Advertisement
ರಾಜಯೋಗದ್ದಾಗ ಚಂದ್ರನ ಪಾತ್ರ ಹೆಚ್ಚು ನಿರ್ಣಾಯಕಬಹಳ ಮಂದಿಯ ಜಾತಕದಲ್ಲಿ ರಾಜಯೋಗಗಳಿರುತ್ತದೆ. ಆದರೆ ಚಂದ್ರನ ಪಾತ್ರ ಮಹತ್ವದ್ದಾಗಿ ರಾಜಯೋಗಗಳಿಗೆ ಹೆಚ್ಚು ತೂಕ. ಕರ್ಕಾಟಕ ರಾಶಿಯವರಗೆ ರಾಜಯೋಗಗಳಿದ್ದಾಗ ಚಂದ್ರನ ನೆರವು ಅಪಾರವಾದ ಪ್ರಮಾಣವಾದದ್ದು. ಕನಸಿನಲ್ಲಿಯೂ ಯೋಚಿಸಿರದ ರಾಜಪಟ್ಟ ಸಿಗಲು ದಾರಿ ಮಾಡಿಕೊಡುವ ಅದೃಷ್ಟದ ನೆರವನ್ನು ಕರ್ಕಾಟಕ ರಾಶಿಯವರಿಗೆ ಚಂದ್ರ ಒದಗಿಸುತ್ತಾನೆ. ನಮ್ಮ ಮಾಜಿ ಪ್ರಧಾನಿ ಮನಮೋಹನ ಸಿಂಗರನ್ನು ಗಮನಿಸಿ. ಹೆಚ್ಚು ಜನರು ಬೆಂಬಲಿಸಬಹುದಾದ ಸೋನಿಯಾ ಗಾಂಧಿಯವರಾಗಲಿ ರಾಹುಲ್ ಗಾಂಧಿಯವರಾಗಲಿ 2004 ರ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಲಿಲ್ಲ. ಹಾಗಾದರೆ ಮನಮೋಹನರ ಚಂದ್ರನಿಗೆ ಅದೇನು ತೂಕವೆಂಬ ಪ್ರಶ್ನೆ ಏಳುವುದು ಸಹಜವೇ.
ಕುಜ ಗ್ರಹದ ಪ್ರಭಾವ ಮನದೊಳಗೆ ರಾಹುಗ್ರಹದ ಮೂಲಕ ಇನ್ನಿಷ್ಟು ದುಷ್ಟಬುದ್ಧಿಯನ್ನು ಬಿತ್ತಿತು. ಬುಧನು ಅಪಾಯಕಾರಿಯಾಗಿದ್ದನು. ಆದರೂ ಬೌದ್ಧಿಕತೆಯನ್ನು ತುಂಬಿದ್ದ. ಆದರೆ ಕೇತು ಹಾಗೂ ಗುರುಗ್ರಹಗಳು ದೋಷಪೂರ್ಣರಾದುದರಿಂದ ಷೇರುಪೇಟೆಯನು ಭ್ರಷ್ಟರ ಅಡ್ಡೆಯಾಗುವಂತೆ ಭಾರತದಲ್ಲಿ ಹರ್ಷದ್ ಮೆಹ್ತಾ ಕುಟಿಲೋಪಾಯಗಳನ್ನು ಹೆಣೆದ. ವ್ಯತ್ಯಾಸ ಗಮನಿಸಿ ಮನಮೋಹನ್ ಸಿಂಗ್ ರಿಸರ್ವ್ ಬ್ಯಾಂಕನ್ನು, ಆರ್ಥಿಕ ಸಚಿವಾಲಯವನ್ನು ಸಮೃದ್ಧಿಗೊಳಿಸಿದರೆ ಹರ್ಷದ್ ಮೆಹ್ತಾರ ಚಂದ್ರ ಸೂರ್ಯನ ಸುಡು-ಉರಿಯಲ್ಲಿ ಮೋಹಕ ಶಕ್ತಿಯನ್ನು ಒದಗಿಸದೆ ಖಳನಾಯಕ ಪಟ್ಟ ನೀಡಿದ. ಅಪಾರ ಪ್ರಮಾಣದ ಲಾಭವನ್ನು ಚಂದ್ರಷೇರು ಪೇಟೆಯ ನಿಯಂತ್ರಣವನ್ನು ತಾನೇ ಮಾಡುವವನಾಗಿ ನಂತರ ಶುಕ್ರ ದಶಾಕಾಲದ ಏರು ಶ್ರೀಮಂತಿಕೆಯ ಸಂದರ್ಭದಲ್ಲಿ ಜೈಲುಪಾಲೂ ಆಗಿ ನಂತರ ಅಪಾದನೆಗಳ ಸರ್ವತ್ರ ಒತ್ತಡ ವಿಚಾರಣೆ, ಬಂಧನ ಇತ್ಯಾದಿ ಸುಳಿಗಳ ನಡುವೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದ.
