ಬೆಂಗಳೂರು: ಮಾನವನ ಘನತೆಯು ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ. ಇದು ಹಿಜಾಬ್ ಧರಿಸಲು ಅಥವಾ ಧರಿಸದಿರುವ ಆಯ್ಕೆಯನ್ನು ಒಳಗೊಂಡಿರುತ್ತದೆ. ಅರ್ಜಿದಾರರ ವಾದ ಹಿಜಾಬ್ ಬಲವಂತ ಮಾಡುವುದಾಗಿದೆ, ಇದು ಸಂವಿಧಾನದ ನೀತಿಗೆ ವಿರುದ್ಧವಾಗಿದೆ. ಹಿಜಾಬ್ ಕಡ್ಡಾಯ ಮಾಡಲು ಸಾಧ್ಯವಿಲ್ಲ, ಸಂಬಂಧಪಟ್ಟ ಮಹಿಳೆಯರ ಆಯ್ಕೆಗೆ ಬಿಡಬೇಕು ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಹೇಳಿದರು.
ಹಿಜಾಬ್ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ತ್ರಿಸದಸ್ಯ ಪೀಠದೆದುರು ಅವರು ಸರ್ಕಾರದ ಪರ ವಾದ ಮಂಡಿಸಿದರು.
ನಮ್ಮಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆಗಳ ರೂಪದಲ್ಲಿ ಕಾನೂನು ಇದೆ. (ವರ್ಗೀಕರಣ ಮತ್ತು ನೋಂದಣಿ) ಈ ನಿಯಮವು ನಿರ್ದಿಷ್ಟ ಶಿರವಸ್ತ್ರವನ್ನು ಧರಿಸುವುದಕ್ಕೆ ಸಮಂಜಸವಾದ ನಿರ್ಬಂಧವನ್ನು ಹೇರುತ್ತದೆ ಎಂದರು.
ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ, ಆದರೆ ನಿರ್ಬಂಧ ಇರುವುದು ತರಗತಿಯಲ್ಲಿ ಮಾತ್ರ. ಎಲ್ಲಿಯೂ ಹಿಜಾಬ್ ನಿಷೇಧವಿಲ್ಲ. ಆದರೆ ಇದು ಕಡ್ಡಾಯವಾಗಿರಬಾರದು, ಅದನ್ನು ಸಂಬಂಧಿಸಿದ ಮಹಿಳೆಯರ ಆಯ್ಕೆಗೆ ಬಿಡಬೇಕು ಎಂದು ಎಜಿ ನಾವದಗಿ ಮತ್ತೆ ಹೇಳಿದರು.
ಇದನ್ನೂ ಓದಿ:ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಎಲ್ಲಾ ಕಡೆ ಹಿಜಾಬ್ ಬ್ಯಾನ್ ಮಾಡಿ: ವಿಶ್ವಸಂತೋಷ ಭಾರತೀ ಶ್ರೀ
ಒಂದು ನಿರ್ದಿಷ್ಟ ನಂಬಿಕೆಯ ಎಲ್ಲಾ ಮಹಿಳೆಯರು (ನಿರ್ದಿಷ್ಟ ಉಡುಪು) ಧರಿಸಬೇಕೆಂದು ನಾವು ಬಯಸುತ್ತೇವೆ ಎಂದು ಯಾರಾದರೂ ಘೋಷಣೆಗೆ ಬಂದರೆ, ಅದು ಆ ವ್ಯಕ್ತಿಯ ಘನತೆಗೆ ಭಂಗ ತರುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಹಕ್ಕನ್ನು ಚಲಾಯಿಸಲಾಗುವುದಿಲ್ಲ. ಸಾಂಸ್ಥಿಕ ಶಿಸ್ತು ಅತಿಮುಖ್ಯವಾಗಿದೆ. ಧಾರ್ಮಿಕ ತಾರತಮ್ಯ ನಡೆದಿದೆ ಎಂಬ ವಾದಗಳನ್ನು ಮುಂದಿಡಲಾಗಿದೆ. ಇವೆಲ್ಲ ಅರ್ಥರಹಿತ ಆರೋಪಗಳು. ಸಮರ್ಥಿಸಲು ಏನೂ ಇಲ್ಲ ಎಂದು ಎಜಿ ನಾವದಗಿ ವಾದ ಮಂಡಿಸಿದರು.
ಉಡುಪಿ ಕಾಲೇಜು ಶಿಕ್ಷಕರ ಪರವಾಗಿ ವೆಂಕಟರಮಣಿ ವಾದ ಮಂಡಿಸಿದರು.