Advertisement

ಅಮಾನ್ಯಗೊಂಡ ನೋಟು ಬದಲಾವಣೆಗೆ ಯತ್ನಿಸಿದವರ ಸೆರೆ

11:49 AM May 16, 2017 | Team Udayavani |

ಬೆಂಗಳೂರು: ಅಮಾನ್ಯಗೊಂಡ 500 ಮತ್ತು 1000 ಮುಖಬೆಲೆಯ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ 10 ಮಂದಿಯನ್ನು ಬಸವನಗುಡಿಯ  ದೊಡ್ಡಗಣಪತಿ ದೇವಸ್ಥಾನದ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3.25 ಕೋಟಿ ಮೊತ್ತದ ಹಳೇ ನೋಟುಗಳನ್ನು ಮತ್ತು ಕಾರವೊಂದನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಶ್ರೀನಿವಾಸ್‌, ಮಹೇಶ್‌, ಕರುಣಾಕರನ್‌, ಅಬ್ದುಲ್‌ ಮುಜಿಬ್‌, ನೀಲಕಂಠ, ಎಚ್‌.ಜಿ. ಭಂಜನ ಗೌಡ, ನಾರಾಯಣ, ಉದಯ್‌ಕುಮಾರ್‌, ಕಾರ್ತಿಕ್‌, ರುದ್ರಕುಮಾರ್‌ ಬಂಧಿತರು. ಆರೋಪಿಗಳು ಸಂಬಂಧಿಕರ, ಸ್ನೇಹಿತರ ಬಳಿ ಇದ್ದ ಹಳೆ ನೋಟುಗಳನ್ನು ಸಂಗ್ರಹಿಸಿಕೊಂಡು, ಶೇ.30ರಷ್ಟು ಕಮಿಷನ್‌ಗೆ ಬದಲಾವಣೆ ಮಾಡಲು ಸಿದ್ಧತೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ಆರೋಪಿಗಳು ಸಂಪರ್ಕಿ ಸಿದ್ದರು. ಆ  ಅಪರಿಚಿತವ್ಯಕ್ತಿ ದೊಡ್ಡಗಣಪತಿ ದೇವಾಲಯದ ಬಳಿ ಬರುವಂತೆ ಸೂಚಿಸಿದ್ದ. ಈ ನಡುವೆ ಖಚಿತ ಮಾಹಿತಿ ಪಡೆದ ಪೊಲೀಸರು ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗ ಡಿಸಿಪಿ ಡಾ ಶರಣಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಳೆ ನೋಟುಗಳ ಬದಲಾವಣೆಗೆ ಒಪ್ಪಿಕೊಂಡಿದ್ದ ವ್ಯಕ್ತಿಯ ಕಡೆಯವರೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಬಂಧಿತರ ಕರೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next