Advertisement

ಪ್ರೇಮಿಗಳ ದಿನಾಚರಣೆಗೆ ರಾಜಧಾನಿ ಸಜ್ಜು

12:48 PM Feb 14, 2018 | Team Udayavani |

ಬೆಂಗಳೂರು: ಪ್ರೇಮಾಂಕುರವಾದ ಗಳಿಗೆಯ ಸ್ಮರಣೆ, ನಿವೇದನೆಯ ದಿನ ಎಂದೇ ಬಿಂಬಿತ ವಾಗಿರುವ ಫೆ.14. ಪ್ರೇಮಿಗಳ ದಿನಾಚರಣೆಗೆ ರಾಜಧಾನಿ ಬೆಂಗಳೂರಿನ ಪ್ರೇಮಿಗಳು ಕಾತರರಾಗಿದ್ದಾರೆ.

Advertisement

ತಮ್ಮೊಳಗಿನ ಭಾವನೆಗಳನ್ನು ಮನಬಿಚ್ಚಿ ಮಾತನಾಡುವ ದಿನಕ್ಕಾಗಿ ಕಾಯುತ್ತಿರುವ ಪ್ರೇಮಿಗಳು, ಪ್ರೀತಿಸಿ ವಿವಾಹವಾದವರು ತಮ್ಮ ಹಳೆಯ ನೆನಪು ಮೆಲುಕು ಹಾಕಿ ಸಂಭ್ರಮಿಸುವುದು ಈ ದಿನದ ವಿಶೇಷ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ನಗರ ವಿವಿಧ ಬಡಾವಣೆಯ ಫ್ಯಾನ್ಸಿ ಸ್ಟೋರ್‌, ಶಾಪಿಂಗ್‌ ಮಾಲ್‌ ಮೊದಲಾದ ಕಡೆಗಳಲ್ಲಿ ಕೆಂಪು ಬಣ್ಣದ ಹೃದಯದಾಕಾರದ ಬಲೂನಿನ ಅಲಂಕಾರ ಮಾಡಲಾಗಿದೆ. ಕೆಲವೆಡೆ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ತಮಾಷೆ ಕ್ರೀಡೆಗಳನ್ನೂ ಆಯೋಜಿಸಲಾಗಿದ್ದು ಆದಕ್ಕಾಗಿಯೇ ಕೆಂಪು ಬಣ್ಣದ ಬಟ್ಟೆ ಧರಿಸು ಸಿದ್ಧಗೊಳಿಸಲಾಗಿದೆ. ನಗರದ ಮಾಲ್‌, ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ವಿಶೇಷ ರಿಯಾಯಿತಿ, ಕೊಡುಗೆ ಸಹ ಇದೆ. 

ಪ್ರೇಮಿಗಳ ದಿನಾಚರಣೆಯ ಮತ್ತೂಂದು ವಿಶೇಷವಾದ ಗುಲಾಬಿ ಹೂವಿನ ವಿನಿಮಯ ವಾಡಿಕೆಯಾಗಿರುವುದರಿಂದ ಮಾರುಕಟ್ಟೆಗಳಲ್ಲಿ ಹೂವಿನ ದರವೂ ಹೆಚ್ಚಾಗಿದೆ. 5ರಿಂದ 10 ರೂ. ಇದ್ದ ಒಂದು ಗುಲಾಬಿ ಹೂವಿನ ಬೆಲೆ 20 ರಿಂದ 25ರೂ.ಗಳಿಗೆ ಏರಿಕೆಯಾಗಿದೆ.

ಮಲ್ಲೇಶ್ವರ, ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲ, ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಬಿಟಿಎಂ
ಬಡಾವಣೆ, ಎಚ್‌ಎಸ್‌ಆರ್‌ ಬಡವಾಣೆ, ಸದಾಶಿವನಗರ, ಜಯನಗರ, ವಿಜಯನಗರ, ಯಶವಂತಪುರಗಳಲ್ಲಿನ ಮಾಲ್‌ಗ‌ಳಲ್ಲಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. 

ಪ್ರೇಮಿಗಳ ದಿನಾಚರಣೆಗಾಗಿ ವಿಶೇಷ ಗಿಫ್ಟ್, ಗ್ರೀಟಿಂಗ್‌ ಕಾಡ್ಸ್‌, ಟಿ-ಶರ್ಟ್‌ ಇತ್ಯಾದಿ ಶಾಪಿಂಗ್‌ ಮಾಲ್‌ ಹಾಗೂ ಫ್ಯಾನ್ಸಿ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಬುಧವಾರ ಬೆಳಗ್ಗೆಯಿಂದಲೇ ಪ್ರೇಮಿಗಳು, ಶಾಪಿಂಗ್‌ ಮಾಲ್‌, ಪಾರ್ಕ್‌, ದೇವಸ್ಥಾನ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. 

Advertisement

ಟ್ಯಾಟೋ ಆಫ‌ರ್‌: ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೇಮಿಗಳಿಗಾಗಿ ಟ್ಯಾಟೋ ಆಫ‌ರ್‌ ನೀಡಲಾಗಿದೆ. ಪ್ರೇಮಿಗಳಲ್ಲಿ ಒಬ್ಬರು ಟ್ಯಾಟೋ ಹಾಕಿಸಿಕೊಂಡರೇ ಇನ್ನೊಬ್ಬರಿಗೆ ಉಚಿತವಾಗಿ ಟ್ಯಾಟೋ ಹಾಕಿಸುತ್ತಾರೆ. ದೇವ್‌ ಟ್ಯಾಟೋ ವತಿಯಿಂದ ಪ್ರೇಮಿಗಳ ದಿನಾಚರಣೆ ಅಂಗವಾಗಿ ಈ ಕೊಡುಗೆ ಬಿಡಲಾಗಿ¨

Advertisement

Udayavani is now on Telegram. Click here to join our channel and stay updated with the latest news.

Next