಗಾದ ಒಂದು ಕಾರಿನ ಚಾಲಕ ಆತನನ್ನು ಬೆನ್ನಟ್ಟಿ ಹಳೆಗೇಟು ಪೆಟ್ರೋಲ್ ಬಂಕ್ ಬಳಿ ತಡೆದಿದ್ದಾರೆ. ಬಳಿಕ ಇತರರು ಆಗಮಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ವಾಹನಗಳಿಗೆ ಹಾನಿ ಸಂಭವಿಸಿದೆ. ಸುಳ್ಯ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ.
ಸುಳ್ಯ: ಕಾರು-ಸ್ಕೂಟಿ ಢಿಕ್ಕಿ; ಗಾಯ
ಸುಳ್ಯ: ನಗರದ ಹಳೆಗೇಟು ಸಮೀಪ ಸ್ಕೂಟಿ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಪೈಚಾರು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಸ್ಕೂಟಿ ಸುಳ್ಯದಿಂದ ಪೈಚಾರು ಕಡೆ ಹೋಗುತ್ತಿದ್ದ ಕಾರಿನ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಸ್ಕೂಟಿ ಸವಾರ ಗಾಯಗೊಂಡಿದ್ದು, ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದರು. ಘಟನೆ ವೇಳೆ ಧಾರಕಾರ ಮಳೆ ಬರುತ್ತಿದ್ದರಿಂದ ಅಪಘಾತಕ್ಕೀಡಾದ ಸ್ಕೂಟಿ ರಸ್ತೆ ಮಧ್ಯೆ ಬಾಕಿಯಾಗಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಬಳಿಕ ವಾಹನವನ್ನು ತೆರವು ಮಾಡಲಾಯಿತು.