ಚಿತ್ರದುರ್ಗ: ತಾಲೂಕಿನ ಕುಂಚಿಗನಾಳ್ ಗ್ರಾಮದ ಶ್ರೀಕಣಿವೆ ಮಾರಮ್ಮ ದೇವಿ ಸಿಡಿ ಉತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.
ಐತಿಹಾಸಿಕ ಚಿತ್ರದುರ್ಗದ ನವ ದುರ್ಗೆಯರಲ್ಲಿ ಕುಂಚಿಗನಾಳ್ ಗ್ರಾಮದ ಶ್ರೀಕಣಿವೆ ಮಾರಮ್ಮ ದೇವಿ ಒಂದು ಶಕ್ತಿ ದೇವತೆ. ಈ ದೇವತೆಯ ಸಿಡಿ ಉತ್ಸವ ಶುಕ್ರವಾರ ಜರುಗಿತು. ಮೊಟ್ಟ ಮೊದಲು ದೇವಸ್ಥಾನ ಜೋಗಮ್ಮ ಬೆಳಗ್ಗೆಯಿಂದ ನೀರು, ಆಹಾರ ತ್ಯಜಿಸಿ ಉಪವಾಸವಿದ್ದು, ವಿವಿಧ ಪೂಜಾ ವಿಧಾನಗಳ ಮೂಲಕ ಸಿಡಿ ಉತ್ಸವ ಆಡುವುದು ವಾಡಿಕೆ. ಪ್ರತಿ ವರ್ಷದತಂದೆ ಈ ವರ್ಷರು ಜೋಗಮ್ಮ ಸಿಡಿ ಆಡಿದ ನಂತರ ಭಕ್ತರು ಸಿಡಿ ಉತ್ಸಹ ಆಡಿ ಹರಕೆ ತೀರಿಸಿದರು.
ಶಕ್ತಿ ದೇವತೆ ಕಣಿವೆ ಮಾರಮ್ಮ ದೇವಿ ಜಾತ್ರೆಯ ಪ್ರಮುಖ ಘಟ್ಟ ಸಿಡಿ ಉತ್ಸವ. ಈ ಮಹೋತ್ಸಹವನ್ನು ಭಕ್ತರು ಪ್ರತಿ ವರ್ಷ ಮಾರ್ಚ್‌ನಲ್ಲಿ ಆಚರಿಸಲಿದ್ದಾರೆ. ದುರ್ಗದ ನವ ದುರ್ಗೆಯರಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಕಣಿವೆ ಮಾರಮ್ಮ ದೇವಿ ಸಿಡಿ ಉತ್ಸವ ನಡೆಯಲಿದೆ. ನಂತರ ಉಳಿದ ಶಕ್ತಿ ದೇವತೆಗಳ ಸಿಡಿ ಉತ್ಸವ ನಡೆಯಲಿದೆ ಎಂದು ಭಕ್ತರು ತಿಳಿಸಿದ್ದಾರೆ.
ಶ್ರೀಕಣಿವೆ ಮಾರಮ್ಮ ದೇವಿಯ ಜಾತ್ರೆ ಅಂಗವಾಗಿ ನಗರದ ಟೌನ್ ಪೊಲೀಸ್ ಠಾಣೆಯ ಶ್ರೀಕಣಿವೆ ಮಾರಮ್ಮ ದೇವಿ ಮತ್ತು ಕುಂಚಿಗನಾಳ್ ಕಣಿವೆ ಮಾರಮ್ಮ ದೇವಿಗೆ ವಿಶೇಷವಾಗಿ ವಿವಿಧ ಪುಷ್ಪಗಳೊಂದಿಗೆ ಪೂಜಾಲಂಕಾರ ಮಾಡಲಾಗಿತ್ತು. ನಗರದ ಟೌನ್ ಪೊಲೀಸ್ ಠಾಣೆಯ
ಆವರಣದಲ್ಲಿ ಜಾತ್ರೆ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸೇವನೆ ಮಾಡಿದರು.
ಉತ್ಸಹ ವಿಶೇಷ: ಶ್ರೀ ಕಣಿವೆ ಮಾರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಭೂಮಿಗೆ ನೇರವಾಗಿ ಕಂಬವೊಂದನ್ನು ನೆಡಲಾಯಿತು. ಅದಕ್ಕೆ ಮಲ್ಲಕಂಬ ಎಂದು ಕರೆಯುತ್ತಾರೆ. ಕಂಬದ ಮೇಲೆ ತಿರುಗಣಿಯನ್ನು ಇಡಲಾಗುತ್ತದೆ. ಈ ತಿರುಗಣಿಗೆ ಸಮಾನಂತರವಾಗಿ ಪ್ರತಿಷ್ಠಾಪಿಸಲಾಗುವ ಸಿಡಿಗಂಬವು ಸುಲಭವಾಗಿ ತಿರುಗಲು ವ್ಯವಸ್ಥೆ ಮಾಡುತ್ತದೆ. ಕಂಬದ ಒಂದು ತುದಿಗೆ ಮನುಷ್ಯನನ್ನು ಬಟ್ಟೆಯಿಂದ ಕಟ್ಟಿ 3 ಬಾರಿ ಕಂಬ ತಿರುಗಿಸಲಾಗುತ್ತದೆ. ಶುಕ್ರವಾರ ಸಂಜೆ ನಡೆದ ಉತ್ಸವದಲ್ಲಿ ಚಿತ್ರದುರ್ಗ ನಗರ ಪ್ರದೇಶ ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳ ಸಹಸ್ರಾರ ಭಕ್ತರ ಸಮ್ಮುಖದಲ್ಲಿ ಹರಕೆ ಹೊತ್ತ ಭಕ್ತರು ಬೇವಿನ ಸೀರೆಯುಟ್ಟು ಮತ್ತು ಸಿಡಿ ಆಡಿ ಹರಕೆ ತೀರಿಸಿದರು. ಈ ಕೌತುಕದ ಕ್ಷಣ ನೋಡಲು ಸಾವಿರಾರು ಭಕ್ತರು ಕಣಿವೆಯಲ್ಲಿ ಸೇರಿದ್ದರು.