ದೆಹಲಿಯ “ಇಂಡಿಯನ್ ಹ್ಯಾಬಿಟಾಟ್ ಸೆಂಟರ್’ ಎಂಬ ಸುಂದರ ಕ್ಯಾಂಪಸ್‌ನಲ್ಲಿ ನಾನು ಎಂದಿನಂತೆ ಅಂದೂ ಅಡ್ಡಾಡುತ್ತಿದ್ದೆ. ಸಾಹಿತ್ಯ, ಸಂಗೀತ ಮತ್ತು ಕಲೆಯನ್ನು ಪ್ರೀತಿಸುವ ಎಲ್ಲರಿಗೂ ಅದೊಂದು ಪುಟ್ಟ ಸಾಂಸ್ಕೃತಿಕ ಸ್ವರ್ಗ. ಏನಿಲ್ಲವೆಂದರೂ ಆ ಜಾಗದಲ್ಲಿರುವ ಒಂದು ಕಲಾತ್ಮಕತೆಯನ್ನು ಕಣ್ತುಂಬಿಕೊಳ್ಳಲು ದೆಹಲಿಯ ನಿವಾಸಿಗಳು ಬರುವುದುಂಟು. ಅಂದ ಹಾಗೆ ಅತ್ತ ನೆಟ್ಟಗೆ ಸೆಕೆಯೂ ಅಲ್ಲದ, ಇತ್ತ ಮೈಕೊರೆಯುವ ಚಳಿಯೂ ಅಲ್ಲದೆ ಹಿತವೆನಿಸುವ ದೆಹಲಿಯ ನವೆಂಬರ್ ತಿಂಗಳಲ್ಲಿ “ಇಂಡಿಯನ್ ಹ್ಯಾಬಿಟಾಟ್’ನಲ್ಲಿ ನಡೆಯುತ್ತಿದ್ದಿದ್ದು “ಸಮನ್ವಯ್’ ಎಂಬ ಭಾರತೀಯ ಭಾಷಾ ಮಹೋತ್ಸವ. ಕನ್ನಡವೂ ಸೇರಿದಂತೆ ಸಾಹಿತ್ಯ, ರಂಗಭೂಮಿ, ಕಲೆ ಇತ್ಯಾದಿ ಕ್ಷೇತ್ರಗಳಿಂದ ಹಲವು ಮಹನೀಯರು ಆಗಮಿಸಿದ್ದರು. ಕನ್ನಡದಿಂದಲೂ ಗಿರೀಶ್ ಕಾಸರವಳ್ಳಿಯವರಿಂದ ಹಿಡಿದು ಡಾ. ಚಂದ್ರಶೇಖರ ಕಂಬಾರ, ಬಾನು ಮುಷ್ತಾಕ್, ಗೋಪಾಲಕೃಷ್ಣ ಪೈ, ಮಮತಾ ಸಾಗರ್ ಆದಿಯಾಗಿ ಹಲವು ಸಾಧಕರು ಆಗಮಿಸಿದ್ದು ಮತ್ತು ಇವರೆಲ್ಲರ ಜೊತೆ ಒಂದೆರಡು ಕ್ಷಣಗಳನ್ನು ಕಳೆದಿದ್ದು ನನ್ನ ದೆಹಲಿಯ ದಿನಗಳ ಅವಿಸ್ಮರಣೀಯ ಕ್ಷಣಗಳಲ್ಲೊಂದು. ಹಿರಿಯ ಲೇಖಕಿಯಾದ ಬಾನು ಮುಷ್ತಾಕ್ ನಿರರ್ಗಳ ಹಿಂದಿಯಲ್ಲಿ ಅದೆಷ್ಟು ಚೆನ್ನಾಗಿ ಮಾತನಾಡಿದರೆಂದರೆ ಸಭಿಕರ ಚಪ್ಪಾಳೆಯು ಮುಗಿಲು ಮುಟ್ಟಿತ್ತು. ಹಾಗೆಯೇ ಕವಯತ್ರಿ ಮಮತಾ ಸಾಗರರ ಕವಿತೆಗಳ ಓಘಕ್ಕೆ ಕೂಡ.
