Advertisement

40ಎಂ ಗಾತ್ರದ ಕ್ಯಾನ್ಸರ್ ಗಡ್ಡೆ ಹೊರತೆಗೆದ ವೈದ್ಯರು

06:22 PM Feb 06, 2021 | Team Udayavani |

ತುಮಕೂರು: ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಗೆ ಕಂಡುಬಂದಿದ್ದ ಅಂಡಾಶಯದ ಕ್ಯಾನ್ಸರ್‌ನ್ನು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸುವಲ್ಲಿ ವೈದ್ಯ ತಂಡ ಯಶಸ್ವಿಯಾಗಿದೆ ಎಂದು ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ನಿರ್ದೇಶಕ ಹಾಗು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ಶಸ್ತ್ರಚಿಕಿತ್ಸೆ ಮೂಲಕ 40ಎಂ(ಮೆಜರ್‌) ಗಾತ್ರದ ಕ್ಯಾನ್ಸರ್‌ ಗಡ್ಡೆ ತೆಗೆದು ಹಾಕಲಾಗಿದೆ.ವೆಚ್ಚವಿಲ್ಲದೆ ಚಿಕಿತ್ಸೆ ನಡೆಸಲಾಗಿದ್ದು, ಮಹಿಳೆ ಈಗ ಗುಣಮುಖರಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಗ್ರಾಮಾಂತರ ಪ್ರದೇಶದ 55 ವರ್ಷದ ಮಹಿಳೆ ಅನಾರೋಗ್ಯದಿಂದ ತಪಾಸಣೆಗಾಗಿ ಆಸ್ಪತ್ರೆಗೆ ಬಂದಾಗ ಅಪರೂಪದ ಅಂಡಾಶಯದ ಕ್ಯಾನ್ಸರ್‌ ಕಂಡುಬಂತು. ಮಹಿಳೆಯನ್ನು ಇತ್ತೀಚಿಗೆ ಆರಂಭವಾಗಿರುವ ಗ್ರಂಥಿ ವಿಜ್ಞಾನ (ಅಂಕೊಲಜಿ) ವಿಭಾಗದಲ್ಲಿ ಪರೀಕ್ಷೆ ಒಳಪಡಿಸಿ, ಗಡ್ಡೆಯ ಗಾತ್ರ ಮತ್ತು ರೋಗದ ತೀವ್ರತೆಯನ್ನು ಖಚಿತಪಡಿಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಇದನ್ನೂ ಓದಿ :ಸದಾಶಿವ ವರದಿ ಜಾರಿಗೆ ಒತ್ತಾಯಿಸಿ ರಥಯಾತ್ರೆ

ಅತಿ ದೊಡ್ಡದಾದ 40ಎಂ ಗಾತ್ರದ ಕ್ಯಾನ್ಸರ್‌ ಗಡ್ಡೆ ಇರುವುದಾಗಿ ಖಚಿತಪಡಿಸಲಾಯಿತು. ನಂತರ 5 ಘಂಟೆಯ ಕಠಿಣವಾದ ಶಸ್ತ್ರ ಚಿಕಿತ್ಸೆಯ ಬಳಿಕ, ಕ್ಯಾನ್ಸರ್‌ ಗೆಡ್ಡೆಯನ್ನು ಸಂಪೂರ್ಣವಾಗಿ ಹೊರತೆಗೆಯಲಾಯಿತು ಎಂದು ಹೇಳಿದ್ದಾರೆ. ವೆಚ್ಚವಿಲ್ಲದೆ ಚಿಕಿತ್ಸೆ: ಈ ರೋಗಿ ಗ್ರಾಮಾಂತರ ಪ್ರದೇಶದಿಂದ ಬಂದಿದ್ದು ಆರ್ಥಿಕವಾಗಿ ಹಿಂದುಳಿದವ ರಾ ಗಿ ದ್ದರಿಂದ ಸರ್ಕಾರದ ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲಿ ರೋಗಿಗೆ ಯಾವುದೇ ವೆಚ್ಚವಿಲ್ಲದೆ, ಶಸ್ತ್ರ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಯಿತು. ಶ್ರೀ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಸರ್ಕಾರದ ಆರೋಗ್ಯ ಯೋಜನೆಗಳಿಗೆ ಚಿಕಿತ್ಸೆ ಲಭ್ಯವಿದ್ದು, ಇದೀಗ ಕ್ಯಾನ್ಸರ್‌ ಸಂಬಂಧಿತ ಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next