ಹುಮನಾಬಾದ: ಕ್ಯಾನ್ಸರ್ ಕುರಿತು ಜನರು ಜಾಗೃತಿ ವಹಿಸಬೇಕು. ಈ ಕುರಿತು ಆರೋಗ್ಯ ಇಲಾಖೆ ಕೂಡ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಿದ್ದ ಕ್ಯಾನ್ಸರ್ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
ಎಚ್.ಸಿ.ಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ| ಶಾಂತಲಿಂಗ ನಿಗ್ಗುಡಗಿ ಮಾತನಾಡಿ, ತಂಬಾಕು, ಮದ್ಯಪಾನ, ಜಂಕಫುಡ್, ಹೊಗೆಸೊಪ್ಪಿನಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಹೆಚ್ಚುತ್ತಿದ್ದು, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್‌ಗಳು ಹೆಚ್ಚಾಗುತ್ತಿವೆ. ಇಂದಿನ ದಿನಗಳಲ್ಲಿ ಎಲ್ಲರೂ ಕ್ಯಾನ್ಸರ್ ವಿರುದ್ಧ ಹೋರಾಡಬೇಕಿದ್ದು, ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ನಾಗನಾಥ ಹುಲಸೂರೆ ಮಾತನಾಡಿ, ಕ್ಯಾನ್ಸರ್ ಮಾರಣಾಂತಿಕವಾಗಿದೆ. ರೋಗದ ಬಗ್ಗೆ ಯಾರು ಕೂಡ ನಿರ್ಲಕ್ಷತನ ಮಾಡಬಾರದು. ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಕೂಡಲೇ ವೈದ್ಯರ ಸಂಪರ್ಕ ಮಾಡಬೇಕು ಎಂದು ತಿಳಿಸಿದರು.
ದಂತ ವೈದ್ಯೆ ಡಾ| ಕಾಮಿನಿ, ಕಿವಿ, ಮೂಗು, ಗಂಟಲು ತಜ್ಞ ಡಾ| ಅಬ್ದುಲ್ ಸುಭಾನ್, ರೆಡಿಯೋಲಾಜಿಸ್ಟ್ ಡಾ| ಮುಜಾಫರ್, ದಂತ ವಿದ್ಯಾಲಯದ ಆಡಳಿತಾಧಿಕಾರಿ ನಾಗೇಶ, ಡಾ| ಮುಜಾ¤ಬ್, ಡಾ| ನಾಗರಾಜ, ಡಾ| ಬಿಪಿನ್ ಕುಮಾರ, ಡಾ| ಅಮರ, ಡಾ| ಶರಣು, ಡಾ| ಪ್ರವೀಣ, ವೀರೇಶ ಕಿರಣಗಿ, ಕ್ಯಾನ್ಸರ್ ಟೆಕ್ನಿಷಿಯನ್ ಅಶ್ವಿನಿ, ಶರಣು, ತೌಸಿಫ್, ಶಂಕರ ಶುಶ್ರೂಷಕ ಸಿಬ್ಬಂದಿ, ಶ್ರೀಶೈಲ್, ಸುನೀಲ್, ಶಿವಕುಮಾರ ಕಿವಡೆ, ಆಸ್ಪತ್ರೆ ಸಿಬ್ಬಂದಿ ಇದ್ದರು.