Advertisement

ಕ್ಯಾನ್ಸರ್‌ ಆರಂಭದಲೇ ಪತ್ತೆಯಾದರೆ ಗುಣ ಸಾಧ್ಯ

01:41 PM Feb 05, 2021 | Team Udayavani |

ಮೈಸೂರು: ಕ್ಯಾನ್ಸರನ್ನು ಆರಂಭದ ಹಂತದಲ್ಲೇ ಪತ್ತೆ ಮಾಡಿದರೆ ಗುಣಪಡಿಸಬಹುದು ಎಂದು ಸುಯೋಗ್‌ ಆಸ್ಪತ್ರೆ ಅಧ್ಯಕ್ಷ ಡಾ.ಎಸ್‌.ಪಿ. ಯೋಗಣ್ಣ ಹೇಳಿದರು.

Advertisement

ಸುಯೋಗ್‌ ಆಸ್ಪತ್ರೆ,ಸಂಜೀವಿನಿ ಕ್ಯಾನ್ಸರ್‌ ಕೇರ್‌ ಟ್ರಸ್ಟ್‌ ಸಹಯೋಗದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ  ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಗುರುವಾರ ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಕ್ಯಾನ್ಸರ್‌ ಎಂದರೆ ಕ್ಯಾನ್ಸಲ್‌ ಅಲ್ಲ ಕೇರ್‌ (ಮುನ್ನೆಚ್ಚರಿಕೆ) ಅಷ್ಟೇ. ಕ್ಯಾನ್ಸರ್‌ ಬೇಗ ಪತ್ತೆಯಾದಲ್ಲಿ ಆ   ಭಾಗವನ್ನು ತೆಗೆದು ಜೀವ ಉಳಿಸಬಹುದು. ಈಗ ಕಿಮೊಥೆರಪಿ ಮತ್ತಿತರ ಚಿಕಿತ್ಸಾ ವಿಧಾನಗಳು ಇವೆ ಎಂದರು.

ಶ್ರೀಮಂತರು ಕಲಿಯುವ ಎಲ್ಲ ದುಶ್ಚಟಗಳನ್ನು ಬಡವರು ಕಲಿಯುತ್ತಿರುವುದರಿಂದ ಈಗ ಎಲ್ಲರಿಗೂ ಕ್ಯಾನ್ಸರ್‌ ರೋಗ ಬರುತ್ತಿದೆ. ವಂಶವಾಹಿನಿಂದಲೂ ರೋಗಗಳು ಬರುತ್ತವೆ. ಕ್ಯಾನ್ಸರ್‌ ಜೀವಕೋಶ ಒಂದು ರೀತಿಯಲ್ಲಿ ಉಗ್ರಗಾಮಿ ಇದ್ದಂತೆ. ಉಗ್ರಗಾಮಿ ಹೇಗೆ ಇತರರ ಮೇಲೆ ದಾಳಿ ಮಾಡುತ್ತಾನೋ ಅದೇ ರೀತಿ ಕ್ಯಾನ್ಸರ್‌ ಜೀವಕೋಶ ಇತರೆ ಜೀವಕೋಶಗಳ ಮೇಲೆ ದಾಳಿ ಮಾಡಿ, ಎಲ್ಲವನ್ನು ಬಲಿತೆಗೆದುಕೊಂಡು ತಾನೂ ಬಲಿಯಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.

 ಇದನ್ನೂ ಓದಿ :ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆ, ಇಂದಿನ ಬೆಲೆ ಎಷ್ಟು

ಅರಿವು ಮೂಡಿಸಿ: ಮಹಿಳೆಯರು ಸ್ತನ, ಗರ್ಭಕೋಶ ಹಾಗೂ ಅಂಡಾಶಯ ಕ್ಯಾನ್ಸರ್‌ ಬಗ್ಗೆ ಎಚ್ಚರಿಕೆ ವಹಿಸಬೇಕು. ಸ್ತನ ಕ್ಯಾನ್ಸರ್‌ ಯುವತಿಯರಿಗೂ ಬರಬಹುದು. ಗರ್ಭಕೋಶ ಕ್ಯಾನ್ಸರ್‌ ವಿವಾಹದ ನಂತರ ಬರಬಹದು. ಮುಟ್ಟಿನ ಸಮಯದಲ್ಲಿ ತೀವ್ರ ರಕ್ತಸ್ರಾವ, ಬಿಳಿ ಸೆರಗು ಬಗ್ಗೆಯೂ ಜಾಗರೂಕತೆಯಿಂದ ಇರಬೇಕು. ಸ್ವಯಂ ಪರೀಕ್ಷೆ ಮಾಡಿಕೊಂಡು, ಗಂಟು ಇದ್ದಲ್ಲಿ ವೈದ್ಯರ ಬಳಿ  ತೋರಿಸಿಕೊಳ್ಳಬೇಕು. ಅಕ್ಕಪಕ್ಕದವರಿಗೂ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next