Related Articles
ಎಲ್ಲವೂ ನಿಮ್ಮ ಆಡಳಿತದಲ್ಲಿ ಸರಿಯಾಗಿಯೇ ಇದೆ ಎಂದು ಹೊಗಳಿದ ಸಮಯಸಾಧಕರ ಬುದ್ಧಿಜೀಗಳ ಮಾತಿನಮೇಲೇ ನಂಬಿಕೆ ಇರಿಸಿ ಜಗತ್ತಿನ ನಾಯಕರಾಗ ಬಯಸಿದ ಜವಹರಲಾಲ್ ನೆಹರು ಎಂಬ ಹೆಸರು ಹೇಳಿದರೆ ಸಾಕು ಸಿಡಿಯುವ ಮಂದಿ ಎಷ್ಟು ಜನ? ಅಸಂಖ್ಯ ಜನ. ಜನಾನುರಾಗಿ ಪ್ರಧಾನಿಯಾದವರು. ಮೌಂಟ್ ಬ್ಯಾಟನ್ ಪತ್ನಿ ಐರಿನಾ ಜೊತೆ ಐವತ್ತರ ಹರೆಯದರಲ್ಲೂ ಹದಿಹರೆಯದ ಅನುರಾಗ ಹೊಂದಿದ್ದರು. ಸಾರ್ವಜನಿಕವಾಗಿ ಐರೀನಾ ಜೊತೆ ಹರಟುತ್ತಿದ್ದ ಆಪ್ತ ಚಿತ್ರಗಳನ್ನು ನಾವು ಅವರ ಬಗೆಗಿನ ಲೇಖನ ಪುಸ್ತಕ ವರದಿ ಹಾಗೂ ಟೀಕೆಗಳಲ್ಲಿ ಗಮನಿಸಿದ್ದೇವೆ. ಧೈರ್ಯ ಅದೃಷ್ಟ ಆದರೆ ಬದುಕಿನ ಒಳಾಂತರ್ಗತ ಹಲವು ವಿಚಾರಗಳಲ್ಲಿ ನಿವಾರಣೆಗೆ ಸಾಧ್ಯವಿರದ ಅಸಹಾಯಕ ಹತಾಶೆ ಎಲ್ಲಾ ಒಳಿತುಗಳನ್ನು ನಿರ್ಮಿಸಲು ಸಾಧ್ಯವಿದ್ದರೂ ಮಾಡಲಾಗದೆ ಕೈಚೆಲ್ಲಿದ ಅಸಂಗತತೆ ಇತ್ಯಾದಿಗಳೆಲ್ಲವೂ ಚಂದ್ರನ ಫಲ. ನೆಹರು ಕರ್ಕಾಟಕ ರಾಶಿಯ ಗುಂಪಿಗೆ ಸೇರಿದವರು. ಮೋಹಕ ವ್ಯಕ್ತಿತ್ವ. ಆದರೆ ತಮ್ಮ ಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲಾಗದೆ ವಿರೋಧಿಗಳ ಕಟು ಟೀಕೆಗಳನ್ನು ಎದುರಿಸಿದರೂ ನಿರ್ಲಕ್ಷರಾದ ಗುರುತರವಾದ ಆರೋಪ ಹೊತ್ತವೈರುಧ್ಯ. ಚೀನಾವನ್ನು ಹಾಗೂ ಪಾಕಿಸ್ತಾನವನ್ನೂ ಸೂಕ್ತವಾಗಿ ನಿಯಂತ್ರಿಸಲಾಗದೆ. ನಿರಂತರವಾದ ಸಮಸ್ಯೆಯೊಂದನ್ನು ಸೃಷ್ಟಿಸಿದ್ದು ಇವರ ಮೇಲಿನ ಗುರುತರ ಆರೋಪ ಚಲ್ತಾ ಹೈ ಧೋರಣೆಯನ್ನು ಚಂದ್ರ ಒದಗಿಸಿದ್ದ.
