ಮುಳಬಾಗಿಲು: ಹಳ್ಳಿಫೈಟ್ ನಡೆದು ಫಲಿತಾಂಶ ಪ್ರಕಟವಾಗಿ ಗೆದ್ದವರು ಸಂಭ್ರದಲ್ಲಿದ್ದರೇ, ಸೋತವರುಆತ್ಮವಲೋಕನದಲ್ಲಿ ಮುಳುಗಿದ್ದಾರೆ. ಆದರೆಇಲ್ಲೊಬ್ಬ ಭೂಪ ಚುನಾವಣೆಯ ಸೋಲಿನಿಂದಾಗಿಗ್ರಾಮಸ್ಥರಿಗೆ ಕಾಟ ಕೊಡಲು ಶುರು ಮಾಡಿ ಗ್ರಾಮದ ರಸ್ತೆಗಳನ್ನು ಹಾಳು ಮಾಡಿದ್ದಾನೆ.
ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ ದುಗ್ಗಸಂದ್ರ ಹೋಬಳಿ ಮಂಡಿಕಲ್‌ಗ್ರಾಮದಲ್ಲಿ ಎಂ.ಎಸ್.ವೆಂಕಟಾಚಲಪತಿಗೌಡಸ್ಪರ್ಧಿಸಿ ಸೋತಿದ್ದರು. ಸೋಲಿನ ಸಿಟ್ಟಿನಿಂದಗ್ರಾಮಸ್ಥರಿಗೆ ತೊಂದರೆಯುಂಟು ಮಾಡಲೆಂದುಜನಸಾಮಾನ್ಯರು ಓಡಾಡುವ ರಸ್ತೆ, ಹೊಲಗದ್ದೆ,ತೋಟಗಳು ಮತ್ತು ಸ್ಮಶಾನಕ್ಕೆ ಹೋಗುವ ರಸ್ತೆಗಳನ್ನು ಜೆಸಿಬಿಯಿಂದ ಅಗೆದು ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದಾರೆ.
ಜೆಸಿಬಿಯಿಂದ 11 ರಸ್ತೆ ಹಾಳು: ಎಂ.ವಿ.ಶ್ರೀನಿವಾಸ ಗೌಡ, ಎಂ.ಎಸ್.ವೆಂಕಟಾಚಲಪತಿಗೌಡ, ರಾಜುಎಂ.ಎನ್, ಮಂಜುನಾಥ ಎಂಬುವವರಿಗೆತೊಂದರೆಯನ್ನುಂಟು ಮಾಡಲೆಂಬ ದುರುದ್ದೇಶ ದಿಂದ ನರೇಗಾ ಯೋಜನೇಯಡಿ ಅನುದಾನಬಿಡುಗಡೆಗೊಂಡು ಕೈಗೊಂಡಿರುವ ಕಾಮಗಾರಿ ಯಲ್ಲಿನ ಗ್ರಾಮದ ಸುತ್ತಮುತ್ತಲಿನ 11 ರಸ್ತೆಗಳನ್ನು ಜೆಸಿಬಿಯಿಂದ ಹಾಳು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ.
ಗ್ರಾಮದ ರೈತರು ಹೊಲ, ಗದ್ದೆ, ತೋಟಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು, ಕೋಳಿಫಾರಂ ನಲ್ಲಿರುವ ಕೋಳಿಗಳನ್ನು ಮಾರುಕಟ್ಟೆಗೆಸಾಗಿಸಲು ಆಗದೇ ಹಾಗೂ ಜಾನುವಾರುಗಳನ್ನುಮೇಯಿಸಲು ಹೋಗಲು ಆಗದೇ ತೊಂದರೆಯುಂಟಾಗಿದೆ. ಗ್ರಾಮದ ನಕ್ಷೆಯಲ್ಲಿರುವ ರಸ್ತೆಗಳನ್ನು ಒತ್ತುವರಿಮಾಡಿಕೊಂಡಿರುವ ರಸ್ತೆಗಳನ್ನು ತೋಟಗಳಿಗೆಹೋಗಲು ತೆರವುಗೊಳಿಸಬೇಕು ಮತ್ತು ಸರ್ಕಾರಿ ಜಮೀನಿನಲ್ಲಿರುವ ಸ್ಮಶಾನ ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಿ ಆರೋಪಿಗಳವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಂಡಿಕಲ್ ಗ್ರಾಮಸ್ಥರು ನಗರದ ಮಿನಿ ವಿಧಾನಸೌದದಲ್ಲಿ ತಹಶೀಲ್ದಾರ್ ರಾಜಶೇಖರ್‌ಗೆ ಮನವಿ ಸಲ್ಲಿಸಿದರು.