Advertisement

Indian Films: ಯುಕೆ ನ್ಯಾಷನಲ್‌ ಫಿಲ್ಮ್‌ ಅವಾರ್ಡ್ಸ್‌ಗೆ ಭಾರತದ ಎರಡು ಚಿತ್ರಗಳು ನಾಮಿನೇಟ್

04:23 PM Jun 12, 2024 | Team Udayavani |

ನವದೆಹಲಿ: ಧನುಷ್‌ ಅಭಿನಯದ ʼಕ್ಯಾಪ್ಟನ್‌ ಮಿಲ್ಲರ್‌ʼ ಹಾಗೂ ಹಿಂದಿಯ ʼಭಕ್ಷಕ್ʼ ಚಿತ್ರಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸುದ್ದಿಯಾಗಿದೆ.

Advertisement

ಪ್ರತಿಷ್ಠಿತ ಯುಕೆ ನ್ಯಾಷನಲ್‌ ಫಿಲ್ಮ್‌ ಅವಾರ್ಡ್ಸ್‌ ನಲ್ಲಿ  ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರದ ವಿಭಾಗದಲ್ಲಿ ಭಾರತದ ತಮಿಳು ಭಾಷೆಯ ʼಕ್ಯಾಪ್ಟನ್‌ ಮಿಲ್ಲರ್‌ʼ ಹಾಗೂ ಹಿಂದಿಯ ʼಭಕ್ಷಕ್‌ʼ ಚಿತ್ರಗಳು ನಾಮಿನೇಟ್‌ ಆಗಿದೆ.

‘ಯು ಆರ್ ನಾಟ್ ಅಲೋನ್: ಫೈಟಿಂಗ್ ದಿ ವುಲ್ಫ್ ಪ್ಯಾಕ್’,(ಸ್ಪೇನ್), ‘ದಿ ಪರೇಡ್ಸ್'(ಜಪಾನ್), ‘ರೆಡ್ ಒಲ್ಲೆರೊ: ಮಬುಹೇ ಈಸ್ ಎ ಲೈʼ(ಫಿಲಿಪೈನ್ಸ್‌), ‘ಸಿಕ್ಸ್ಟಿ ಮಿನಿಟ್ಸ್ʼ(ಜರ್ಮನಿ), ‘ದಿ ಹಾರ್ಟ್ ಬ್ರೇಕ್ ಏಜೆನ್ಸಿ'(ಜರ್ಮನಿ) ಚಿತ್ರಗಳೊಂದಿಗೆ ಭಾರತದ ಎರಡು ಚಿತ್ರಗಳು ಪೈಪೋಟಿ ನಡೆಸಲಿವೆ.

ಈ ಬಗ್ಗೆ ʼಕ್ಯಾಪ್ಟನ್‌ ಮಿಲ್ಲರ್‌ʼ ಚಿತ್ರತಂಡ ʼಎಕ್ಸ್‌ʼ ನಲ್ಲಿ ಸಂತಸವನ್ನು ಹಂಚಿಕೊಂಡಿದೆ.

ಅರುಣ್ ಮಾಥೇಶ್ವರನ್ ನಿರ್ದೇಶನದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್, ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್ ಮತ್ತು ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮುಂತಾದವರು ನಟಿಸಿದ್ದಾರೆ.

Advertisement

ಸ್ವಾತಂತ್ರ್ಯ ಪೂರ್ವದ ಹೋರಾಟದ ಕಥೆ ಸಿನಿಮಾದಲ್ಲಿದೆ.

ಇನ್ನು ಭೂಮಿ ಪೆಡ್ನೇಕರ್ ಪ್ರಧಾನ ಪಾತ್ರದ ʼಭಕ್ಷಕ್‌ʼ ದಿಟ್ಟೆ ಪತ್ರಕರ್ತೆ ಸುತ್ತ ಸಾಗುವ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾವನ್ನು ಪುಲ್ಕಿತ್ ನಿರ್ದೇಶನ ಮಾಡಿದ್ದಾರೆ. ಫೆ. 9 ರಂದು ನೆಟ್‌ ಫ್ಲಿಕ್ಸ್‌ ನಲ್ಲಿ ಚಿತ್ರ ತೆರೆಕಂಡಿತ್ತು.

ಪ್ರಶಸ್ತಿ ಕಾರ್ಯಕ್ರಮ ಜುಲೈ 3 ರಂದು ಲಂಡನ್‌ನ ಪೋರ್ಚೆಸ್ಟರ್ ಹಾಲ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next