Advertisement

150ಕ್ಕೂಹೆಚ್ಚು ಶಿಕ್ಷಕಿಯರಿಗೆ ಕ್ಯಾನ್ಸರ್‌ ತಪಾಸಣೆ

11:58 AM Jan 24, 2021 | Team Udayavani |

ಹುಬ್ಬಳ್ಳಿ: ಅವ್ವ ಸೇವಾ ಟ್ರಸ್ಟ್‌ ಹಾಗೂ ಎಚ್‌ಸಿಜಿ-ಎನ್‌ಎಂಆರ್‌ ಕ್ಯಾನ್ಸರ್‌ ಕೇಂದ್ರದ ಸಹಯೋಗದಲ್ಲಿ ಶಿಕ್ಷಕಿ ಯರಿಗೆ ಗರ್ಭ ಕೊರಳಿನ ಕ್ಯಾನ್ಸರ್‌ ತಪಾಸಣಾ ಶಿಬಿರ ಲ್ಯಾಮಿಂಗ್ಟನ್‌ ಬಾಲಕಿ ಯರ ಪ್ರೌಢಶಾಲೆ ಸಭಾಂಗಣದಲ್ಲಿ ಶನಿವಾರ ನಡೆಯಿತು.

Advertisement

ಟ್ರಸ್ಟ್‌ ಸಂಸ್ಥಾಪಕ ಹಾಗೂ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಸಮುದಾಯ ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಕ್ಯಾನ್ಸರ್‌ ರೋಗ ತಪಾಸಣೆ ಶಿಬಿರವನ್ನು ಕಳೆದ 10 ವರ್ಷಗಳಿಂದ ಅವ್ವ ಸೇವಾ ಟ್ರಸ್ಟ್‌ನಿಂದ ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಶಿಕ್ಷಕಿಯರಿಗೆ ತಪಾಸಣೆ ಹಾಗೂ ರೋಗದ ತಡೆ ಲಸಿಕೆಯನ್ನು ಮೂರು ಹಂತದಲ್ಲಿ ನೀಡುವ ಬೃಹತ್‌ ಆರೊಗ್ಯ ಶಿಬಿರಗಳನ್ನು ಟ್ರಸ್ಟ್‌ ಹಮ್ಮಿಕೊಳ್ಳಲಿದೆ ಎಂದರು.

ಇದನ್ನೂ ಓದಿ:ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ : ಸೈಫ್ ಅಲಿಖಾನ್‌ ಸೇರಿ 5 ಮಂದಿ ವಿರುದ್ಧ ಕೇಸ್‌

ಎಚ್‌ಸಿಜಿ ಕ್ಯಾನ್ಸರ್‌ ಕೇಂದ್ರದ ಹಿರಿಯ ತಜ್ಞ ಡಾ| ರವಿ ಕಲಘಟಗಿ ಹಾಗೂ ಹಿರಿಯ ಪ್ರಸೂತಿ ತಜ್ಞೆ ಡಾ| ಮೀನಾ ಕಲಘಟಗಿ ನೇತೃತ್ವದಲ್ಲಿ, ಕ್ಯಾನ್ಸರ್‌ ರೋಗ ತಜ್ಞರಾದ ಡಾ| ವಿನಯಕುಮಾರ ಮುತ್ತಗಿ, ಡಾ| ಜಯಕಿಶನ್‌ ಇನ್ನಿತರ ತಜ್ಞರು ಸುಮಾರು 150ಕ್ಕೂ ಹೆಚ್ಚು ಶಿಕ್ಷಕಿಯರಿಗೆ ತಪಾಸಣೆ ನಡೆಸಿದರು. ಅವ್ವ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಪಾದ ರಾಣೆ, ಡಿ.ಬಿ. ಮಾಸೂರ ಇನ್ನಿತರರಿದ್ದರು. ಶಿಕ್ಷಕ ಎಸ್‌.ವಿ. ಪಟ್ಟಣಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next