Advertisement
ಹೀಗೆ ಸಭಿಕರ ಗುಂಪಿನಿಂದ ಅತಿಥಿಗಳ ಗುಂಪಿಗೆ ಬಂದ ನಾನು ಹಲವು ಭಾಷೆಗಳ ಗಣ್ಯರೊಂದಿಗೆ ಬೆರೆಯುತ್ತ ಅವರೊಂದಿಗೆ ಗುಂಪಿನಲ್ಲಿ ಗೋವಿಂದವೆಂಬಂತೆ ತೂರಿಕೊಂಡಿದ್ದೇ ವಿಶೇಷ. ಟೀ-ಸೆಶನ್ನುಗಳು ಸೇರಿದಂತೆ ಇತರ ಬ್ರೇಕುಗಳಲ್ಲಿ ಹಲವು ಹೊಸಪರಿಚಯಗಳಲ್ಲದೆ ಆಸಕ್ತಿದಾಯಕ ಮಾತುಕತೆಗಳಲ್ಲಿ ಭಾಗಿಯಾಗುವ ಭಾಗ್ಯವೂ ನನ್ನದಾಯಿತು. ಆದರೆ, ಬಂದ ಕನ್ನಡೇತರ ಸಾಹಿತಿಗಳಲ್ಲಿ ಹೆಚ್ಚು ನನ್ನನ್ನು ಕಾಡಿದ್ದು ವಿಭಾರಾಣಿ ಎಂಬ ಹೆಸರು.
Related Articles
Advertisement
“”ನಿಮಗೆ ಕ್ಯಾನ್ಸರ್ ಇದೆ ಎಂದೇಕೆ ಅನಿಸುತ್ತಿದೆ?”“”ಹಾಗೇನೂ ನನಗೆ ಅನ್ನಿಸುತ್ತಿಲ್ಲ”
“”ಮತಾöಕೆ ಬಂದಿರಿ ಇಲ್ಲಿಗೆ?”
“”ಕಳಿಸಿದ್ದರಿಂದ ಬಂದೆ”
“”ಯಾರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದು?”
“”ಸ್ತ್ರೀರೋಗ ತಜ್ಞೆ”
“”ಆರು ವರ್ಷಗಳ ಮೆಡಿಕಲ್ ಕೇಸ್ ಹಿಸ್ಟರಿ ಇದು. ಎಡಸ್ತನದ ಮೇಲ್ಭಾಗದಲ್ಲಿ ಕಾಳಿನ ಗಾತ್ರದ ಚಿಕ್ಕ ಗಂಟಿನಂಥ ಒಂದು ಆಕಾರ. ನೋಡಲು ಚಿಕ್ಕದಾಗಿದ್ದ ಈ ಗಂಟು ಮುಂದೆ ನೀರಿನಲ್ಲಿ ನೆನೆಹಾಕಿದ ಕಡಲೆಕಾಳಿನ ಗಾತ್ರಕ್ಕೆ ಬಂದು ನಿಂತಿತ್ತು. ನೋವೇನೂ ಇಲ್ಲ. ಇದರ ಬೆಳವಣಿಗೆಯೂ ಇಲ್ಲವೇ ಇಲ್ಲವೆನ್ನುವಷ್ಟು ನಿಧಾನ. ಮುಂಬೈ ಮತ್ತು ಚೆನ್ನೈಯ ಆಸ್ಪತ್ರೆಗಳಲ್ಲಿ ತೋರಿಸಿಲ್ಲಾಯಿತು. ನಿಮ್ಮ ಆಸ್ಪತ್ರೆಯಲ್ಲೂ ಒಮ್ಮೆ ತೋರಿಸಿದ್ದೆ. ಸ್ತ್ರೀರೋಗ ತಜ್ಞರಲ್ಲೂ ಕೂಡ” ಎಂದಿದ್ದೆ
