Advertisement

ದಡ ಸೇರಿದ ಸಿದ್ದರಾಮಯ್ಯ ಬಣದ ಅಭ್ಯರ್ಥಿಗಳು: ಖರ್ಗೆ ವರ್ಚಸ್ಸು ಹೆಚ್ಚಳ, ಮತ್ತಷ್ಟು ಹಿಡಿತ

11:17 PM Jun 04, 2024 | keerthan |

ಬೆಂಗಳೂರು:  ಲೋಕಸಭಾ ಚುನಾವಣೆ ಫ‌ಲಿತಾಂಶವು ರಾಜ್ಯದ ನಾಯಕರ ಮಟ್ಟಿಗೆ ಸಿಹಿ-ಕಹಿಯ ಮಿಶ್ರಣ. ಒಂದೇ ಪಕ್ಷದಲ್ಲಿ ಕೆಲವರಿಗೆ ಮೇಲುಗೈ ಆಗಿದ್ದರೆ, ಕೆಲವರಿಗೆ ಹಿನ್ನಡೆ ಉಂಟಾಗಿದೆ.

Advertisement

ಸಿದ್ದರಾಮಯ್ಯ: ತವರು ಕ್ಷೇತ್ರದಲ್ಲಿ ಸೋಲನುಭವಿಸಿದರೂ ಹಲವು ಕಾರಣಗಳಿಂದ ಸಿಎಂ ಈ ಫ‌ಲಿತಾಂಶದಿಂದ ತಕ್ಕಮಟ್ಟಿಗೆ ತೃಪ್ತರಾಗಿದ್ದಾರೆ. ಯಾಕೆಂದರೆ, ತಮ್ಮ ಬಣದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಅಭ್ಯರ್ಥಿಗಳನ್ನು ಗೆಲುವಿನ ದಡ ತಲುಪಿಸಿದ್ದಾರೆ. ಫ‌ಲಿತಾಂಶ ಹೊರ ಬೀಳುವ 2 ದಿನಗಳ ಹಿಂದಷ್ಟೇ ಪುತ್ರನಿಗೆ ಮೇಲ್ಮನೆ ಟಿಕೆಟ್‌ ಕೊಡಿಸಿದ್ದಾರೆ.

ನಿರೀಕ್ಷಿತ ಫ‌ಲಿತಾಂಶ ಬಾರದಿದ್ದರೆ, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದು ಕಷ್ಟ. ಪಟ್ಟದಲ್ಲಿ ಮುಂದು ವರಿಯಲು ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಕೊಡಬೇಕು ಅಂತ ಶಾಸಕರು ವಿವಿಧ ಕಡೆ ಹೇಳಿದ್ದೂ ಉಂಟು. ಈಗ ಕುರ್ಚಿ ಗಟ್ಟಿಯಾಗಿದ್ದು, ಈಗಾಗಲೇ ಆದ ಮಾತುಕತೆ ಪ್ರಕಾರ 2.5 ವರ್ಷ ಅಧಿಕಾ ರಾವಧಿಗೆ ಅಡೆತಡೆ ಇಲ್ಲದಂತಾಗಿದೆ.

ಡಿ.ಕೆ. ಶಿವಕುಮಾರ್‌: ಪಕ್ಷದಮಟ್ಟಿಗೆ ಫ‌ಲಿತಾಂಶ ಸಮಾಧಾನಕರವಾಗಿದ್ದರೂ ವೈಯಕ್ತಿಕ ಪ್ರದರ್ಶನ ವಿಚಾರದಲ್ಲಿ ಉಪಮುಖ್ಯಮಂತ್ರಿಗೆ ತುಸು ಹಿನ್ನಡೆಯಾಗಿದೆ ಎಂದೇ ಹೇಳಬೇಕಾಗುತ್ತದೆ. ಸಹೋದರ ಡಿ.ಕೆ. ಸುರೇಶ್‌, ಆಪ್ತರಾಗಿದ್ದ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು) ಸೇರಿ ಬಣದಲ್ಲಿ ಗುರುತಿಸಿಕೊಂಡವರನ್ನೇ ಗೆಲ್ಲಿಸಿಕೊಂಡು ಬರಲಾಗಲಿಲ್ಲ. ಹಾಗಾಗಿ, ಒಂಬತ್ತು ಸ್ಥಾನಗಳನ್ನು ಗೆದ್ದಿದ್ದರೂ ತಮ್ಮ ಯಶಸ್ಸಿನ ಫ‌ಲ ಎಂದು ಸಂಪೂರ್ಣವಾಗಿ “ಕ್ಲೈಮ್‌’ ಮಾಡಿಕೊಳ್ಳಲು ಆಗುವುದಿಲ್ಲ.  8 ಜನ ಒಕ್ಕಲಿಗರಿಗೆ ಟಿಕೆಟ್‌ ಕೊಡಿಸಿದ್ದಾಗಿ ಸ್ವತಃ ಡಿಸಿಎಂ ಹೇಳಿಕೊಂಡಿದ್ದರು. ಆದರೆ, ಅದರಲ್ಲಿ ಒಬ್ಬರು ಮಾತ್ರ ಗೆದ್ದಿದ್ದಾರೆ. ಇದರ ನಡುವೆ ಅಧಿಕಾರಕ್ಕೆ ಬರುತ್ತಿದ್ದಂತೆ ಒಕ್ಕಲಿಗ ಸಮುದಾಯದ ನಾಯಕನ ನ್ನಾಗಿ ಬಿಂಬಿಸಿಕೊಳ್ಳಲು ಯತ್ನಿಸಿದ್ದರು. ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿ ದ್ದರು ಎನ್ನಲಾಗಿತ್ತು. ಆದರೆ, ಫ‌ಲಿತಾಂಶ ಆ ಲೆಕ್ಕಾಚಾರವನ್ನು ತಿರುವು ಮುರು ವುಗೊಳಿಸಿತು. ಇದಕ್ಕೆ ಪೂರಕವಾಗಿ ಸ್ವತಃ ಡಿ.ಕೆ. ಶಿವಕುಮಾರ್‌, “ಈ ಫ‌ಲಿತಾಂಶದ ಮೂಲಕ ಜನ ಸಂದೇಶ ನೀಡಿದ್ದಾರೆ. ಸರಿಪಡಿಸಿಕೊಳ್ಳುತ್ತೇನೆ’ ಎಂದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಬಿಟ್ಟುಕೊಡಲು ಒತ್ತಡ  ಹೆಚ್ಚಲಿದೆ.

ಮಲ್ಲಿಕಾರ್ಜುನ ಖರ್ಗೆ:  ಈ ಹಿಂದಿನ ಚುನಾವಣೆಯಲ್ಲಿ ತಮ್ಮ ಸೋಲು ಸೇರಿ ಕಲ್ಯಾಣ ಕರ್ನಾಟಕದಲ್ಲೇ ತೀವ್ರ ಹಿನ್ನಡೆ ಅನುಭವಿಸಿದ್ದ ಎಐಸಿಸಿ ಅಧ್ಯಕ್ಷರು, ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಬದಲಿಗೆ ಅಳಿಯ ರಾಧಾಕೃಷ್ಣ ದೊಡ್ಡ ಮನಿ ಜತೆಗೆ ಕಲ್ಯಾಣ ಕರ್ನಾಟಕದಲ್ಲಿ 5 ಕಡೆ (ಕಲ ಬುರಗಿ, ರಾಯಚೂರು, ಕೊಪ್ಪಳ, ಬೀದ ರ್‌, ಬಳ್ಳಾರಿ) ಗೆದ್ದಿದ್ದಾರೆ. ಒಟ್ಟಾರೆ 9ರ‌ಲ್ಲಿ ಅರ್ಧಕ್ಕಿಂತ ಹೆಚ್ಚು ಕಲ್ಯಾಣ ಕರ್ನಾಟಕ ದಿಂದಲೇ ಬಂದಿವೆ. ಇದರೊಂದಿಗೆ ಅವರ ಹಿಡಿತ ಮತ್ತು ವರ್ಚಸ್ಸು ಹೆಚ್ಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next