Advertisement

ಕ್ಯಾನನ್‌ ಇಒಎಸ್‌ ಎಂ50 ಕ್ಯಾಮೆರಾ ಬಿಡುಗಡೆ

12:04 PM Apr 17, 2018 | Team Udayavani |

ನವದೆಹಲಿ: ಖ್ಯಾತ ಕ್ಯಾಮೆರಾ ತಯಾರಕ ಸಂಸ್ಥೆ ಕ್ಯಾನನ್‌ ಇಂಡಿಯಾ, “ಕ್ಯಾನನ್‌ ಇಒಎಸ್‌ ಎಂ50′ ಎಂಬ ಅತ್ಯಾಧುನಿಕ ಮಿರರ್‌ಲೆಸ್‌ 4ಕೆ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾನನ್‌ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಕಜುಟಡ ಕೊಬಯಾಶಿ ಹಾಗೂ ಸಂಸ್ಥೆಯ ಕನ್ಸೂಮರ್‌ ಇಮೇಜಿಂಗ್‌ ಮತ್ತು ಇನ್ಫಾರ್ಮೇಷನ್‌ ಸೆಂಟರ್‌ನ ಉಪಾಧ್ಯಕ್ಷ ಎಡ್ಡಿ ಯುಡಗಾವ ಇಒಎಸ್‌ ಎಂ50 ಕ್ಯಾಮೆರಾ ಅನಾವರಣಗೊಳಿಸಿದರು.

Advertisement

ಈ ವೇಳೆ ಕಜುØಟಡ ಕೊಬಯಾಶಿ ಮಾತನಾಡಿ, ಈ ಹೊಸ ಕ್ಯಾಮೆರಾ, ಡಿಜಿಕ್‌ 8 ಇಮೇಜ್‌ ಪ್ರೊಸೆಸ್ಸರ್‌ ಹೊಂದಿದ್ದು, ಇದರಿಂದ ಅತ್ಯುತ್ತಮ ಗುಣಮಟ್ಟದ ಚಿತ್ರಗಳು ಮೂಡಿಬರುತ್ತವೆ. 4ಕೆ ಮೂವೀ ಶೂಟಿಂಗ್‌ ಸಾಮರ್ಥ್ಯವುಳ್ಳ ಇಒಎಸ್‌ ಎಂ50 ಡ್ನೂಯೆಲ್‌ ಫಿಕ್ಸೆಲ್‌ ಸಿಎಂಒಎಸ್‌ ಎಎಫ್‌ ಇದಕ್ಕಿದೆ. ಗ್ರಾಹಕರ ಮತ್ತು ವೃತ್ತಿಪರರ ಅಗತ್ಯಗಳಿಗೆ ತಕ್ಕಂತ ತಂತ್ರಜ್ಞಾನವುಳ್ಳ ಆಧುನಿಕ ಹಾಗೂ ನಾವೀನ್ಯತೆಯ ಕ್ಯಾಮೆರಾ ಇದಾಗಿದೆ.

ಕ್ಯಾನನ್‌ ಇಂಡಿಯಾ ಕಾಲಕ್ಕನುಗುಣವಾಗಿ ಎಲ್ಲ ರೀತಿ ನವೀನ ತಂತ್ರಜ್ಞಾನಗಳನ್ನು ಕ್ಯಾಮೆರಾಗಳಲ್ಲಿ ಅಳವಡಿಸುತ್ತಾ ಬಂದಿದೆ  ಎಂದರು. ಇಂದು ಮಾರುಕಟ್ಟೆಗೆ ಪರಿಚಯಿಸಿರುವ ಈ ಕ್ಯಾಮೆರಾ ಗ್ರಾಹಕರ ಇಚ್ಛೆಗೆ ಹಾಗೂ ವೃತ್ತಿಪರರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ನಮ್ಮ ಸಂಸ್ಥೆ ಹೊಸತನವನ್ನು ಅಳವಡಿಸಿಕೊಳ್ಳುವುದರಲ್ಲಿ ಸದಾ ಬದ್ಧವಾಗಿದೆ.

ಸರಳ, ಸುಲಭವಾಗಿ ಬಳಸಬಹುದಾದ ಕ್ಯಾಮೆರಾ ಇದಾಗಿದ್ದು, ಇಒಎಸ್‌ ಕುಟುಂಬದಲ್ಲಿ ಇದೊಂದು ಮೈಲಿಗಲ್ಲು ಎನ್ನಬಹುದಾಗಿದೆ. ಇದರಲ್ಲಿ 24.1 ಮೆಗಾ ಫಿಕ್ಸೆಲ್‌ ಇಮೇಜ್‌ ಸೆನ್ಸಾರ್‌ ಹಾಗೂ ಎಪಿಎಸ್‌-ಸಿ ಸಿಎಂಒಎಸ್‌ ಸೆನ್ಸಾರ್‌ ಇದೆ. 3.0 ಇಂಚ್‌ ಎಲ್‌ಸಿಡಿ ವೆರಿ ಆ್ಯಂಗಲ್‌ ಟಚ್‌ ಪ್ಯಾನೆಲ್‌, ವೈಫೈ, ಎನ್‌ಎಫ್‌ಸಿ, ಬ್ಲೂಟೂತ್‌ ಸೌಲಭ್ಯವಿರುವ ಈ ಕ್ಯಾಮೆರಾ ಬೆಲೆ 61,995 ರೂ. ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next