Advertisement

ಕಲರ್‌ ಕಲರ್‌ ಯಾವ ಕಲರ್‌

12:30 AM Jan 03, 2019 | |

ನದಿಯ ಬಣ್ಣ ಯಾವುದು ಎನ್ನುವ ಪ್ರಶ್ನೆಗೆ ನೀಲಿ, ಹಸಿರು, ಕೆಂಪು ಎಂಬೆಲ್ಲಾ ಉತ್ತರಗಳು ದೊರೆಯಬಹುದು. ಒಂದೊಂದು ಕಡೆ, ಒಂದೊಂದು ಸಮಯದಲ್ಲಿ ನದಿ ಯಾವುದಾದರೊಂದು ಬಣ್ಣವನ್ನು ಹೊಂದಿರುವಂತೆ ತೋರುತ್ತದೆ. ಕೊಲಂಬಿಯಾದಲ್ಲಿರುವ ಈ ನದಿಗೆ ಐದು ಬಣ್ಣಗಳಿವೆ.

Advertisement

ನೀರಿಗೆ ಬಣ್ಣ, ರುಚಿ ಇಲ್ಲ ಎಂದು ನೀವೆಲ್ಲಾ ಶಾಲೆಯಲ್ಲಿ ಓದಿದ್ದೀರಿ. ಆದರೆ ಆ ಮಾತನ್ನು ಪ್ರಶ್ನಿಸುವಂತೆ ಮಾಡುವ ನದಿಯೊಂದು ಕೊಲಂಬಿಯಾದಲ್ಲಿದೆ. ಈ ನದಿಯ ನೀರು, ಒಂದಲ್ಲ, ಎರಡಲ್ಲ, ಐದು ಬಣ್ಣಗಳಿಂದ ಕಂಗೊಳಿಸುತ್ತಿದೆ. ಐದು ಬಣ್ಣಗಳ ನದಿ ಎಂದೂ ಕರೆಯಲ್ಪಡುವ ಈ ನದಿಯ ಹೆಸರು “ಕ್ಯಾನೊ ಕ್ರಿಸ್ಟಲ್‌’ ಅಥವಾ ಸ್ಫಟಿಕದ ಕಾಲುವೆ. ಈ ನದಿ ಕೊಲಂಬಿಯಾದ ಅದ್ಭುತ ತಾಣಗಳಲ್ಲೊಂದು. ಹೆಸರೇ ಸೂಚಿಸುವಂತೆ ಸ್ಫಟಿಕದಂತೆ ಹೊಳೆಯುವ ಶುಭ್ರವಾದ ತಿಳಿನೀರಿನ ಈ ನದಿ, ಸೆರಾನಿಯಾ ಡಿ ಲಾ ಮಕರೆನಾ ಪರ್ವತ ಶ್ರೇಣಿಯಲ್ಲಿ ಹರಿಯುತ್ತದೆ. ಹಳದಿ, ನೀಲಿ, ಹಸಿರು, ಕಪ್ಪು ಮತ್ತು ಕೆಂಪು ಬಣ್ಣಗಳನ್ನು ಮೇಳೈಸಿಕೊಂಡು ಹರಿಯುತ್ತದೆ ಈ ನದಿ. 

ಎಲ್ಲಿಂದ ಬಂದವು 5 ಬಣ್ಣಗಳು?
ಈ ನದಿಯ ಮತ್ತೂಂದು ವೈಶಿಷ್ಟ್ಯವೆಂದರೆ, ಆಗಾಗ ಐದೂ ಬಣ್ಣಗಳು ಸೇರಿ ಕಾಮನಬಿಲ್ಲಿನಂತೆ ಕಾಣಿಸುತ್ತದೆ. ಅಂದ ಹಾಗೆ ನೀರಿಗೆ ಬಣ್ಣ ಇಲ್ಲ ಎನ್ನುವ ಮಾತು ಸತ್ಯ. ಆದರೆ ಈ ನದಿ ವರ್ಣಮಯವಾಗಿ ಕಾಣಿಸುವುದಕ್ಕೆ ಅನೇಕ ಕಾರಣಗಳಿವೆ. ನಿಮ್ಮೂರಿನ ನದಿ ಕೆಲವೊಮ್ಮೆ ಹಸಿರಾಗಿ ಕಂಡರೆ ಕೆಲವೊಮ್ಮೆ ಕೆಂಪಗೆ ಕಾಣುತ್ತದೆ, ಅದು ಬಿಡಿ ಸಾಗರದ ಬಣ್ಣ ನೀಲಿಯಾಗಿ ಕಾಣುತ್ತದೆ, ಇದರ ಅರ್ಥ ನೀರು ವಿವಿಧ ಬಣ್ಣವನ್ನು ಹೊಂದಲು ಅನೇಕ ಕಾರಣಗಳಿರುತ್ತವೆ. ಆಕಾಶ, ಸುತ್ತಮುತ್ತಲ ಪರಿಸರ ನೀರು ಬಣ್ಣ ಹೊಂದಿರುವಂತೆ ಕಾಣಿಸುತ್ತದೆ. ಹಾಗೆಯೇ ಕೊಲಂಬಿಯಾದ “ಕ್ಯಾನೊ ಕ್ರಿಸ್ಟಲ್‌’ ನದಿ ಐದು ಬಣ್ಣಗಳನ್ನು ಹೊಂದಿರುವುದಕ್ಕೆ ಕಾರಣವಿದೆ. ಈ ನದಿಯಲ್ಲಿ ಬೆಳೆಯುವ ಮೆಕೆರೆನಿಯಾ ಕ್ಲಾವಿಗೆರಾ ಎಂಬ ಸಸ್ಯದಿಂದಾಗಿ ನೀರಿನ ಬಣ್ಣ ಕೆಂಪಾಗಿ ಕಾಣಿಸುತ್ತದೆ. ಹಾಗೆಯೇ ನದಿಯಲ್ಲಿರುವ ಕಪ್ಪು ಬಂಡೆಗಳು, ಹಸಿರು ಪಾಚಿ, ನೀಲಿಯಾಗಿ ಕಾಣುವ ನೀರು ಮತ್ತು ಹಳದಿ ಮಣ್ಣು ಈ ನದಿಯನ್ನು ವರ್ಣಮಯವಾಗಿಸಿವೆ. 

ಇಲ್ಲಿ ಮೀನಿಲ್ಲ!
“ಕ್ಯಾನೊ ಕ್ರಿಸ್ಟಲ್‌’ನ ಹರಿವಿನ ವಿಸ್ತಾರ ತುಂಬಾ ದೊಡ್ಡದಿದ್ದು, ಕೆಲವು ಕಡೆ ಜಲಪಾತದಿಂದ ಧುಮ್ಮಿಕ್ಕಿದರೆ, ಇನ್ನೂ ಕೆಲವು ಕಡೆ ಗುಹೆಗಳ ಮೂಲಕ ಹಾದುಹೋಗುತ್ತದೆ. ಅಚ್ಚರಿಯೆಂದರೆ ಈ ನದಿಯಲ್ಲಿ ಮೀನುಗಳಿಲ್ಲ. ಇದು ಈಜುಗಾರರ ಮೆಚ್ಚಿನ ತಾಣವೂ ಇದು. ಜುಲೈ- ನವೆಂಬರ್‌ ತಿಂಗಳು, ಈ ಸ್ಥಳಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯ.

ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next