Advertisement

ತ್ರಿವಳಿ ತಲಾಖ್‌ ಕೊಟ್ಟವನ ಸೆರೆ

11:25 PM Sep 09, 2019 | Team Udayavani |

ಕುಂದಾಪುರ: ತ್ರಿವಳಿ ತಲಾಖ್‌ ನಿಷೇಧ ಕಾಯ್ದೆಯನ್ವಯ ಮೂಡುಗೋಪಾಡಿಯ ನಿವಾಸಿ ಅಲ್ಫಿಯಾ ಅಖ್ತರ್‌ (29) ನೀಡಿದ ದೂರಿನಂತೆ ಆಕೆಯ ಪತಿ ಹಿರಿಯಡಕ ನಿವಾಸಿ ಹನೀಫ್‌ ಸಯ್ಯದ್‌ (32) ನ ನ್ನು ಸೋಮವಾರ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನಗೆ ತ್ರಿವಳಿ ತಲಾಖ್‌ ನೀಡಿರು ವುದಾಗಿ ಮಹಿಳೆ ಭಾನುವಾರ ದೂರು ನೀಡಿದ್ದರು. ಅದರಂತೆ ಕುಂದಾಪುರ ಎಸ್‌ಐ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದು, ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹನೀಫ್‌ ಜತೆ ಕಳೆದ ಜು. 4ಕ್ಕೆ ಮೂಡುಗೋಪಾಡಿ ಯಲ್ಲಿ ಅಲ್ಪಿಯಾ ಮದುವೆಯಾಗಿತ್ತು.

Advertisement

ಪತಿಯ ತಂದೆ ಅಬ್ಟಾಸ್‌ ಸಯ್ಯದ್‌, ತಾಯಿ ಜೈತುನ್‌ ಹಾಗೂ ಅಕ್ಕ ಆಯೇಷಾ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಆ.15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್‌ ನೀಡಿ ಮನೆಯಿಂದ ಹೊರ ಹಾಕಿದ್ದರು. ಬಳಿಕ ವಕೀಲರ ಮೂಲಕ “ವೈವಾಹಿಕ ಜೀವನ ಮುಕ್ತವಾಗಿದೆ’ ಎಂದು ನೋಟಿಸ್‌ ಕಳುಹಿಸಿದ್ದರು ಎಂದು ಅಲ್ಫಿಯಾ ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಜಾರಿಯಾದ ಸೆಕ್ಷನ್‌ 4ರ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ಕಾಯ್ದೆಯಡಿ ಕೇಸು, ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ಪ್ರಕರಣ: ತ್ರಿವಳಿ ತಲಾಖ್‌ ನಿಷೇಧಿಸಿ ಜು.31ಕ್ಕೆ ಕೇಂದ್ರ ಸರಕಾರ ಹೊಸ ಕಾನೂನು ಜಾರಿ ಮಾಡಿತ್ತು. ಕುಂದಾಪುರದಲ್ಲಿ ದಾಖಲಾದ ತ್ರಿವಳಿ ತಲಾಖ್‌ ವಿರುದ್ಧದ ಕೇಸು ಅವಿಭಜಿತ ದ.ಕ. ಜಿಲ್ಲೆಯ ಮೊದಲ ಹಾಗೂ ರಾಜ್ಯದ ಎರಡನೇ ಪ್ರಕರಣವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಠಾಣೆಯಲ್ಲಿ ಆ. 24 ರಂದು ರಾಜ್ಯದ ಮೊದಲ ತ್ರಿವಳಿ ತಲಾಖ್‌ ವಿರುದ್ಧದ ಕೇಸು ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next