Advertisement

Dhanush ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್ ಮೋಡಿ; ಭರ್ಜರಿ ಪ್ರತಿಕ್ರಿಯೆ

04:35 PM Jul 28, 2023 | Team Udayavani |

ಚೆನ್ನೈ: ತಮಿಳು ಚಿತ್ರ ರಂಗದ ಖ್ಯಾತ ನಟ ಧನುಷ್ ಜುಲೈ 28 ರಂದು 40ನೇ ಜನ್ಮ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಮುಂಬರಲಿರುವ ಧನುಷ್ ಅವರು ನಟಿಸಿರುವ ತಮಿಳು ಸಾಹಸಮಯ ಚಿತ್ರ ‘ಕ್ಯಾಪ್ಟನ್ ಮಿಲ್ಲರ್’  ಟೀಸರ್ ಬಿಡುಗಡೆಯಾಗಿದ್ದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಯಾದ 16 ಗಂಟೆಗಳ ಒಳಗೆ 12 ಮಿಲಿಯನ್ ವೀಕ್ಷಣೆ ಪಡೆದು ಟ್ರೆಂಡಿಂಗ್ ಆಗಿದೆ.

Advertisement

ಚಿತ್ರದ ವಿಶೇಷವೆಂದರೆ ಮುಖ್ಯಪಾತ್ರವೊಂದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದು, ವಿಭಿನ್ನ ಗೆಟಪ್ ನಲ್ಲಿ ಗಮನ ಸೆಳೆದಿದ್ದಾರೆ.

ಅದ್ದೂರಿ ದೃಶ್ಯಗಳ ಮೂಲಕ ಈಗಾಗಲೇ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದು, ಸಾಮಾಜಿಕ ತಾಣಗಳಲ್ಲಿ ಹಲವರು ಪ್ರಶಂಸೆಯ ಮಾತುಗಳನ್ನಾಡಿ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವುದಾಗಿ ಬರೆದಿದ್ದಾರೆ.

ಸೆಂಧಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ನಿರ್ಮಾಣದ ಚಿತ್ರವನ್ನು ಅರುಣ್ ಮಾಥೇಶ್ವರನ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಿ.ವಿ. ಪ್ರಕಾಶ್ ಸಂಗೀತ ನೀಡಿದ್ದಾರೆ. ಸಂದೀಪ್ ಕಿಶನ್, ಪ್ರಿಯಾಂಕಾ ಅರುಳ್ ಮೋಹನ್ ಮತ್ತು ಜಾನ್ ಕೊಕ್ಕೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.’ಕ್ಯಾಪ್ಟನ್ ಮಿಲ್ಲರ್’ 15 ಡಿಸೆಂಬರ್ 2023 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next