Advertisement
ಯಾವಯಾವ ನಕ್ಷತ್ರಗಳು ಕಟಕ ರಾಶಿಯನ್ನು ಹೆಣೆಯುತ್ತದೆಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಪುಷ್ಯಾ ನಕ್ಷತ್ರದ ನಾಲ್ಕೂ ಪಾದಗಳು ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದಗಳು ಕಟಕರಾಶಿಯಲ್ಲಿ ಸಮಾವೇಶಗೊಳ್ಳುತ್ತದೆ. ಪುನರ್ವಸು ನಕ್ಷತ್ರದ ನಾಲ್ಕನೇ ಪಾದದ ಕಟಕ ರಾಶಿಯವರು ಗುರುಗ್ರಹದ ಶುಭಫಲಗಳನ್ನು ಪಡೆಯುತ್ತಾರೆ. ಉತ್ತಮ ವಾಗ್ಮಿಗಳಾಗುವ,ಉತ್ತಮವಾದ ಅಲೌಕಿಕತೆಯ ಕುರಿತಾದ ಧರ್ಮದ ವಿಚಾರವಾಗಿನ ಸಾತ್ವಿಕ ಮಾರ್ಗದರ್ಶನಗಳನ್ನು ಕೊಡುವ ಜನ ಇವರಾಗಿರುತ್ತಾರೆ. ತಮ್ಮ ಮೇಲೆ ಸೂಕ್ತವಾದ ನಿಯಂತ್ರಣ ಹೇರಿಕೊಳ್ಳುವ ಅನನ್ಯತೆ ಇವರಿಗೆ ಸಾಧ್ಯ. ಇವರ ದೌರ್ಬಲ್ಯ ಎಂದರೆ ಎಲ್ಲವನ್ನೂ ಇವರಿಗೆ ತಿಳಿದ ಧರ್ಮದ ನೆರಳನಡಿಯಲ್ಲೇ ನೋಡಿ ಮೈಮರೆಯುವ ಸ್ವಭಾವ. ಚಂದ್ರನಿಗೆ ಅಸ್ತಂಗತ ದೋಷವುಂಟಾದಾಗ ಈ ನಕ್ಷತ್ರದ ಭಾಗದಲ್ಲಿ ಬರುವ ಜನ ಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆ ಅಧಿಕ. ಇನ್ನು ಪುಷ್ಯ ಹಾಗೂ ಆಶ್ಲೇಷಾ ನಕ್ಷತ್ರಗಳನ್ನು ಹೊಂದಿದ ಕಟಕ ರಾಶಿಯ ಜನ ಅದರಲ್ಲೂ ಪುಷ್ಯಾ ನಕ್ಷತ್ರದ ಸಮೂಹ ಗುರು ಗ್ರಹದ ಉಪಸ್ಥಿತಿ ಪುಷ್ಯಾ ನಕ್ಷತ್ರದಲ್ಲೇ ಇದ್ದಲ್ಲಿ ಅಧಿಕವಾದ ಲಾಭ ಪಡೆಯಲು ಸಾಧ್ಯ. ಇಂಥ ಗುರುಗ್ರಹದಿಂದ ಹೆಚ್ಚು ಹೆಚ್ಚು ದೂರಾಲೋಚನೆ ತರ್ಕ, ನಿರ್ದಿಷ್ಟ ಸುಸ್ಥಿರ ಯೋಜನೆಗಳ ಮೂಲಕ ಒಳಿತುಗಳನ್ನು ನಿರ್ಮಿಸಲು ಕಂಕಣಬದ್ಧರಾಗುತ್ತಾರೆ. ತಮ್ಮ ಸ್ಥಿರ ಮಾನಸಿಕ ಬಲದಿಂದ ಹಿಡಿದ ಕೆಲಸವನ್ನು ಛಲಬಿಡದೆ ಸಾಧಿಸುವ ಅನುಪಮ ಸಂಪನ್ನತೆ ಪಡೆದಿರುತ್ತಾರೆ. ಮೈಕೆಲ್ ಗೋರ್ಬಚೇವ್‌ರಂಥ ಅದ್ಭುತ ನಾಯಕ ರಷ್ಯಾವನ್ನು ಕಮ್ಯುನಿಸ್ಟ್ ತತ್ವದಿಂದ ಹೊರಬರಿಸಿ ತನ್ನ ಭಾರಕ್ಕೆ ತಾನೆ ಕುಸಿಯಲಿದ್ದ ಸೋವಿಯತ್ ಯೂನಿಯನ್ ಅನ್ನು ಹಲವು ಪ್ರಜಾಸತ್ತಾತ್ಮಕ ರಾಷ್ಟ್ರಗಳನ್ನಾಗಿ ಆಕಾರಗೊಳ್ಳಲು ವರ್ತಮಾನದಲ್ಲಿ ಯೋಜನೆ ರೂಪಿಸಿದ. ಕಾಲಗರ್ಭದಲ್ಲಿ ಗೋರ್ಬಚೇವ್ ಯೋಜನೆ ಎಂಥ ವಿನಾಶವನ್ನು ತಪ್ಪಿಸಿತು! ಜಾಗತಿಕ ಅಶಾಂತಿಯನ್ನು ದೂರಗೊಳಿಸಿದವು. ಶೀತಲ ಸಮರದ ಕಾರಣಕ್ಕಾಗಿ ಸುಡು ಕೆಂಡಗಳಾಗಿದ್ದ ಅಮೆರಿಕಾ ರಷ್ಯಾ ಈ ಕಾರಣದಂದ ಹತ್ತಿರವಾದವು. ಗೋರ್ಬಚೇವ್ ಗೆ ಆತ್ಮ ಪ್ರಾಮಾಣವನ್ನು ವಾಸ್ತವದಲ್ಲಿ ಜಾಗತಿಕವಾದ ಒಳಿತುಗಳಿಗೆ ಕೊಂಡಿ ಕೂಡಿಸುವ ಅವಶ್ಯಕವಾದ ಶಕ್ತಿ ಒದಗಿದ್ದು ಕರ್ಕಾಟಕ ರಾಶಿಯ ಗುಣಧರ್ಮದ ಫಲವಾಗಿ. ಹಾಗೆಯೇ, ಕಟಕ ರಾಶಿಯವರ ಉಡಾಫೆತನ ಸ್ವಂತ ವ್ಯಕ್ತಿತ್ವಕ್ಕೆ ಮಾರಕವಾಗುವ ರೀತಿಯಲ್ಲಿ ವಿಸ್ತರಿಸಿಕೊಳ್ಳುತ್ತದೆ. ಲಾಲೂ ಪ್ರಸಾದ್ ಯಾದವ್ ಬುದ್ಧಿವಂತರೇ ಆಗಿದ್ದಾರೆ. ಆದರೆ ಒರಟುತನವನ್ನು ತೋರುವುದರ ಮೂಲಕ ತಮ್ಮನ್ನೇ ಪ್ರತಿಷ್ಠಾಪಿಸುವ ವಿಚಾರದಲ್ಲಿ ಕ್ರಿಯಾಶೀಲರಾಗುತ್ತಾರೆ. ಚಂದ್ರನೊಟ್ಟಿಗೆ ಶನೈಶ್ಚರನು ಇದ್ದಿರುವ ಕಾರಣ ಇಂಥ ವಿಚಾರಗಳು ಅಪಾಯಕಾರಿ ಮಟ್ಟಕ್ಕೆ ಏರಿಬಿಡುತ್ತದೆ. ಪಶುಗ್ರಾಸದ ವಿಷಯದ ಹಗರಣ ಅವರನ್ನು ಸೆರೆಮನೆಗೂ ತಳ್ಳಿತು. ಆದರೆ ತನ್ನ ಹೆಂಡತಿಯನ್ನೇ ಮುಖ್ಯಮಂತ್ರಿಯಾಗಿಸಿ ಕೂಡ್ರಿಸಿದರು. ಸಧ್ಯ ತಮ್ಮ ಇಬ್ಬರು ಮಕ್ಕಳನ್ನು ಬಿಹಾರದಲ್ಲಿ ಮಂತ್ರಿಗಳನ್ನಾಗಿಸಿದ್ದಾರೆ. ಆತನು ಮೂಕ ಪ್ರೇಕ್ಷಕರಾಗುತ್ತಾರೆ. ನಮ್ಮ ಸಂವಿಧಾನದಲ್ಲಿನ ಚೌಕಟ್ಟನ್ನು ಮೀರುವ ಕೆಲಸವಲ್ಲವಾದರೂ ಭಂಡತನವನ್ನು ಪ್ರದರ್ಶಿಸುವ ಅನುಚಿತತೆ ಸಂಭವಿಸಬಾರದು. ಅನಂತ ಶಾಸ್ತ್ರಿ