ನಾನು. ಕಾಳಿನ ಗಾತ್ರ, ಬೇಳೆಯ ಗಾತ್ರ ಎನ್ನುತ್ತಾ ಈ ಗಂಟಿನ ಅಳತೆಗೋಲನ್ನು ಅಡುಗೆಮನೆಯ ಧಾಟಿಯÇÉೇ ವಿವರಿಸುವುದನ್ನು ಯೋಚಿಸಿದರೆ ನಗು ಬರುತ್ತೆ. ಹಾಗೆಯೇ ಸ್ತನ, ಯೋನಿಯ ವಿಷಯಗಳು ಬಂದಾಗಲೆಲ್ಲ ಕಂಗಾಲಾಗಿ ಸ್ತ್ರೀರೋಗ ತಜ್ಞರ ಬಳಿ ನಾವುಗಳು ಓಡೋಡಿ ಹೋಗುವುದನ್ನು ಎನಿಸಿಕೊಂಡರೂ ನಗು ಬರುತ್ತೆ. ನಮ್ಮಂಥ ಸಾಮಾನ್ಯ ಜನರ ವೈದ್ಯಕೀಯ ಜ್ಞಾನ ಅಂದರೆ ಇದಿಷ್ಟೇ. ಫಿಸಿಷಿಯನ್, ಸರ್ಜನ್, ಗೈನಕಾಲಾಜಿಸ್ಟ್; ಮುಗೀತು. ಆರು ವರ್ಷಗಳ ಕಾಲ ಇದನ್ನು ತೋರಿಸುತ್ತ¤ ಪರಿಹಾರಕ್ಕಾಗಿ ಆ ಸ್ಪೆಶಲಿಸ್ಟ್ ಈ ಸ್ಪೆಶಲಿಸ್ಟ್ ಎಂದು ಅಲೆದಾಡಿದ್ದೇ ಆಯಿತು. ಸ್ನೇಹಿತೆಯರೂ, ಕೆಲ ವೈದ್ಯ ಮಹಾಶಯರೂ “ವಯಸ್ಸಿನ ಜೊತೆಗೇ ಬೆರಳೆಣಿಕೆಯ ಗ್ಲಾಂಡ್ (ಗ್ರಂಥಿ)ಗಳು ಬರುವುದು ಸಾಮಾನ್ಯ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ’ ಎಂದೇ ಹೇಳಿ ನನ್ನ ಬಾಯಿಮುಚ್ಚಿಸಿದ್ದರು. ನಾನೂ ನಿಶ್ಚಿಂತಳಾಗಿ ಮನೆ, ಆಫೀಸು, ಲೇಖನ, ರಂಗಭೂಮಿ ಅಂತೆಲ್ಲಾ ಆರಾಮಾಗಿ ಓಡಾಡಿಕೊಂಡಿದ್ದೆ. ಆದರೆ, ನಿಜವಾಗಿಯೂ ನಾನು ಧನ್ಯವಾದಗಳನ್ನು ಅರ್ಪಿಸಬೇಕಾಗಿರುವುದು ಗೈನಕಾಲಜಿ ವಿಭಾಗದಲ್ಲಿದ್ದ ನರ್ಸ್ ಒಬ್ಬರಿಗೆ. ವೈದ್ಯರನ್ನು ಭೇಟಿಯಾದ ಕಾರಣವನ್ನು ಕೇಳಿದ ಅವಳು ನನಗೆ ಹೇಳಿದ್ದಿಷ್ಟೇ: “”ನೀವು ಇಲ್ಲಿಂದ ಸೀದಾ ಆಂಕಾಲಜಿ ವಿಭಾಗಕ್ಕೆ ಹೋಗಿ ಒಮ್ಮೆ ತೋರಿಸಿ. ಈ ವೈದ್ಯರೂ ನಿಮ್ಮನ್ನು ಮುಂದೆ ಕಳಿಸಲಿರುವುದು ಅಲ್ಲಿಗೇ. ಅಲ್ಲಿಯವರೆಗೆ ಕಾದು ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳಬೇಡಿ”. ಆಂಕಾಲಜಿ ಎಂದಾಕ್ಷಣ ಒಮ್ಮೆ ಹೃದಯಬಡಿತವೇ ನಿಂತುಹೋದಂಥ ಭಾವ. ಆದರೂ ಎಂದಿನ ಉಡಾಫೆಯ ಶೈಲಿಯಲ್ಲಿ “ವಿಭಾ ಡಾರ್ಲಿಂಗ್… ಈವರೆಗೂ ಏನೂ ಆಗಲಿಲ್ಲ ನಿನಗೆ. ಇನ್ನೇನು ಮಹಾ ಆಗಲಿದೆ!’ ಎಂದು ಅಂದುಕೊಳ್ಳುತ್ತಾ ನನ್ನನ್ನು ನಾನೇ ಸಂತೈಸಿಕೊಂಡೆ. ಇನ್ನು ಆ ವೈದ್ಯನೋ, ನನಗಿಂತಲೂ ಹತ್ತುಪಟ್ಟು ಭೂಪ. “”ಇದು ಫೈಬ್ರಾಯ್ಡ ಅನ್ನಿಸುತ್ತಿದೆ. ಚಿಂತೆ ಮಾಡುವ ಆವಶ್ಯಕತೆಯಿಲ್ಲ. ಜೀವನದುದ್ದಕ್ಕೂ ಈ ಫೈಬ್ರಾಯ್ಡ ಜೊತೆಯೇ ಆರಾಮಾಗಿ ದಿನಕಳೆಯ ಬಹುದು ನೀವು”, ಎಂದಿದ್ದ ಆತ. ಆದರೂ ನನ್ನ ಪೆಚ್ಚಾದ ಮುಖವನ್ನು ಕಂಡು ಅವನಿಗೆ ಏನನ್ನಿಸಿತೋ ಏನೋ. ಸುಮ್ಮನೆ ನನ್ನ ಸಮಾಧಾನಕ್ಕೆಂಬಂತೆ, “”ಒಮ್ಮೆ ಹೋಗಿ ಮಮ್ಮೊಗ್ರಫಿ, ಮಮ್ಮೊ-ಸೋನೋಗ್ರಫಿ ಮತ್ತು ಬಯಾಪ್ಸಿಗಳನ್ನು ಮಾಡಿಸಿ ರಿಪೋರ್ಟಿನೊಂದಿಗೆ ಬನ್ನಿ” ಎಂದಿದ್ದ. ಯಾವುದೇ ಹೊಸ ಕ್ಷೇತ್ರವಾಗಿದ್ದರೂ ಹೊಸ ಅನುಭವದಂತೆ ತಬ್ಬಿಕೊಳ್ಳುವವಳು ನಾನು. ಆದರೆ, ನನ್ನ ವೇಳಾಪಟ್ಟಿಯು ಅದೆಷ್ಟು ಬಿಗಿಯಾಗಿತ್ತೆಂದರೆ ಮುಂಬರುವ ದೀಪಾವಳಿಯವರೆಗೂ ನಿಗದಿತ ವೇಳಾಪಟ್ಟಿಯಾಚೆಗಿನ ಯಾವ ಯೋಚನೆಗಳಿಗೂ ಸಮಯವಿರಲಿಲ್ಲ. ಪುಣ್ಯಕ್ಕೆ ಆ ದಿನ ಯಾವುದೇ ಮೀಟಿಂಗೂ, ನಾಟಕದ ರಿಹರ್ಸಲ್‌ಗಳೂ ಇರಲಿಲ್ಲವಾದ್ದರಿಂದ ಸ್ವಲ್ಪ ಬಿಡುವಾಗಿದ್ದೆ. ಇನ್ನೇನು, “”ಕಲ್ ಕರೇ ಸೋ ಆಜ್ ಕರ್, ಆಜ್ ಕರೇ ಸೋ ಅಬ್” (ನಾಳೆ ಮಾಡುವಂಥದ್ದನ್ನು ಇಂದೇ ಮಾಡು, ಇಂದು ಮಾಡಬೇಕಾಗಿರುವುದನ್ನು ಈಗಲೇ ಮಾಡು). ಅಂತೂ ನಾನು ಮಮ್ಮೊಗ್ರಫಿ ವಿಭಾಗದ ಕಡೆ ಹೊರಟೇಬಿಟ್ಟೆ. ಸೀದಾ ನಡೆದುಬಂದ ನನ್ನನ್ನು ನೋಡುತ್ತಲೇ ಮಮ್ಮೊಗ್ರಫಿ ವಿಭಾಗದಲ್ಲಿದ್ದ ಆಸ್ಪತ್ರೆಯ ಕರ್ಮಚಾರಿಯೊಬ್ಬ
