ಕಾಬೂಲ್: ಸೇನಾನೆಲೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ ಬಾಂಬ್ ಸ್ಪೋಟದಲ್ಲಿ 31 ಮಂದಿ ಸೈನಿಕರು ಅಸುನೀಗಿದ್ದು, 24 ಮಂದಿ ಗಾಯಗೊಂಡ ಘಟನೆ ರವಿವಾರ ಅಫ್ಘಾನಿಸ್ಥಾನದಲ್ಲಿ ನಡೆದಿದೆ.
ಪೂರ್ವ ಅಫ್ಗಾನಿಸ್ತಾನದ ಘಜ್ನಿಯಲ್ಲಿ ಈ ದಾಳಿ ನಡೆದಿದೆ. ತಾಲಿಬಾನ್ ಉಗ್ರ ಪಡೆಗಳು ಈ ದಾಳಿ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಭಾಗದಲ್ಲಿ ಉಗ್ರರು ಮತ್ತು ಸೇನೆ ನಡುವೆ ನಿರಂತರವಾಗಿ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ.
ದಕ್ಷಿಣ ಅಫ್ಘಾನಿಸ್ತಾನದಲ್ಲಿ ಮತ್ತೊಂದು ಆತ್ಮಹತ್ಯಾ ಕಾರ್ ಬಾಂಬ್ ನಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಜುಬಲ್ ನ ಪ್ರಾಂತೀಯ ಕೌನ್ಸಿಲ್ ಮುಖ್ಯಸ್ಥರ ಬೆಂಗಾವಲು ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ:ಬಾಹ್ಯಾಕಾಶದಲ್ಲಿ ಭಾರತ- ರಷ್ಯಾ ಉಪಗ್ರಹ ಮುಖಾಮುಖಿ: ಅಲ್ಪ ಅಂತರದಲ್ಲಿ ತಪ್ಪಿದ ಘರ್ಷಣೆ !
ಈ ದಾಳಿಯಲ್ಲಿ ಕನಿಷ್ಠ ಮೂರು ಜನರನ್ನು ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ. ದಾಳಿಗಳ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.