ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ಎರಡೇ ದಿನಕ್ಕೆ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಅತಿಥೇಯ ತಂಡವು 176 ರನ್ ಗಳಿಗೆ ಆಲೌಟಾಗಿದ್ದು, ಭಾರತಕ್ಕೆ 79 ರನ್ ಗುರಿ ನೀಡಿದೆ.
ಮೂರು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿದ ದ.ಆಫ್ರಿಕಾ ಇಂದೂ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಡೇವಿಡ್ ಬೆಡಿಂಗ್ಹ್ಯಾಮ್ ಅವರು 11 ರನ್, ಕೈಲ್ ವೇರಿಯನ್ನೆ 9 ರನ್, ಜೆನ್ಸನ್ 11 ರನ್, ಕೇಶವ್ ಮಹಾರಾಜ್ ಮೂರು ರನ್ ಮತ್ತು ರಬಾಡಾ ಎರಡು ರನ್ ಮಾತ್ರ ಗಳಿಸಿದರು. ಆದರೆ ಮತ್ತೊಂದೆಡೆ ಗಟ್ಟಿಯಾಗಿ ನಿಂತ ಏಡನ್ ಮಾರ್ಕ್ರಮ್ ಭರ್ಜರಿ ಶತಕ ಬಾರಿಸಿದರು.
ಭಾರತೀಯ ಬೌಲರ್ ಗಳನ್ನು ದಂಡಿಸಿದ ಮಾರ್ಕ್ರಮ್ 103 ಎಸೆತಗಳಲ್ಲಿ 106 ರನ್ ಗಳಿಸಿದರು. ಇದರಲ್ಲಿ ಅವರು 17 ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಮಾರ್ಕ್ರಮ್ ಬ್ಯಾಟಿಂಗ್ ನೆರವಿನಿಂದ ದ.ಆಫ್ರಿಕಾ ತಂಡವು ರನ್ ಗಳಷ್ಟಾದರೂ ಗುರಿ ನೀಡಲು ಸಾಧ್ಯವಾಯಿತು.
ಭಾರತದ ಪರ ಬಿಗು ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಕಿತ್ತರೆ, ಮುಖೇಶ್ ಕುಮಾರ್ ಎರಡು ವಿಕೆಟ್ ಪಡೆದರು. ಸಿರಾಜ್ ಮತ್ತು ಪ್ರಸಿಧ್ ತಲಾ ಒಂದು ವಿಕೆಟ್ ಪಡೆದರು
ಸಂಕ್ಷಿಪ್ತ ಸ್ಕೋರ್
ದ.ಆಫ್ರಿಕಾ: 55 ಮತ್ತು 176
ಭಾರತ: 153