“ಅಪಾಯಿಂಟ್‌ಮೆಂಟ್ ಇಲ್ಲದೆ ಬಂದವರು ಕಾಯಲೇಬೇಕು’ ಎಂದು ಷರಾ ಹೊರಡಿಸಿದ. ಇನ್ನೇನು ಮಾಡಲಿ, ಕಾಯದೇ ವಿಧಿಯಿಲ್ಲ. ಕಾಯುವುದಕ್ಕೇನೋ ನಾನು ತಯಾರು. ಆದರೂ ಅದೆಂಥಲ್ಲೋ ಏಕಾಂಗಿತನ, ಎಂದಿನ ಉಡಾಫೆ ಭಾವ ಮತ್ತು ಮನದಾಳದಲ್ಲೆಲ್ಲೋ ಈಗಷ್ಟೇ ಇಣುಕಲು ಶುರುಮಾಡಿದ್ದ ಒಂದು ಅವ್ಯಕ್ತ ಭಯ. ನನ್ನ ವೈಯಕ್ತಿಕ ಕೆಲಸಗಳಿಗಾಗಿ ಇನ್ಯಾರನ್ನೋ ಜೊತೆಯಲ್ಲಿ ಒಯ್ಯುವುದೆಂದರೆ ಅವರ ಸಮಯವನ್ನು ಹಾಳು ಮಾಡಿದಂತೆ ಎಂಬುದು ನನ್ನ ನಂಬಿಕೆ. ಆಸ್ಪತ್ರೆಗಳಿಗೆ ಹೋಗುವುದಕ್ಕೂ ಇದು ಅನ್ವಯವಾಗುತ್ತದೆ. ಅಜಯ್ (ಪತಿ) ನಿಗೆ ಕರೆ ಮಾಡಿ ಒಂದೆರಡು ಟೆಸ್ಟ್‌ಗಳನ್ನು ಮಾಡಿಕೊಳ್ಳಲು ಬಂದಿರುವೆನೆಂದೂ, ಬರಲು ಕೊಂಚ ತಡವಾಗಬಹುದೆಂದೂ ಹೇಳಿ ಫೋನಿಟ್ಟೆ. ನಾನು ಇದನ್ನು ಅದೆಷ್ಟು ಕ್ಯಾಷುವಲ್ ಆಗಿ ಹೇಳಿದೆನೆಂದರೆ ಅವನೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗದೆ ಸುಮ್ಮನೆ “ಹೂಂ’ ಎಂದಿದ್ದ. “”ಮೇರಾ ಬ್ರೆಸ್ಟ್ , ರೋಲರ್ ಪ್ರಸ್ಡ್”, ಎನ್ನುತ್ತ ಯಾವಾಗಲೂ ತನ್ನ ಸಪಾಟು ಎದೆಯ ಬಗ್ಗೆ ತಮಾಷೆಯಾಗಿ ಹೇಳುತ್ತಿರುವವಳು ನಾನು. ಈ ಸಮತಲದ ಎದೆಯು ಮಮ್ಮೊಗ್ರಫಿಯ ನೋವನ್ನು ನಾಲ್ಕುಪಟ್ಟು ಹೆಚ್ಚಿಸಿತ್ತು. ತಜ್ಞರ ಗೊಂದಲದ ಮುಖಭಾವಗಳು ಕಣ್ಣೆದುರಿಗಿದ್ದ ಸವಾಲನ್ನು ಮತ್ತಷ್ಟು ಎದ್ದುಕಾಣುವಂತೆ ಮಾಡಿದ್ದವು. “”ನನ್ನ ಸಪಾಟು ಎದೆಯ ಮಮ್ಮೊàಗ್ರಫಿಯನ್ನು ಮಾಡಿಯೇ ಬಿಡಿ”, ಎಂದು ಎಂದಿನ ಉತ್ಸಾಹದಲ್ಲಿ ನಾನು ಅವರಿಗೆ ಅಸ್ತು ಎಂದಿದ್ದೆ. ಆದರೆ ದುರದೃಷ್ಟವಶಾತ್ ಸಂಕಷ್ಟಗಳೂ ಎಣಿಸಿದ್ದಕ್ಕಿಂತ ಹೆಚ್ಚೇ ಇದ್ದವು. ನೋವನ್ನು ತಡೆದುಕೊಳ್ಳುವುದು ಅಸಾಧ್ಯದ ಮಾತಾಯಿತು. ನಾನು ಆ ದಿನ ಬರೆದೆ.
