ಮಾಗಡಿ: ಕಲ್ಲುಪಾಳ್ಯದ ಬಳಿ ಮಹಿಳೆ ಬಲಿ ತೆಗೆದುಕೊಂಡಿದ್ದ ಚಿರತೆ ಕೊನೆಗೂ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆ ಸಿಕ್ಕಿದೆ. ಈ ಮೂಲಕ ಭೀತಿಯಲ್ಲಿದ್ದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.
ಕಳೆದ ಅ.30 ರಂದು ಕಲ್ಲುಪಾಳ್ಯದ ಬಳಿ ದನ ಮೇಯಿಸಲು ತೆರಳುತ್ತಿ ದ್ದಾಗ ಮಹಿಳೆ ಮಹಾಲಕ್ಷ್ಮೀ ಮೇಲೆ ಹಠಾತ್ ಚಿರತೆ ದಾಳಿ ನಡೆಸಿ ಬಲಿ ತೆಗೆ ದುಕೊಂಡಿತ್ತು. ಇದ ರಿಂದ ಸುತ್ತಮು ತ್ತಲ ಗ್ರಾಮೀಣ ರೈತರು ಆತಂಕಕ್ಕೆ ಒಳ ಗಾಗಿದ್ದರು.
ಇದನ್ನೂ ಓದಿ:- ಪರಿಷತ್ ಟಿಕೆಟ್ ಬೇಡ, ಎಂಎಲ್‌ಎ ಟಿಕೆಟ್ ಆಕಾಂಕ್ಷಿ: ಶ್ರೀಕಾಂತ ಘೋಟ್ನೆಕರ್
ನರಭಕ್ಷಕ ಚಿರತೆ ಸೆರೆಹಿಡಿ ಯುವಂತೆ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದರು. ಈ ಸಂಬಂಧ ಎಚ್ಚೆತ್ತ ಅರಣ್ಯಾಧಿಕಾ ರಿ ಗಳು ಆ ಭಾಗದಲ್ಲಿ ಚಿರತೆ ಸೆರೆಗೆ 2 ಬೋನು ಇಟ್ಟು, 32ಕ್ಕೂ ಹೆಚ್ಚು ಸಿಸಿ ಕ್ಯಾಮರ ಅಳವಡಿಸಿದ್ದರು.
ಕೊನೆಗೂ ಗುರುವಾರ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನ್‌ಗೆ ಚಿರತೆ ಬಿದ್ದಿದ್ದು, ಸೆರೆ ಹಿಡಿಯು ವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈಗ ಗ್ರಾಮಸ್ಥರು ನಿರಾಳ ರಾಗಿದ್ದು ಹೊಲಗದ್ದೆ ತೋಟಗಳಿಗೆ ಧೈರ್ಯವಾಗಿ ತೆರಳುತ್ತಿದ್ದಾರೆ.