Advertisement

Candidates ಚೆಸ್‌: ಗುಕೇಶ್‌ ಮರಳಿ ಅಗ್ರಸ್ಥಾನಕ್ಕೆ

11:57 PM Apr 14, 2024 | Team Udayavani |

ಟೊರೊಂಟೊ: ಭಾರತದ ವಿದಿತ್‌ ಗುಜ್ರಾತಿ ಅವರನ್ನು ಸೋಲಿಸುವ ಮೂಲಕ ಕ್ಯಾಂಡಿಡೇಟ್ಸ್‌ ಚೆಸ್‌ ಪಂದ್ಯಾವಳಿಯಲ್ಲಿ ಡಿ. ಗುಕೇಶ್‌ ಮರಳಿ ಜಂಟಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. 8ನೇ ಸುತ್ತಿನ ಫ‌ಲಿತಾಂಶದ ಬಳಿಕ ಅವರು ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇಬ್ಬರೂ 5 ಅಂಕ ಹೊಂದಿದ್ದಾರೆ.

Advertisement

ನಿಜತ್‌ ಅಬಸೋವ್‌ ವಿರುದ್ಧ ನೆಪೊಮ್ನಿಯಾಚಿ ಡ್ರಾ ಸಾಧಿಸಿದರು. ಆರ್‌. ಪ್ರಜ್ಞಾನಂದ ಮತ್ತು
ಫ್ರಾನ್ಸ್‌ನ ಫಿರೌಝ ಅಲಿರೇಝ ನಡುವಿನ ಪಂದ್ಯ ಕೂಡ ಡ್ರಾದಲ್ಲಿ ಕೊನೆಗೊಂಡಿತು. ಇನ್ನೂ 6 ಸುತ್ತುಗಳ ಸ್ಪರ್ಧೆ ನಡೆಯಲಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next