ಇದೇನು ಸ್ತನವೋ, ಬೇಕಾಯಿಯೋ…
ಇದೇನು ಯಂತ್ರವೋ ಅಥವಾ
ತಡಕಾಡುತ್ತಿರುವ ನಿಲ್ಲದ ರಾಕ್ಷಸ ಕೈಯೋ…
ಸ್ತನಗಳೆಂದರೆ ಕೆಲವರಿಗೆ ಮಾಂಸದ ಮುದ್ದೆಯಷ್ಟೇ,
ಇಲ್ಲಿರುವುದು ಬೀಸುಕಲ್ಲಿನಿಂದ ಸಪಾಟಾದ ಎದೆ…
ಬಂದು ಬಿಡು ಬೇಗ,
ಬೀಸುಕಲ್ಲಿನ ಚಕ್ರಗಳ ನಡುವೆ,
ಈ ಸಪಾಟು ಜಾಗದಲ್ಲಿ
ಮಾಂಸದ ಮುದ್ದೆಯನ್ನು
ನೀನೇ ಸ್ವತಃ ತುಂಬಿಬಿಡು…
ಹಾಗೆಯೇ ಬಿಕ್ಕಳಿಕೆಯನ್ನೂ ಕೂಡ…
ಹುಚ್ಚೆದ್ದು ನಾಟ್ಯವಾಡುವ ಈ ಹೆಣ್ತನದಿಂದ
ನಿನ್ನನ್ನು ಉಳಿಸಲು ಬರುವವರ್ಯಾರೂ ಇಲ್ಲ,
ಹೆಣ್ಣಿನ ಈ ಅಂಗವು ಬಗೆಬಗೆಯ ರೂಪಗಳಿಂದ
ತನ್ನನ್ನೇ ಹೇಗೆ ವಂಚಿಸುತ್ತಿದೆ ನೋಡು… ಬಯಾಪ್ಸಿಯಲ್ಲಾಗುವ ನೋವಿನ ಬಗ್ಗೆ ಕಿಂಚಿತ್ತು ಜ್ಞಾನವೂ ನನಗಿರಲಿಲ್ಲ. “”ಒಂದು ಇಂಜೆಕ್ಷನ್ ಕೊಟ್ಟು ಮಾದರಿ ತೆಗೆದುಕೊಳ್ಳುತ್ತೇವೆ ಅಷ್ಟೇ”, ಎಂದಿದ್ದರು ವೈದ್ಯರು. ಆದರೆ ಇಂಜೆಕ್ಷನ್ನಿನ ಸೂಜಿಯು ಸುತ್ತಲೂ ಚುಚ್ಚುತ್ತಲೇ ಹೋಗುತ್ತ ಇನ್ನೇನು ಮಾಂಸದ ಒಂದು ತುಣುಕೇ ಉದುರಲಿದೆ ಎಂಬ ಸ್ಥಿತಿಗೆ ಬಂದಾಗಲೇ ನೋವಿನ ವಿಶ್ವರೂಪದ ಅರಿವಾಗಿದ್ದು. ಅಲ್ಲದೆ ತೊಟ್ಟಿಕ್ಕಿ ಟ್ರೇನಲ್ಲಿ ಸಂಗ್ರಹವಾಗುತ್ತಿದ್ದ ರಕ್ತದ ಹನಿಗಳನ್ನು ನೋಡುತ್ತಾ ನಾನು ಇನ್ನಷ್ಟು ಅಧೀರಳಾಗುತ್ತಿದ್ದೆ. ಎಲ್ಲಾ ಮುಗಿಸಿ ದೈಹಿಕವಾಗಿಯೂ, ಮಾನಸಿಕವಾಗಿಯೂ ಸುಸ್ತಾಗಿಹೋಗಿದ್ದ ನಾನು ಮನೆಗೆ ಮರಳಲೆಂದು ಕೊನೆಗೂ ಮಮ್ಮೊಗ್ರಫಿಯ ಕೋಣೆಯಿಂದ ಹೊರಗೆ ಬಂದಿದ್ದೆ. ಆ ದಿನ ನಾನು ಕಾರು ತಂದಿರಲಿಲ್ಲ. ಎಷ್ಟು ಕಾದರೂ ಯಾವ ಆಟೋದವನೂ ನಿಲ್ಲಿಸುವಂತೆಯೂ ಕಾಣಲಿಲ್ಲ. ಒಬ್ಬ ಪುಣ್ಯಾತ್ಮ ಆಟೋ ನಿಲ್ಲಿಸಿದರೂ ಹೊರಡಲು ತಯಾರಿರಲಿಲ್ಲ. “”ನೋಡಪ್ಪಾ… ಆಸ್ಪತ್ರೆಗೆಂದು ಬಂದಿದ್ದೆ. ತಲೆಸುತ್ತು ಬರುತ್ತಿದೆ. ದಯವಿಟ್ಟು ಹೊರಡು”, ಎಂದು ನಾನು ಮೆಲ್ಲಗೆ ಗೋಗರೆದೆ. “”ಹಾಗಿದ್ದರೆ ಆಸ್ಪತ್ರೆಯಿಂದಲೇ ಆಟೋ ಹಿಡಿಯ ಬೇಕಿತ್ತಲ್ವಾ?”, ಎಂದು ಆತ ರೊಳ್ಳೆ ತೆಗೆದ. “”ಅಲ್ಲಿ ಯಾವ ಆಟೋದವನೂ ನಿಲ್ಲಿಸಲಿಲ್ಲ. ಹೀಗಾಗಿ ಮುಖ್ಯರಸ್ತೆಯ ವರೆಗೆ ಬಂದೆ. ನನ್ನನ್ನು ನೋಡಿದರೆ ಗೊತ್ತಾಗುತ್ತಿಲ್ಲವೇ ನಿನಗೆ. ಒಂದು ಕೈಯಲ್ಲಿ ನಿನ್ನ ಆಟೋವನ್ನು ಆಧಾರವಾಗಿ ಹಿಡಿದುಕೊಂಡು ಹೇಗೆ ಒದ್ದಾಡುತ್ತಿರುವೆ ನೋಡು”, ಎಂದು ಉಸುರಿದೆ ನಾನು. ನನ್ನನ್ನು ಸೂಕ್ಷ್ಮವಾಗಿ ಕಣ್ಣಲ್ಲೇ ಅಳೆದ ಆತ ಒಲ್ಲದ ಮನಸ್ಸಿನಿಂದಲೇ ಕರೆದುಕೊಂಡು ಹೋಗಿ ಮನೆ ಮುಟ್ಟಿಸಿದ. ಆದರೆ ನಾನು ಅಪಾರ್ಟ್ ಮೆಂಟಿನ ಒಳಸೇರಿ ಲಿಫ್ಟ್ನ ಒಳಹೊಕ್ಕುವವರೆಗೂ ಪಾಪ ಕಾಯುತ್ತಲೇ ಇದ್ದ ಆತ. ಚಿಕ್ಕ ಚಿಕ್ಕ ಮಾನವೀಯ ಸಂವೇದನೆಗಳು ಮನಸ್ಸನ್ನು ಅದೆಷ್ಟು ತಟ್ಟುತ್ತವೆ ನೋಡಿ! ಹೀಗೆ ಪ್ರಾಥಮಿಕ ಹಂತದ ತಪಾಸಣೆಯನ್ನು ಮಾಡಿಸಿ ನಾನು ಕಾರ್ಯನಿಮಿತ್ತ ಭೋಪಾಲ್ ಕಡೆಗೆ ಧಾವಿಸಿದ್ದೆ. ಆಫೀಸು, ಬಿಡುವಿಲ್ಲದ ದಿನಗಳು… ಇವೆಲ್ಲಾ ನನ್ನ ಮಟ್ಟಿಗೆ ಎಂದಿನ ಕತೆಗಳೇ. ಅದರಲ್ಲೂ ಆಫೀಸಿನಲ್ಲಿ ನಿರೀಕ್ಷಣೆಯ ಅಧಿಕಾರಿಗಳು ಬಂದರೆಂದರೆ, ಎಲ್ಲಾ ಜವಾಬ್ದಾರಿಗಳೂ ನನ್ನ ಮೇಲೆಯೇ ಎಂದರೆ ಹೇಳುವುದೇ ಬೇಡ. ಹೀಗಾಗಿ ಒಂದೆರಡು ದಿನಗಳ ಕಾಲ ಎಲ್ಲವೂ ಮರೆತೇಹೋಯಿತು. ನಾಲ್ಕು ದಿನಗಳ ನಂತರ ಅಚಾನಕ್ಕಾಗಿ ನೆನಪಾಗಿ ಅಜಯ್‌ಗೆ ಕರೆ ಮಾಡಿದರೆ “ರಿಪೋರ್ಟ್ ಪಾಸಿಟಿವ್ ಇದೆ. ನೀನು ಬಂದುಬಿಡು. ಆಮೇಲೆ ನೋಡೋಣ”, ಎಂದು ಚಿಕ್ಕದಾಗಿ ಹೇಳಿಬಿಟ್ಟ. ಹದಿನೆಂಟು ಅಕ್ಟೋಬರ್ 2013 ರ ರಾತ್ರಿಯದು. ಹೃದಯದಲ್ಲಿ ಮತ್ತೂಮ್ಮೆ ಢವಢವ. ಆ ರಾತ್ರಿ ಔತಣಕೂಟವೊಂದು ನಡೆಯುತ್ತಿತ್ತು. ನಾನೂ ಭಾಗವಹಿಸಿದ್ದೆ. ಮನಸ್ಸಿಲ್ಲದಿದ್ದರೂ ತಿನ್ನುತ್ತಿದ್ದೆ, ಸುಖಾಸುಮ್ಮನೆ ನಕ್ಕು ಮಾತನಾಡುತ್ತಿದ್ದೆ. ಅದೇನೇ ತೊಂದರೆಗಳಿದ್ದರೂ ಈವರೆಗೆ ನನ್ನ ವೈದ್ಯಕೀಯ ರಿಪೋರ್ಟುಗಳು ಪರವಾಗಿಲ್ಲವೆಂಬ ಧಾಟಿಯಲ್ಲೇ ಬರುತ್ತಿದ್ದವು. “”ಆಗಲಿ… ಏನಾದರೂ ಬಂತಲ್ಲ”, ಎಂದು ನಕ್ಕು ಮರೆಯಲು ಪ್ರಯತ್ನಿಸಿದೆ. ರಿಪೋರ್ಟು ತಪ್ಪೂ ಆಗಿರಬಹುದೆಂದು ಮನದ ಇನ್ನೊಂದು ಮುಖವು ಹೇಳಿತು. “”ಯಾವುದಕ್ಕೂ ನಾನು ಮರಳಿ ಬರುವಷ್ಟರಲ್ಲಿ ಒಮ್ಮೆ ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ರಿಪೋರ್ಟನ್ನು ತೋರಿಸು” ಎಂದು ಅಜಯ್‌ಗೆ ಹೇಳಿದೆ. ಮರುದಿನ ಕುಟುಂಬದ ವೈದ್ಯರೂ ಸುದ್ದಿಯನ್ನು ದೃಢಪಡಿಸಿದರು. ಸಾರಾಂಶವಿಷ್ಟೇ: “”ಕ್ಯಾನ್ಸರಿನ ಜಗತ್ತಿಗೆ ಸುಸ್ವಾಗತ” (ಮುಂದಿನ ರವಿವಾರಕ್ಕೆ…) – ಪ್ರಸಾದ್ ನಾೖಕ್